ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ ಶೇ.6 ರಷ್ಟು ಕುಸಿತ! 

ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಹಣ 2019 ನೇ ಸಾಲಿನಲ್ಲಿ ಶೇ.6 ರಷ್ಟು ಕುಸಿತ ಕಂಡಿದೆ.
ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ ಶೇ.6 ರಷ್ಟು ಕುಸಿತ!
ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ ಶೇ.6 ರಷ್ಟು ಕುಸಿತ!

ನವದೆಹಲಿ: ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಹಣ 2019 ನೇ ಸಾಲಿನಲ್ಲಿ ಶೇ.6 ರಷ್ಟು ಕುಸಿತ ಕಂಡಿದೆ.

ಸ್ವಿಟ್ಜರ್ಲ್ಯಾಂಡ್ ನ ಕೇಂದ್ರ ಬ್ಯಾಂಕ್ ನೀಡಿರುವ ಅಂಕಿ-ಅಂಶಗಳ ಪ್ರಕಾರ 2019 ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಭಾರತದ ಮೂಲದ ಬ್ರಾಂಚ್ ಗಳ ಮೂಲಕ ಇಟ್ಟಿರುವ ಹಣ 899 ಮಿಲಿಯನ್ ಸ್ವಿಸ್ ಫ್ರಾಂಕ್ಸ್ ಗೆ ಇಳಿಕೆಯಾಗಿದೆ. ಸತತವಾಗಿ 2ನೇ ವರ್ಷ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ ಕುಸಿತ ಕಂಡಿದ್ದು, ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಪ್ರಮಾಣದ ಹಣ ದಾಖಲಾಗಿದೆ.

ಈ ಅಂಕಿ-ಅಂಶಳಲ್ಲಿರುವ ಹಣದ ಪೈಕಿ ಭಾರತದಲ್ಲಿರುವ ಸ್ವಿಸ್ ಬ್ಯಾಂಕ್ ಗಳದ್ದೂ ಸೇರಿದ್ದು, ಠೇವಣಿಯೇತರ ಬಾಧ್ಯತೆಯ ಡಾಟಾವೂ ಸೇರ್ಪಡೆಯಾಗಿದೆ. 2007 ರ ಅಂತ್ಯದಲ್ಲಿ ಸ್ವಿಸ್ ನಲ್ಲಿದ್ದ ಭಾರತೀಯರ ಹಣ ಅತಿ ಹೆಚ್ಚು ಅಂದರೆ 2.3 ಬಿಲಿಯನ್ ಡಾಲರ್ (9,000 ಕೋಟಿಗೂ ಅಧಿಕ) ನಷ್ಟಾಗಿತ್ತು. ಇತಿಹಾಸದಲ್ಲೇ ಇದು ಅತ್ಯಧಿಕ ದಾಖಲೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com