ಒಪ್ಪೋ ಕ್ಯಾಶ್ ಸೇವೆಗೆ ಚಾಲನೆ: ಇದರಿಂದಾಗುವ ಉಪಯೋಗಗಳೇನು ಗೊತ್ತೆ?

ಒಪ್ಪೋ ಕ್ಯಾಶ್  ಹಣಕಾಸು ಸೇವೆಗೆ ದೇಶದ ಅತ್ಯಂತ ವಿಶ್ವಾಸಾರ್ಹ ಮತ್ತು ನಾಲ್ಕನೆ ಅತಿದೊಡ್ಡ ಸ್ಟಾರ್ಟ್ ಡಿವೈಸ್ ಬ್ರಾಂಡ್ ಆದ ಒಪ್ಪೋ ಸಂಸ್ಥೆಯು ಚಾಲನೆ ನೀಡಿದೆ. ಒಪ್ಪೋ ಸ್ಮಾರ್ಟ್ ಫೋನ್ ನಲ್ಲಿ 'ಒಪ್ಪೋ ಕ್ಯಾಶ್' ಆ್ಯಪ್ ಅನ್ನು ಮೊದಲೆ ಇನ್ಸ್ಟಾಟ್ ಮಾಡಲಾಗಿರುತ್ತದೆ. 
ಒಪ್ಪೋ ಕ್ಯಾಶ್ ಸೇವೆಗೆ ಚಾಲನೆ: ಇದರಿಂದಾಗುವ ಉಪಯೋಗಗಳೇನು ಗೊತ್ತೆ?
ಒಪ್ಪೋ ಕ್ಯಾಶ್ ಸೇವೆಗೆ ಚಾಲನೆ: ಇದರಿಂದಾಗುವ ಉಪಯೋಗಗಳೇನು ಗೊತ್ತೆ?

ಬೆಂಗಳೂರು: ಒಪ್ಪೋ ಕ್ಯಾಶ್  ಹಣಕಾಸು ಸೇವೆಗೆ ದೇಶದ ಅತ್ಯಂತ ವಿಶ್ವಾಸಾರ್ಹ ಮತ್ತು ನಾಲ್ಕನೆ ಅತಿದೊಡ್ಡ ಸ್ಟಾರ್ಟ್ ಡಿವೈಸ್ ಬ್ರಾಂಡ್ ಆದ ಒಪ್ಪೋ ಸಂಸ್ಥೆಯು ಚಾಲನೆ ನೀಡಿದೆ. ಒಪ್ಪೋ ಸ್ಮಾರ್ಟ್ ಫೋನ್ ನಲ್ಲಿ 'ಒಪ್ಪೋ ಕ್ಯಾಶ್' ಆ್ಯಪ್ ಅನ್ನು ಮೊದಲೆ ಇನ್ಸ್ಟಾಟ್ ಮಾಡಲಾಗಿರುತ್ತದೆ. 

ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದು. ಒಪ್ಪೋ ಕ್ಯಾಶ್ ಆ್ಯಪ್ ಬಳಸಿ ಗ್ರಾಹಕರು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಕೂಡ ಮಾಡಬಹುದು. ಜೊತೆಗೆ  ಗ್ರಾಹಕರು ಉಚಿತವಾಗಿ ಕ್ರೆಡಿಟ್ ರಿಪೋರ್ಟ್ ಪಡೆಯಬಹುದು. 2 ಲಕ್ಷ ರೂವರೆಗೆ ವೈಯಕ್ತಿಕ ಸಾಲ, 2 ಕೋಟಿ ರೂ ವರೆಗೆ ವ್ಯಾಪಾರ ಸಾಲ ಮತ್ತು ಸ್ಕ್ರೀನ್ ಇನ್ಶೂರೆನ್ಸ್ ಸಹ ಪಡೆಯಬಹುದು. 

ಮುಂದಿನ 18 ತಿಂಗಳಲ್ಲಿ ಸಂಸ್ಥೆಯು 6 ಹೊಸ ಸೇವೆಗಳನ್ನು ನೀಡುವ ಗುರಿ ಹೊಂದಿದೆ. ಪಾವತಿ, ಸಾಲ, ಉಳಿತಾಯ, ವಿಮೆ, ಹಣಕಾಸು ಶಿಕ್ಷಣ ಸೇವೆಗಳ ಜೊತೆಗೆ ಭಾರತದಲ್ಲಿ ಮೊದಲ ಬಾರಿಗೆ ಆರ್ಥಿಕ ಯೋಗಕ್ಷೇಮ ಸ್ಕೋರ್ ಸೇವೆಯನ್ನು ಸಂಸ್ಥೆಯು ಒದಗಿಸಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com