ಮಾ.11ರವರೆಗೆ ಇಡಿ ಕಸ್ಟಡಿಗೆ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಾಪೂರ್ 

ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಂದು ಬೆಳಗ್ಗೆ ಬಂಧಿಸಲಾದ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್  ಅವರನ್ನು ವಿಶೇಷ ನ್ಯಾಯಾಲಯ ಮಾರ್ಚ್ 11ರವರೆಗೆ ಇಡಿ ಕಸ್ಟಡಿ ವಶಕ್ಕೆ ಒಪ್ಪಿಸಿದೆ.
ರಾಣಾ ಕಪೂರ್
ರಾಣಾ ಕಪೂರ್

ಮುಂಬೈ: ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಂದು ಬೆಳಗ್ಗೆ ಬಂಧಿಸಲಾದ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್  ಅವರನ್ನು ವಿಶೇಷ ನ್ಯಾಯಾಲಯ ಮಾರ್ಚ್ 11ರವರೆಗೆ ಇಡಿ ಕಸ್ಟಡಿ ವಶಕ್ಕೆ ಒಪ್ಪಿಸಿದೆ.

ಯೆಸ್ ಬ್ಯಾಂಕ್  ಆಡಳಿತವನ್ನು ಆರ್ ಬಿಐ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ , ಬ್ಯಾಂಕ್ ಕಾರ್ಯನಿರ್ವಹಣೆಯಲ್ಲಿ  ನಿಯಮಗಳ ಉಲ್ಲಂಘನೆ, ಆಡಳಿತ ದುರುಪಯೋಗ ಮತ್ತಿತರ ಆರೋಪಗಳು ಕೇಳಿಬಂದ ನಂತರ ರಾಣಾ ಕಪೂರ್ ಅವರನ್ನು ಬಂಧಿಸಲಾಗಿತ್ತು. 

ಕಪೂರ್ ಪತ್ನಿ ಬಿಂದು ಮತ್ತು ಪುತ್ರಿಯರಾದ ರಾಖಿ ಕಪೂರ್, ಟಂಡನ್, ರೊಷಿನಿ ಕಪೂರ್ ಮತ್ತು ರಾಧಾ ಕಪೂರ್ ಕೂಡಾ  ಕೆಲ ಕಂಪನಿಗಳೊಂದಿಗೆ ಅಕ್ರಮ ನಂಟು ಹೊಂದಿರುವ ಆರೋಪ ಕೇಳಿಬಂದಿದೆ.

ಡಿಎಚ್ ಎಫ್ ಎಲ್ ಹಗರಣಕ್ಕೆ ಸಂಬಂಧಿಸಿದಂತೆ ಕಪೂರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಡಿಎಚ್ ಎಫ್ ಎಲ್ ಕಂಪನಿಯಿಂದ ರಾಣಾ ಕಪೂರ್ 600 ಕೋಟಿ ರೂ. ಮೊತ್ತದ ಸಾಲ ಪಡೆದಿರುವುದು ಇಡಿ ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com