ತೈಲೋತ್ಪನ್ನಗಳ ದರ ಏರಿಕೆ: ಇಂದು ಅಲ್ಪ ಪ್ರಮಾಣದ ಏರಿಕೆ ಕಂಡ ಪೆಟ್ರೋಲ್‌, ಡೀಸೆಲ್‌ ದರ

ಆಗಸದತ್ತ ಮುಖಮಾಡಿರುವ ತೈಲೋತ್ಪನ್ನಗಳ ದರ ಇಂದೂ ಕೂಡ ಏರಿಕೆಯಾಗಿದೆಯಾದರೂ ಅತ್ಯಲ್ಪ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ.
ಪೆಟ್ರೋಲ್, ಡೀಸೆಲ್ ದರ ಏರಿಕೆ: ಅನುಕ್ರಮವಾಗಿ ಪ್ರತಿ ಲೀಟರ್ ಗೆ 1.67, 7.10 ರೂಪಾಯಿ ಹೆಚ್ಚಳ
ಪೆಟ್ರೋಲ್, ಡೀಸೆಲ್ ದರ ಏರಿಕೆ: ಅನುಕ್ರಮವಾಗಿ ಪ್ರತಿ ಲೀಟರ್ ಗೆ 1.67, 7.10 ರೂಪಾಯಿ ಹೆಚ್ಚಳ

ನವದೆಹಲಿ: ಆಗಸದತ್ತ ಮುಖಮಾಡಿರುವ ತೈಲೋತ್ಪನ್ನಗಳ ದರ ಇಂದೂ ಕೂಡ ಏರಿಕೆಯಾಗಿದೆಯಾದರೂ ಅತ್ಯಲ್ಪ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ.

ಇಂದು ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 0.05 ಪೈಸೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 0.13 ಪೈಸೆ  ಹೆಚ್ಚಳ ಕಂಡುಬಂದಿದೆ.

ಪ್ರಸ್ತುತ ಬೆಳಗ್ಗೆ ಬೆಂಗಳೂರಿನಲ್ಲಿ ಡೀಸೆಲ್‌ ಬೆಲೆ 13 ಪೈಸೆ ಹೆಚ್ಚಳದೊಂದಿಗೆ  76.58  ರೂಗೆ ಏರಿಕೆಯಾಗಿದ್ದು, ಪೆಟ್ರೋಲ್‌ ಬೆಲೆ 5 ಪೈಸೆ ಏರಿಕೆಯೊಂದಿಗೆ 83.045 ರೂ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಡೀಸೆಲ್‌ ದರ 80.53 ಮತ್ತು ಪೆಟ್ರೋಲ್‌ ದರ 80.43ಕ್ಕೆ ಏರಿಕೆಯಾಗಿದೆ. 

ಕೇಂದ್ರ ಸರ್ಕಾರ ಮಾರ್ಚ್‌ 14ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ರೂ 3 ಹೆಚ್ಚಿಸಿತು. ಮತ್ತೆ ಮೇ 5ರಂದು ಪ್ರತಿ ಲೀಟರ್‌ ಪೆಟ್ರೋಲ್‌ ಮೇಲಿನ ತೆರಿಗೆ ರೂ10 ಹಾಗೂ ಡೀಸೆಲ್‌ಗೆ ರೂ13 ಹೆಚ್ಚಳ ಮಾಡಿತ್ತು. ಇದರಿಂದಾಗಿ ಸರ್ಕಾರಕ್ಕೆ ರೂ2 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ವರಮಾನ ಸಂಗ್ರಹವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com