ಮಾರುಕಟ್ಟೆ ವಹಿವಾಟು: ಕೈಗಾರಿಕಾ ಉತ್ಪಾದನೆಯಲ್ಲಿ ಶೇ.2ರಷ್ಟು ಹೆಚ್ಚಳ, ಚಿಲ್ಲರೆ ಹಣದುಬ್ಬರ ಶೇ.6.58ಕ್ಕೆ ಇಳಿಕೆ

ದೇಶದ ಉತ್ಪಾದನಾ ಕ್ಷೇತ್ರದ ಕಾರ್ಯಕ್ಷಮತೆಯ ಆಧಾರದಲ್ಲಿ  ಭಾರತದ ಕೈಗಾರಿಕಾ ಉತ್ಪಾದನೆಯು ಜನವರಿಯಲ್ಲಿ ಶೇಕಡಾ 2 ರಷ್ಟು ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಗುರುವಾರ ಬಹಿರಂಗಪಡಿಸಿದೆ 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ ಉತ್ಪಾದನಾ ಕ್ಷೇತ್ರದ ಕಾರ್ಯಕ್ಷಮತೆಯ ಆಧಾರದಲ್ಲಿ  ಭಾರತದ ಕೈಗಾರಿಕಾ ಉತ್ಪಾದನೆಯು ಜನವರಿಯಲ್ಲಿ ಶೇಕಡಾ 2 ರಷ್ಟು ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ಗುರುವಾರ ಬಹಿರಂಗಪಡಿಸಿದೆ

ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) 2019 ರ ಜನವರಿಯಲ್ಲಿ ಶೇಕಡಾ 1.6 ರಷ್ಟು ಏರಿಕೆಯಾಗಿದೆ. ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿಯ (ಎನ್‌ಎಸ್‌ಒ) ಅಂಕಿಅಂಶಗಳ ಪ್ರಕಾರ, ಉತ್ಪಾದನಾ ವಲಯದ ಉತ್ಪಾದನೆಯು ಶೇಕಡಾ 1.5 ರಷ್ಟು ಏರಿಕೆಯಾಗಿದೆ. 

.ವಿದ್ಯುತ್ ಉತ್ಪಾದನೆಯು ಶೇಕಡಾ 3.1 ರಷ್ಟು  ಗಣಿಗಾರಿಕೆ ಕ್ಷೇತ್ರದ ಉತ್ಪಾದನೆಯು 2020 ರ ಜನವರಿಯಲ್ಲಿ 4.4 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ, ಇದು ಒಂದು ವರ್ಷದ ಹಿಂದೆ ಶೇಕಡಾ 3.8 ರಷ್ಟು ಬೆ:ಳವಣಿಗೆ ದಾಖಲಿಸಿತ್ತು.ಏಪ್ರಿಲ್ 2019 ರಿಂದ ಜನವರಿ 2020 ರ ಅವಧಿಯಲ್ಲಿ ಐಐಪಿ ಬೆಳವಣಿಗೆಯು ಶೇಕಡಾ 0.5 ಕ್ಕೆ ಇಳಿದಿದೆ,

ಚಿಲ್ಲರೆ ಹಣದುಬ್ಬರ ಇಳಿಕೆ

 ಚಿಲ್ಲರೆ ಹಣದುಬ್ಬರವು ಹಿಂದಿನ ತಿಂಗಳಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಶೇಕಡಾ 6.58 ಕ್ಕೆ ಇಳಿದಿದೆ. ಮುಖ್ಯವಾಗಿ ಆಹಾರ ಬೆಲೆಗಳಲ್ಲಿನ ಇಳಿಕೆ ಇದಕ್ಕೆ ಕಾರಣವೆಂದು ಹೇಳಲಾಗಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇಕಡಾ 7.59 ಮತ್ತು 2019 ರ ಫೆಬ್ರವರಿಯಲ್ಲಿ ಶೇಕಡಾ 2. 57 ರಷ್ಟಿತ್ತು.ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಸಿಪಿಐ ಅಂಕಿಅಂಶಗಳ ಪ್ರಕಾರ,ಫುಡ್ ಬಾಸ್ಕೆಟ್ ಹಣದುಬ್ಬರವು 2020 ರ ಫೆಬ್ರವರಿಯಲ್ಲಿ ಶೇಕಡಾ 10.81 ರಷ್ಟಿತ್ತು, ಹಿಂದಿನ ತಿಂಗಳಲ್ಲಿ ಇದು ಶೇಕಡಾ 13. 63 ಪ್ರಮಾಣದಲ್ಲಿತ್ತು. s

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com