ಭಾರತದ ವಿದೇಶಿ ವಿನಿಮಯ 2 ಬಿಲಿಯನ್ ಡಾಲರ್ ನಷ್ಟು ಕುಸಿತ!

ಭಾರತದ ವಿದೇಶಿ ವಿನಿಮಯ 2 ಬಿಲಿಯನ್ ಡಾಲರ್ ನಷ್ಟು ಕುಸಿತ ಕಂಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದ ವಿದೇಶಿ ವಿನಿಮಯ ಮೀಸಲು 2 ಬಿಲಿಯನ್ ಡಾಲರ್ ನಷ್ಟು ಕುಸಿತ ಕಂಡಿದೆ. 

ಜೂ.19 ರಂದು ಅಂತ್ಯಗಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಕುಸಿತ ಕಂಡಿದೆ. ಆರ್ ಬಿಐ ನ ವೀಕ್ಲಿ ಸ್ಟಾಟಿಸ್ಟಿಕಲ್ ಸಪ್ಲಿಮೆಂಟ್ ನ ಪ್ರಕಾರ ಭಾರತದ ಒಟ್ಟಾರೆ ವಿದೇಶಿ ವಿನಿಮಯ ಮೀಸಲು $507.644 ರಿಂದ $505.566 ಬಿಲಿಯನ್ ಡಾಲರ್ ಗೆ ಇಳಿಕೆ ಕಂಡಿದೆ.

ಇದೇ ವೇಳೆ ಚಿನ್ನದ ಮೀಸಲು ಸಹ ಇಳಿಕೆಯಾಗಿದ್ದು, $35.8 ಬಿಲಿಯನ್ ನಿಂದ $32.815 ಬಿಲಿಯನ್ ಗೆ ಇಳಿಕೆಯಾಗಿದೆ. 
ಇನ್ನು ಐಎಂಎಫ್ ನಲ್ಲಿ ದೇಶದ ರಿಸರ್ವ್ ಪೊಸಿಷನ್ ಸಹ 16 ಮಿಲಿಯನ್ ಡಾಲರ್ ನಷ್ಟು ಇಳಿಕೆಯಾಗಿದ್ದು 4.264 ಬಿಲಿಯನ್ ಡಾಲರ್ ನಷ್ಟಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com