ಪಿಎನ್‌ಬಿ ಹಗರಣ: ನೀರವ್ ಮೋದಿ  ಜಾಮೀನು ಅರ್ಜಿಯನ್ನು ಐದನೇ ಬಾರಿ ತಿರಸ್ಕರಿಸಿದ ಯುಕೆ ಕೋರ್ಟ್

 ಸುಮಾರು 2 ಬಿಲಿಯನ್ ಯುಎಸ್ ಡಾಲರ್ ಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗೆ ವಂಚಿಸಿದ್ದು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ದೇಶ ಬಿಟ್ಟು ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಯುಕೆ ನ್ಯಾಯಾಲಯ ಐದನೇ ಬಾರಿ ವಜಾಗೊಳಿಸಿದೆ. 
ನೀರವ್ ಮೋದಿ
ನೀರವ್ ಮೋದಿ

ಲಂಡನ್: ಸುಮಾರು 2 ಬಿಲಿಯನ್ ಯುಎಸ್ ಡಾಲರ್ ಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಗೆ ವಂಚಿಸಿದ್ದು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ದೇಶ ಬಿಟ್ಟು ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯ ಜಾಮೀನು ಅರ್ಜಿಯನ್ನು ಯುಕೆ ನ್ಯಾಯಾಲಯ ಐದನೇ ಬಾರಿ ವಜಾಗೊಳಿಸಿದೆ.

ರಾಯಲ್ ಕೋರ್ಟ್ಸ್ ಆಫ್ ಜಸ್ಟಿಸ್ ನಲ್ಲಿ ಜಾಮೀನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇಯಾನ್ ಡೋವ್ ನೀರವ್ ಮೋದಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ನೀರವ್ ಮೋದಿ  ಜಾಮೀನು ಪಡೆಯುವ ಐದನೇ ಪ್ರಯತ್ನ ಈ ಮೂಲಕ ವಿಫಲವಾಗಿದೆ.

ಕಳೆದ ಮಾರ್ಚ್‌ನಲ್ಲಿ ಬಂಧನಕ್ಕೊಳಗಾದ ನಂತರ ಆಗ್ನೇಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿರುವ ನೀರವ್ ಮೋದಿ ಅವರ ಭಾರತ ಹಸ್ತಾಂತರ ಕುರಿತಾದ ವಿಚಾರಣೆ ಮೇ 11 ಮತ್ತು 15 ರ ನಡುವೆ ನಿಗದಿಯಾಗಿದೆ.

4 ಮಿಲಿಯನ್ ಪೌಂಡ್ಗಳ ಜಾಮೀನು ಭದ್ರತೆ, 24 ಗಂಟೆಗಳ ಎಲೆಕ್ಟ್ರಾನಿಕ್ ಟ್ಯಾಗ್ ನೊಂದಿಗೆ ಗೃಹಬಂಧನ ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ಸೇವೆ ಮತ್ತು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವ ಪ್ರವೇಶ ಸೇರಿದಂತೆ "ಕಠಿಣ" ಜಾಮೀನು ಕ್ರಮಗಳ ಪ್ಯಾಕೇಜ್ ಅನ್ನು ಮೋದಿ ಪರ ಕಾನೂನು ತಂಡ ನೀಡಿದ್ದ ಕಾರಣ ಅವರು ಜೈಲಿನಿಂದ ವೀಡಿಯೊಲಿಂಕ್ ಮೂಲಕ ಕೋರ್ಟ್ ನಲ್ಲಿ ಹಾಜರಿದ್ದರು."ಈ ಅರ್ಜಿದಾರರರಿಗೆ ಜಾಮೀನು ನೀಡುವದರಿಂಡ ಅಪಾಯವಿದೆ. " ಎಂದು ಯಮೂರ್ತಿ ಡೋವ್ ಹೇಳಿದ್ದಾರೆ. 

ವಿಚಾರಣೆ ವೇಳೆ ವಿಡಿಯೋ ಲಿಂಕ್ ಮೂಲಕ ಹಾಜರಿದ್ದ ನೀರವ್ ಮೋದಿ ಇಡೀ ವಿಚಾರಣೆಯನ್ನು ಗಮನಿಸಿದ್ದಾರೆ.  ಸಾಂದರ್ಭಿಕವಾಗಿ ಕೆಲವು ಫೈಲ್‌ಗಳನ್ನು ಉಲ್ಲೇಖಿಸಿದ್ದಾರೆ.ಕಳೆದ ವಾರ, ಅವರು ತಮ್ಮ ಜೈಲಿನಿಂದ ವಿಡಿಯೋಲಿಂಕ್ ಮೂಲಕ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ವಾಡಿಕೆಯ 28 ದಿನಗಳ ಕಾಲ್-ಓವರ್ ರಿಮಾಂಡ್ ವಿಚಾರಣೆಗೆ ಹಾಜರಾಗಿದ್ದರು ಮತ್ತು ಮುಂದಿನ ಮಾರ್ಚ್ 24 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

ಭಾರತ ಸರ್ಕಾರದ  ಆರೋಪದ ಮೇಲೆ ಸ್ಕಾಟ್ಲೆಂಡ್ ಯಾರ್ಡ್ ನೀರವ್ ಮೋದಿಯನ್ನು 2019 ರ ಮಾರ್ಚ್ 19 ರಂದು ಬಂಧಿಸಿದೆ. ವಿಚಾರಣೆಯ ಸಮಯದಲ್ಲಿ, ಪಿಎನ್‌ಬಿವಂಚನೆ  ಪಿತೂರಿಯ ಭಾಗವಾಗಿ ಮತ್ತು ನಂತರ ನೀರವ್ ಮೋದಿ ಅಪರಾಧದ ಹಿನ್ನೆಲೆ ಎಲ್‌ಒಯು ವಂಚನೆಗಳ "ಪ್ರಧಾನ ಫಲಾನುಭವಿ" ಎಂದು ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಲಾಯಿತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com