ಟಿವಿ ಸೆಟ್ ಗಳು, ಪವರ್ ಬ್ಯಾಂಕ್ ಗಳ ಮೇಲಿನ ಜಿಎಸ್ ಟಿ ಪ್ರಯೋಜನಗಳನ್ನು ತಲುಪಿಸದ ಸ್ಯಾಮ್ ಸಂಗ್ ಗೆ 37ಲಕ್ಷ  ದಂಡ!

ಟೆಲಿವಿಷನ್ ಸೆಟ್‌ಗಳು ಮತ್ತು ಪವರ್ ಬ್ಯಾಂಕುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸದ ಕಾರಣಕ್ಕಾಗಿ ಸ್ಯಾಮ್‌ಸಂಗ್ ಇಂಡಿಯಾ ಕಂಪನಿಗೆ ರಾಷ್ಟ್ರೀಯ ಲಾಭೋದ್ದೇಶ ವಿರೋಧಿ ಪ್ರಾಧಿಕಾರ (ಎನ್‌ಎಎ) 37.85 ಲಕ್ಷ ರೂ. ದಂಡವನ್ನು ವಿಧಿಸಿದೆ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ನವದೆಹಲಿ: ಟೆಲಿವಿಷನ್ ಸೆಟ್‌ಗಳು ಮತ್ತು ಪವರ್ ಬ್ಯಾಂಕುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸದ ಕಾರಣಕ್ಕಾಗಿ ಸ್ಯಾಮ್‌ಸಂಗ್ ಇಂಡಿಯಾ ಕಂಪನಿಗೆ ರಾಷ್ಟ್ರೀಯ ಲಾಭೋದ್ದೇಶ ವಿರೋಧಿ ಪ್ರಾಧಿಕಾರ (ಎನ್‌ಎಎ) 37.85 ಲಕ್ಷ ರೂ. ದಂಡವನ್ನು ವಿಧಿಸಿದೆ.

ಸ್ಥಳೀಯ ವಲಯಗಳ ಮೂಲಕ ರಾಹುಲ್ ಶರ್ಮಾ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. 2019 ಜನವರಿಯಿಂದ ಜಾರಿಯಾಗಿರುವಂತೆ  ಟೆಲಿವಿಷನ್ ಸೆಟ್ ಗಳ ಮೇಲಿನ ಜಿಎಸ್ ಟಿ ದರವನ್ನು ಶೇ, 28 ರಿಂದ 18ಕ್ಕೆ ಇಳಿಸಿದ್ದರೂ  32 ಇಂಚು ಎಲ್ ಇಡಿ ಟಿವಿ 32ಎಫ್ ಹೆಚ್ 4003 ಮಾರಾಟ ದರವನ್ನು ಕಡಿಮೆ ಮಾಡದೆ ಇರುವುದಕ್ಕೆ ಎಲೆಕ್ಟ್ರಾನಿಕ್ ತಯಾರಿಕಾ ವಸ್ತುಗಳ ಕಂಪನಿಯಾದ ಸ್ಯಾಮ್ ಸಂಗ್ ಇಂಡಿಯಾ ಮೇಲೆ ಭಾರಿ ದಂಡವನ್ನು ವಿಧಿಸಲಾಗಿದೆ.ಪವರ್ ಬ್ಯಾಂಕ್ ದರವನ್ನು ಕಡಿತಗೊಳಿಸದೆ ಇರುವುದಕ್ಕೆ ಹೆಚ್ಟುವರಿಯಾಗಿ 29 ಸಾವಿರದ 736 ರೂ. ದಂಡವನ್ನು ವಿಧಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. 

ದರ ಕಡಿತದಿಂದ ಪ್ರಭಾವಿತವಾದ ಉತ್ಪನ್ನಗಳ ಬೆಲೆಗಳು ಶೀಘ್ರವಾಗಿ ಕಡಿಮೆಯಾಗಲಿಲ್ಲ, ಆದ್ದರಿಂದ ಸಿಜಿಎಸ್ಟಿ ಕಾಯ್ದೆ 2017 ರ ಸೆಕ್ಷನ್ 171 (1) ಅನ್ನು ಉಲ್ಲಂಘಿಸಿದೆ "ಎಂದು ಎನ್ಎಎ ಫೆಬ್ರವರಿ 27 ರ ತನ್ನ ಆದೇಶದಲ್ಲಿ ತಿಳಿಸಿದೆ, ಅದರ ನಕಲನ್ನು ಈ ಪ್ರಕಟಣೆಯಿಂದ ಪರಿಶೀಲಿಸಲಾಗಿದೆ.

ಈ ಪ್ರಕರಣವನ್ನು ಅನಿಯಂತ್ರಿತ ಎಂದು ಕರೆದಿರುವ  ಸ್ಯಾಮ್‌ಸಂಗ್, ಈ ಟಿವಿ ಮಾದರಿಯನ್ನು ಅಮೆಜಾನ್.ಇನ್ ಎನ್ನುವ ಮೂರನೇ ವ್ಯಕ್ತಿಯ ಮಾರುಕಟ್ಟೆಯಲ್ಲಿ  ಮಾರಾಟ ಮಾಡಲಾಗುತ್ತಿದೆ. ಸ್ಯಾಮ್‌ಸಂಗ್ ಈ ಟಿವಿಗಳನ್ನು ಪೂರೈಸುತ್ತಿಲ್ಲ ಎಂದು ವಾದಿಸಿದೆ.  ಜಂಬೊ ಡಿಸ್ಟ್ರಿಬ್ಯೂಟರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇಪಿ ಎಲೆಕ್ಟ್ರಾನಿಕ್ ಪ್ಯಾರಡೈಸ್ ಪ್ರೈವೇಟ್ ಲಿಮಿಟೆಡ್ ಟಿವಿ ಸೆಟ್‌ಗಳ ಪೂರೈಕೆದಾರರಾಗಿದ್ದರು ಎಂದು ಸ್ಯಾಮ್‌ಸಂಗ್ ತಿಳಿಸಿದೆ.

ಆದೇಶವನ್ನು ಅಂಗೀಕರಿಸಿದ ಮೂರು ತಿಂಗಳೊಳಗೆ ಸ್ಯಾಮ್‌ಸಂಗ್ ಈ ಮೊತ್ತವನ್ನು ಜಮೆ ಮಾಡಬೇಕಾಗಿದೆ.  ಈ ಮೊತ್ತವನ್ನು ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿಗೆ ಸಂಬಂಧಿಸಿದ ಆಯುಕ್ತರು ವಸೂಲಿ ಮಾಡುತ್ತಾರೆ ಎಂದು ಫೆಬ್ರವರಿ 27 ರ ಆದೇಶದಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com