ಕೊವಿಡ್-19 ಪಿಪಿಇ ಕಿಟ್‌ಗಳ ಸೀಮಿತ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ

ರಫ್ತು ಮಾನದಂಡಗಳನ್ನು ಭಾಗಶಃ ಸಡಿಲಿಸುತ್ತಿರುವ ಕೇಂದ್ರ ಸರ್ಕಾರ, ಸೋಮವಾರ 50 ಲಕ್ಷ ಯುನಿಟ್‌ಗಳ ರಫ್ತು ಕೋಟಾದೊಂದಿಗೆ ಕೊವಿಡ್-19 ವೈಯಕ್ತಿಕ ಸಂರಕ್ಷಣಾ ಸಲಕರಣೆಗಳ(ಪಿಪಿಇ) ವೈದ್ಯಕೀಯ ಕವಚಗಳನ್ನು ರಫ್ತು ಮಾಡಲು ಅನುಮತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಫ್ತು ಮಾನದಂಡಗಳನ್ನು ಭಾಗಶಃ ಸಡಿಲಿಸುತ್ತಿರುವ ಕೇಂದ್ರ ಸರ್ಕಾರ, ಸೋಮವಾರ 50 ಲಕ್ಷ ಯುನಿಟ್‌ಗಳ ರಫ್ತು ಕೋಟಾದೊಂದಿಗೆ ಕೊವಿಡ್-19 ವೈಯಕ್ತಿಕ ಸಂರಕ್ಷಣಾ ಸಲಕರಣೆಗಳ(ಪಿಪಿಇ) ವೈದ್ಯಕೀಯ ಕವಚಗಳನ್ನು ರಫ್ತು ಮಾಡಲು ಅನುಮತಿ ನೀಡಿದೆ.

ಈ ಹಿಂದೆ ಪಿಪಿಇ ಕಿಟ್ ಗಳ ರಫ್ತು ನಿಷೇಧಿಸಲಾಗಿತ್ತು. ಈಗ ಸರ್ಕಾರ ನಿಷೇಧ ತೆರವುಗೊಳಿಸಿದ್ದು, ಕೆಲವು ನಿರ್ಬಂಧ ವಿಧಿಸಿದೆ.

ಈ ಸಂಬಂಧ ವಿದೇಶಿ ವ್ಯಾಪಾರ ನಿರ್ದೇಶನಾಲಯ(ಡಿಜಿಎಫ್‌ಟಿ) ಇಂದು ಅಧಿಸೂಚನೆ ಹೊರಡಿಸಿದ್ದು, ಕೊವಿಡ್-19 ಪಿಪಿಇ ವೈದ್ಯಕೀಯ ಕವಚಗಳನ್ನು ತಿಂಗಳಿಗೆ 50 ಲಕ್ಷ ಯೂನಿಟ್ ರಫ್ತು ಮಾಡಲು ಅನುಮತಿ ನೀಡಲಾಗಿದ್ದು, ಅರ್ಹ ಅರ್ಜಿದಾರರಿಗೆ ರಫ್ತು ಪರವಾನಗಿ ನೀಡಲಾಗುವುದು ಎಂದು ತಿಳಿಸಿದೆ.

ಪಿಪಿಇ ಕಿಟ್ ರಫ್ತಿಗೆ ಅನುಸರಿಸಬೇಕಾದ ಮಾನದಂಡಗಳನ್ನು ಟ್ರೇಡ್ ನೋಟಿಸ್‌ನಲ್ಲಿ ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು ಡಿಜಿಎಫ್ ಟಿ ತಿಳಿಸಿದೆ.

ಮೇಕ್ ಇನ್ ಇಂಡಿಯಾ ರಫ್ತು ಉತ್ತೇಜಿಸುವುದಕ್ಕಾಗಿ ಕೊವಿಡ್-19 ಪಿಪಿಇ ವೈದ್ಯಕೀಯ ಕವಚಗಳನ್ನು ಮಾಸಿಕ 50 ಲಕ್ಷ ಯೂನಿಟ್ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಲಕ್ಷಾಂತರ ಪಿಪಿಇ ಕಿಟ್‌ ಉತ್ಪಾದನೆಯಾಗುತ್ತಿದ್ದರೂ, ಅದನ್ನು ರಫ್ತು ಮಾಡುವುದಕ್ಕೆ ಅವಕಾಶ ನೀಡಿಲ್ಲ ಎಂದು ಉತ್ಪಾದಕರು ಈ ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com