ಪರ್ಯಾಯ ಮಾರ್ಗ ಕಂಡುಕೊಳ್ಳುವವರೆಗೆ ಚೀನಾ ಆಮದು ಮುಂದುವರಿಯುವ ಸಾಧ್ಯತೆ ಇದೆ: ಆಟೋ, ಫಾರ್ಮಾ ಕಂಪನಿಗಳು

ಚೀನಾ ವಸ್ತುಗಳಿಗೆ ಪರ್ಯಾಯ ವಸ್ತುಗಳನ್ನು ಕಂಡುಕೊಳ್ಳುವವರೆಗೆ ಚೀನಾದ ಆಮದು ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಆಟೋಮೊಬೈಲ್ ಮತ್ತು ಔಷಧಿ ಉದ್ಯಮದ ಪ್ರಮುಖರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚೀನಾ ವಸ್ತುಗಳಿಗೆ ಪರ್ಯಾಯ ವಸ್ತುಗಳನ್ನು ಕಂಡುಕೊಳ್ಳುವವರೆಗೆ ಚೀನಾದ ಆಮದು ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಆಟೋಮೊಬೈಲ್ ಮತ್ತು ಔಷಧಿ ಉದ್ಯಮದ ಪ್ರಮುಖರು ತಿಳಿಸಿದ್ದಾರೆ.

ಇತ್ತೀಚಿಗೆ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಮಲ್ಲಯುದ್ಧದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ದೇಶದಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ ಅಭಿಯಾನ ಆರಂಭವಾಗಿದ್ದು, ಆಮದನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ.

ಭಾರತೀಯ ಆಟೋ ಮತ್ತು ಫಾರ್ಮಾ ಕೈಗಾರಿಕೆಗಳು ಚೀನಾದಿಂದ ಹಲವಾರು ನಿರ್ಣಾಯಕ ಘಟಕಗಳು ಮತ್ತು ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತವೆ. ಈಗ ದಿಢೀರ್ ಆಮದು ಸ್ಥಗಿತಗೊಳಿಸಿದರೆ ಈ ಕಂಪನಿಗಳು ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವವರೆಗೆ ಚೀನಾ ಅಮದು ಮುಂದುವೆರೆಯು ನಿರೀಕ್ಷೆ ಇದೆ.

ಪ್ರಸ್ತುತ, ಚೀನಾದ ಮೂಲದ ಕಂಪನಿಗಳು ದೇಶೀಯ ಉದ್ಯಮಕ್ಕೆ ವಾಹನ ಘಟಕಗಳ ಪ್ರಮುಖ ಪೂರೈಕೆದಾರರಾಗಿ ಮುಂದುವರೆದಿದೆ.

2018-19ರಲ್ಲಿ ಭಾರತವು 17.6 ಬಿಲಿಯನ್ ಡಾಲರ್ ಮೌಲ್ಯದ ಆಟೋ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡಿದೆ, ಅದರಲ್ಲಿ ಶೇ. 27ರಂದು - 4.75 ಬಿಲಿಯನ್ ಡಾಲರ್ - ಚೀನಾದಿಂದ ಬಂದ ವಸ್ತುಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com