ಜಾಗತಿಕ ಮಾರುಕಟ್ಟೆಗಳ ಕುಸಿತ ನಡುವೆ ಸೆನ್ಸೆಕ್ಸ್ 62.45 ಅಂಕ ಏರಿಕೆ

ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಹಿಂದ್ ಯೂನಿಲಿವರ್ ಮತ್ತು ಎಲ್ ಅಂಡ್‍ ಟಿ ಷೇರುಗಳಲ್ಲಿ ಹೊಸ ಖರೀದಿ ಉತ್ಸಾಹದಿಂದಾಗಿ ಕಳೆದ ಎರಡು ದಿನದ ನಿರುತ್ಸಾಹ ವಹಿವಾಹಿಟಿನ ನಂತರ ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ, ಸೆನ್ಸೆಕ್ಸ್, ಬುಧವಾರ 62.45 ಅಂಕ ಏರಿಕೆ ಕಂಡು 35,697.40 ಕ್ಕೆ ತಲುಪಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಹಿಂದ್ ಯೂನಿಲಿವರ್ ಮತ್ತು ಎಲ್ ಅಂಡ್‍ ಟಿ ಷೇರುಗಳಲ್ಲಿ ಹೊಸ ಖರೀದಿ ಉತ್ಸಾಹದಿಂದಾಗಿ ಕಳೆದ ಎರಡು ದಿನದ ನಿರುತ್ಸಾಹ ವಹಿವಾಹಿಟಿನ ನಂತರ ಮುಂಬೈ ಷೇರು ವಿನಿಮಯ ಕೇಂದ್ರದ ಸೂಚ್ಯಂಕ, ಸೆನ್ಸೆಕ್ಸ್, ಬುಧವಾರ 62.45 ಅಂಕ ಏರಿಕೆ ಕಂಡು 35,697.40 ಕ್ಕೆ ತಲುಪಿದೆ.

ಆದರೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) 2.55 ಅಂಕ ಕುಸಿತದೊಂದಿಗೆ 10,448.90 ಕ್ಕೆ ತಲುಪಿದೆ. ವಾರದಲ್ಲಿ ಇಲ್ಲಿಯವರೆಗೆ ಕಚ್ಚಾ ದರದಲ್ಲಿ ತೀವ್ರ ಇಳಿಕೆಯಾಗಿದ್ದರೂ ಸಹ,  ಸೌದಿ ಅರೇಬಿಯಾ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ದರ ಸಮರದ ಬಗ್ಗೆ ಹೂಡಿಕೆದಾರರು ಎಚ್ಚರ ವಹಿಸಿದ್ದಾರೆ. 

ಕಳೆದ ಎರಡು ದಿನಗಳ ವಹಿವಾಟಿನಲ್ಲಿ 2834 ಅಂಕಗಳ ಕುಸಿತ ಕಂಡ ಸೆನ್ಸೆಕ್ಸ್ ಮಂಗಳವಾರ ಆರಂಭದಲ್ಲಿ 166 ಅಂಕ ಇಳಿಕೆ ಕಂಡು 35,468.90 ಕ್ಕೆ ತಲುಪಿತ್ತು. ಬಳಿಕ ದಿನದ ಕನಿಷ್ಠ ಮಟ್ಟವಾದ 373 ಅಂಕ ಇಳಿದು 35,261.92ಕ್ಕೆ ತಲುಪಿದೆ.

ವಲಯ ಸೂಚ್ಯಂಕಗಳಾದ ಇಂಧನ, ದೂರ ಸಂಪರ್ಕ, ಬಂಡವಾಳ ಸರಕು ಮತ್ತು ಬ್ಯಾಂಕಿಂಗ್ ಷೇರುಗಳು ಮಾರುಕಟ್ಟೆ ಚೇತರಿಸಿಕೊಳ್ಳುವಂತೆ ಮಾಡಿವೆ. ಷೇರುಗಳ ಪೈಕಿ, ಹೀರೋಮೊಟೊ ಕಾರ್ಪ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಹಿಂದ್ ಯೂನಿಲಿವರ್ ಸಹ ಮಾರುಕಟ್ಟೆಯನ್ನು ಪ್ರೋತ್ಸಾಹಿಸಿವೆ ಎಂದು ದಲ್ಲಾಳಿಗಳು ತಿಳಿಸಿದ್ದಾರೆ.

ಆದರೆ, ರಿಯಾಲ್ಟಿ, ಇಂಧನ ಹಾಗೂ ಅನಿಲ, ಐಟಿ ಮತ್ತು ತಂತ್ರಜ್ಞಾನ ಷೇರುಗಳಲ್ಲಿ ಭಾರೀ ಮಾರಾಟ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com