ರಿಲಯನ್ಸ್ ದಿಗ್ಗಜನನ್ನು ಕಾಡಿದ ಕೊರೋನಾ! ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟ ಕಳೆದುಕೊಂಡ ಮುಖೇಶ್ ಅಂಬಾನಿ

ಜಾಗತಿಕ ತೈಲ ಬೆಲೆ ಕುಸಿತ ಜತೆಗೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಾಣು ಸೋಂಕಿನಿಂದಾಗಿ ಷೇರುಪೇಟೆಯಲ್ಲಿ ಉಂಟಾಗಿರುವ ತಲ್ಲಣದಿಂದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಕಳೆದುಕೊಂಡಿದ್ದಾರೆ.
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ

ಮುಂಬೈ: ಜಾಗತಿಕ ತೈಲ ಬೆಲೆ ಕುಸಿತ ಜತೆಗೆ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಾಣು ಸೋಂಕಿನಿಂದಾಗಿ ಷೇರುಪೇಟೆಯಲ್ಲಿ ಉಂಟಾಗಿರುವ ತಲ್ಲಣದಿಂದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಕಳೆದುಕೊಂಡಿದ್ದಾರೆ.

ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಸ್ಥಾಪಕ ಜ್ಯಾಕ್ ಮಾ ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. 

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಪಾತಾಳ ಕಂಡಿದ್ದು ಅಂಬಾನಿಯವರ ಒಟ್ಟು ಆದಾಯದಲ್ಲಿ 42,000 ಕೋಟಿ ರೂ. ಕಡಿತವಾಗಿದೆ. ಈ ಮೂಲಕ ಏಷ್ಯಾದ ನ. ಒನ್ ಶ್ರೀಮಂತ ಪಟ್ಟ ಅಂಬಾನಿ ಕೈತಪ್ಪಿದೆ.

ಇನ್ನೊಂದೆಡೆ ನಂ.ಒನ್ ಏಷ್ಯಾ ಶ್ರೀಮಂತರ ಪಟ್ಟವೇರಿದ ಜ್ಯಾಕ್ ಮಾ ಆದಾಯ 3.2 ಲಕ್ಷ ಕೋಟಿ ರೂ ಆಗಿದ್ದು ಇದು ಅಂಬಾನಿಯವರಿಗಿಂತ 19,000 ಕೋಟಿ ರು. ಹೆಚ್ಚಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com