ಏರ್ ಇಂಡಿಯಾದಲ್ಲಿ ಶೇ 100 ಪಾಲು ಹೊಂದಲು ಅನಿವಾಸಿ ಭಾರತೀಯರಿಗೆ ಸರ್ಕಾರ ಅನುಮತಿ

ಏರ್ ಇಂಡಿಯಾದಲ್ಲಿ ಶೇ 100 ರಷ್ಟು ಪಾಲನ್ನು ಹೊಂದಲು ಅನಿವಾಸಿ ಭಾರತೀಯರಿಗೆ ಸರ್ಕಾರ ಬುಧವಾರ ಅನುಮತಿ ನೀಡಿದೆ. ವಾಯುಯಾನ ಸಂಸ್ಥೆಯ ಶೇ 100 ರಷ್ಟು ಪಾಲನ್ನು ಸರ್ಕಾರ ಮಾರಾಟ ಮಾಡಲು ಯೋಜಿಸುತ್ತಿರುವ ಸಮಯದಲ್ಲೇ ಈ ನಿರ್ಧಾರ ಹೊರಬಿದ್ದಿದೆ.
ಏರ್ ಇಂಡಿಯಾ
ಏರ್ ಇಂಡಿಯಾ

ನವದೆಹಲಿ: ಏರ್ ಇಂಡಿಯಾದಲ್ಲಿ ಶೇ 100 ರಷ್ಟು ಪಾಲನ್ನು ಹೊಂದಲು ಅನಿವಾಸಿ ಭಾರತೀಯರಿಗೆ ಸರ್ಕಾರ ಬುಧವಾರ ಅನುಮತಿ ನೀಡಿದೆ. ವಾಯುಯಾನ ಸಂಸ್ಥೆಯ ಶೇ 100 ರಷ್ಟು ಪಾಲನ್ನು ಸರ್ಕಾರ ಮಾರಾಟ ಮಾಡಲು ಯೋಜಿಸುತ್ತಿರುವ ಸಮಯದಲ್ಲೇ ಈ ನಿರ್ಧಾರ ಹೊರಬಿದ್ದಿದೆ.

ಏರ್ ಇಂಡಿಯಾದಲ್ಲಿ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಶೇ 100 ರಷ್ಟು ಪಾಲನ್ನು ಹೊಂದಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ವಾಯುಯಾನ ಸಂಸ್ಥೆಯಲ್ಲಿ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಶೇ 100 ರಷ್ಟು ಹೂಡಿಕೆಗೆ ಅವಕಾಶ ನೀಡುವುದು ಎಸ್‌ಒಇಸಿ ಮಾನದಂಡಗಳ ಉಲ್ಲಂಘನೆಯಾಗುವುದಿಲ್ಲ, ಅಲ್ಲದೆ ಎನ್‌ಆರ್‌ಐ ಹೂಡಿಕೆಗಳನ್ನು ದೇಶೀಯ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಜಾಗತಿಕವಾಗಿ ವಿಮಾನಯಾನ ಉದ್ಯಮದಲ್ಲಿ ಅನುಸರಿಸುತ್ತಿರುವ ಎಸ್‌ಒಇಸಿಚೌಕಟ್ಟಿನಡಿಯಲ್ಲಿ, ಒಂದು ನಿರ್ದಿಷ್ಟ ದೇಶದಿಂದ ವಿದೇಶಕ್ಕೆ ಹಾರಾಟ ನಡೆಸುವ ವಿಮಾನದಲ್ಲಿ ಆ ದೇಶದ ಸರ್ಕಾರ ಅಥವಾ ಅದರ ಪ್ರಜೆಗಳು ಗಣನೀಯವಾಗಿ ಹೂಡಿಕೆ ಮಾಡಿರುವುದು ಉತಮ ಪ್ರಸ್ತುತ, ಅನಿವಾಸಿ ಭಾರತೀಯರು ಏರ್ ಇಂಡಿಯಾದಲ್ಲಿ ಕೇವಲ 49 ಶೇಕಡಾ ಪಾಲನ್ನಷ್ಟೇ ಪಡೆಯಲು ಅರ್ಹವಿದ್ದಾರೆ. ಸರ್ಕಾರದ ಅನುಮೋದನೆ ಅನುಸಾರ ಇದು , ಸಾಗರೋತ್ತರ ವಿಮಾನಯಾನ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ.ಕೇವಲ ಕೆಲ ನಿರ್ದಿಷ್ಟ ನಿರ್ಬಂಧಗಳಿಗೆ ಒಳಪಟ್ಟು ದೇಶೀಯ ವಿಮಾನಯಾನಕ್ಕೆ ಮಾತ್ರ ಶೇಕಡಾ 100 ರಷ್ಟು ಎಫ್‌ಡಿಐಗೆ ಅನುಮತಿ ಇದೆ.

ನಿಗದಿತ ವಿಮಾನಯಾನ ಸಂಸ್ಥೆಗಳ ವಿಷಯದಲ್ಲಿ, ಸ್ವಯಂಚಾಲಿತ ಅನುಮೋದನೆ ಮಾರ್ಗದ ಮೂಲಕ ಶೇಕಡಾ 49 ರಷ್ಟು ಎಫ್‌ಡಿಐಗೆ ಅನುಮತಿ ನೀಡಲಾಗುತ್ತದೆ ಮತ್ತು ಆ ಮಟ್ಟವನ್ನು ಮೀರಿದ ಯಾವುದೇ ಹೂಡಿಕೆಗೆ ಸರ್ಕಾರದ ಅನುಮತಿ ಅಗತ್ಯವಿರುತ್ತದೆ. ಜನವರಿ 27 ರಂದು, ಏರ್ ಇಂಡಿಯಾ ಹೂಡಿಕೆಗಾಗಿ ಪಿಐಎಂ ಹೊರಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com