ಶೇ.95 ರಷ್ಟು ಯಂತ್ರಗಳು ಈಗ ಮೇಡ್ ಇನ್ ಇಂಡಿಯಾ!: ಆದರೆ ಅದರ ಉಪಕರಣಗಳಲ್ಲ!

ಭಾರತದಲ್ಲಿ ಮಾರಾಟವಾಗುವ ಶೇ.95 ರಷ್ಟು ಗ್ರಾಹಕ ಎಲೆಕ್ಟ್ರಾನಿಕ್ಸ್ ಹಾಗೂ ಯಂತ್ರಗಳು ಸ್ಥಳೀಯವಾಗಿಯೇ ಉತ್ಪಾದನೆಯಾಗುತ್ತಿವೆ ಆದರೆ ಅವುಗಳಿಗೆ ಅಗತ್ಯವಿರುವ ಕಾಂಪೊನೆಂಟ್ (ಘಟಕ)ಗಳಿಗೆ ಮಾತ್ರ ಶೇ.25-70 ರಷ್ಟು ಚೀನಾ ಮೇಲೆಯೇ ಅವಲಂಬನೆ ಇದೆ.
ಶೇ.95 ರಷ್ಟು ಯಂತ್ರಗಳು ಈಗ ಮೇಡ್ ಇನ್ ಇಂಡಿಯಾ!: ಆದರೆ ಕಾಂಪೊನೆಂಟ್ ಗಳಲ್ಲ!
ಶೇ.95 ರಷ್ಟು ಯಂತ್ರಗಳು ಈಗ ಮೇಡ್ ಇನ್ ಇಂಡಿಯಾ!: ಆದರೆ ಕಾಂಪೊನೆಂಟ್ ಗಳಲ್ಲ!

ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಶೇ.95 ರಷ್ಟು ಗ್ರಾಹಕ ಎಲೆಕ್ಟ್ರಾನಿಕ್ಸ್ ಹಾಗೂ ಯಂತ್ರಗಳು ಸ್ಥಳೀಯವಾಗಿಯೇ ಉತ್ಪಾದನೆಯಾಗುತ್ತಿವೆ ಆದರೆ ಅವುಗಳಿಗೆ ಅಗತ್ಯವಿರುವ ಕಾಂಪೊನೆಂಟ್ (ಘಟಕ)ಗಳಿಗೆ ಮಾತ್ರ ಶೇ.25-70 ರಷ್ಟು ಚೀನಾ ಮೇಲೆಯೇ ಅವಲಂಬನೆ ಇದೆ.

ಕನ್‌ಸ್ಯೂಮರ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಅಪ್ಲೈಯನ್ಸ್ ಮಾನ್ಯುಫಾಕ್ಚರರ್ಸ್‌ ಅಸೋಸಿಯೇಶನ್(ಸಿಇಎಎಂಎ) ನೀಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ ತಯಾರಾಗುವ ಬಹುತೇಕ ವಸ್ತುಗಳು ಸ್ಥಳೀಯವಾಗಿಯೇ ಉತ್ಪಾದನೆಯಾದರೂ ಸಹ ಅವುಗಳಿಗೆ ಅಗತ್ಯವಿರುವ ಕಾಂಪೊನೆಂಟ್ ಗಳಿಗೆ ಶೇ.25-70 ರಷ್ಟು ಚೀನಾದ ಅವಲಂಬನೆ ಇದ್ದೇ ಇದೆ, ಅವುಗಳನ್ನು ರಾತ್ರೋ ರಾತ್ರಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಕರೆ ವ್ಯಾಪಕಗೊಳ್ಳುವುದಕ್ಕೂ ಮುನ್ನವೇ ಸಂಸ್ಥೆಗಳು ಚೀನಾಕ್ಕೆ ಪರ್ಯಾಯವನ್ನು ಹುಡುಕುತ್ತಿದ್ದವು. ಇದಕ್ಕೆ ಕೋವಿಡ್-19, ಲಾಕ್ ಡೌನ್ ನ ಪರಿಸ್ಥಿತಿಯಿಂದ ಉಂಟಾದ ಪೂರೈಕೆಯಲ್ಲಿನ ವ್ಯತ್ಯಾಸವೂ ಕಾರಣ ಎಂದು ಸಿಇಎಎಂಎ ಹೇಳಿದೆ.

"ಕಳೆದ 2-3 ವರ್ಷಗಳ ಅವಧಿಯಲ್ಲಿ ಎಲ್ಲಾ ವಿಭಾಗಗಳಲ್ಲಿಯೂ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಾಗಿದೆ. ಸಿದ್ಧಪಡಿಸಿದ ವಸ್ತುಗಳ ಎಲ್ಲಾ ವಿಭಾಗದಲ್ಲಿಯೂ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ" ಎಂದು ಸಿಇಎಎಂಎ ಅಧ್ಯಕ್ಷ ಕಮಲ್ ನಂದಿ ಹೇಳಿದ್ದಾರೆ.

ಹವಾನಿಯಂತ್ರಕಗಳ ವಿಭಾಗದಲ್ಲಿ ಶೇ.30 ರಷ್ಟು ಇನ್ನೂ ಆಮದಾಗುತ್ತಿದೆ. ಲಾಕ್ ಡೌನ್ ಇಲ್ಲದೇ ಇದ್ದಿದ್ದರೆ ಈ ಪ್ರಮಾಣ ಇನ್ನೂ ಕಡಿಮೆಯಾಗಿರುತ್ತಿತ್ತು. ಮುಂದಿನ ಋತುವಿನಲ್ಲಿ ಇದು ಇನ್ನಷ್ಟು ಕಡಿಮೆಯಾಗಲಿದೆ ಎಂದು ನಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ ಮಷೀನ್ ವಿಭಾಗದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಚೀನಾ ಆಮದು ಮಾಡಿಕೊಳ್ಳಲಾಗುತ್ತಿದ್ದರೆ, ಹವಾ ನಿಯಂತ್ರಕದ ವಿಭಾಗದ ಹೆಚ್ಚು ಚೀನಾ ಆಮದುಗಳ ಮೇಲೆ ಅತಿ ಹೆಚ್ಚು ಅವಲಂಬನೆಯಾಗಿವೆ, ಸ್ಥಳೀಯವಾಗಿ ಕಾಂಪೊನೆಂಟ್ ಗಳ ಲಭ್ಯತೆಯ ವಾತಾವರಣ ಸೃಷ್ಟಿಸಬೇಕು, ಚೀನಾದ ಮೇಲಿನ ಅವಲಂಬನೆಯನ್ನು ರಾತ್ರೋ ರಾತ್ರಿಬಿಡುವುದಕ್ಕೆ ಸಾಧ್ಯವಿಲ್ಲ ಇದಕ್ಕೆ ಒಂದೆರಡು ವರ್ಷಗಳ ಕಾಲ ಬೇಕಾಗುತ್ತದೆ ಎಂದು ಗಾಜ್ರೇಜ್ ಅಪ್ಲೈಯನ್ಸ್ ನ ಬ್ಯುಸಿನೆಸ್ ವಿಭಾಗದ ಮುಖ್ಯಸ್ಥರಾಗಿರುವ ನಂದಿ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com