ಷೇರು ಮಾರುಕಟ್ಟೆ ಮತ್ತೆ ತಲ್ಲಣ: 45 ನಿಮಿಷ ವಹಿವಾಟು ಸ್ಥಗಿತ, ಸೆನ್ಸೆಕ್ಸ್ 3 ಸಾವಿರ, ನಿಫ್ಟಿ 9 ಸಾವಿರ ಅಂಕ ಇಳಿಕೆ!

ದೇಶೀಯ ಷೇರು ಮಾರುಕಟ್ಟೆಯಲ್ಲಿ ವಾರಾಂತ್ಯದ ವಹಿವಾಟು ದಿನವಾದ ಶುಕ್ರವಾರ ಕೂಡ ಕುಸಿತ ಕಂಡುಬಂದಿದೆ. ಆರಂಭ ವಹಿವಾಟಿನ ಕೆಲವೇ ನಿಮಿಷಗಳಲ್ಲಿ ಷೇರುಪೇಟೆ ವಹಿವಾಟು ಕುಸಿತಕಂಡು ಶೇಕಡಾ 10ಕ್ಕಿಂತ ಕಡಿಮೆಗೆ ಹೋಯಿತು. 
ಷೇರು ಮಾರುಕಟ್ಟೆ ಮತ್ತೆ ತಲ್ಲಣ: 45 ನಿಮಿಷ ವಹಿವಾಟು ಸ್ಥಗಿತ, ಸೆನ್ಸೆಕ್ಸ್ 3 ಸಾವಿರ, ನಿಫ್ಟಿ 9 ಸಾವಿರ ಅಂಕ ಇಳಿಕೆ!

ನವದೆಹಲಿ: ದೇಶೀಯ ಷೇರು ಮಾರುಕಟ್ಟೆಯಲ್ಲಿ ವಾರಾಂತ್ಯದ ವಹಿವಾಟು ದಿನವಾದ ಶುಕ್ರವಾರ ಕೂಡ ಕುಸಿತ ಕಂಡುಬಂದಿದೆ. ಆರಂಭ ವಹಿವಾಟಿನ ಕೆಲವೇ ನಿಮಿಷಗಳಲ್ಲಿ ಷೇರುಪೇಟೆ ವಹಿವಾಟು ಕುಸಿತಕಂಡು ಶೇಕಡಾ 10ಕ್ಕಿಂತ ಕಡಿಮೆಗೆ ಹೋಯಿತು. 


ಕೊರೊನಾ ವೈರಸ್ ಭೀತಿ ದೇಶದ ಅರ್ಥವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ವಿಪರೀತ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಇಂದು ಷೇರು ವಹಿವಾಟು ಆರಂಭವಾದ ನಂತರ 45 ನಿಮಿಷಗಳ ಕಾಲ ಸ್ಥಗಿತಗೊಂಡು ನಂತರ ಬೆಳಗ್ಗೆ 10.30ಕ್ಕೆ ಪುನರಾರಂಭಗೊಂಡಿತು. 


ಇದುವರೆಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 3090 ಅಂಕಗಳ ಕುಸಿತ ಕಂಡು 29,687ರಲ್ಲಿ ವಹಿವಾಟು ನಡೆಸಿತು. ನಿಫ್ಟಿ ಸಹ 966 ಅಂಕ ಕುಸಿತ ಕಂಡು 8,624ರಲ್ಲಿ ವಹಿವಾಟು ನಡೆಸಿತು. ನಿನ್ನೆ ಕೂಡ ಷೇರು ಮಾರುಕಟ್ಟೆ ಆರಂಭದಲ್ಲಿಯೇ ಮುಗ್ಗರಿಸಿ ದಿನವಿಡೀ ಇಳಿಕೆ ಕಂಡು ನಷ್ಟದಲ್ಲಿಯೇ ಮುಕ್ತಾಯ ಕಂಡುಬಂತು.ಕಳೆದ ಮೂರು ವರ್ಷಗಳಲ್ಲಿ ನಿಫ್ಟಿ ಇಂದೇ ಇಷ್ಟೊಂದು ಕುಸಿತ ಕಂಡುಬಂದಿದೆ. 


ಇಂದಿನ ವಹಿವಾಟು ಆರಂಭಕ್ಕೆ 80 ಕಂಪೆನಿಗಳ ಷೇರುಗಳು ಲಾಭ ಕಂಡರೆ, 1121 ಕಂಪೆನಿಗಳ ಷೇರುಗಳು ಕುಸಿತ ಕಂಡುಬಂತು, 35 ಕಂಪೆನಿಗಳ ಷೇರುಗಳ ವಹಿವಾಟಿನಲ್ಲಿ ನಿನ್ನೆಗಿಂತ ಯಾವುದೇ ವ್ಯತ್ಯಾಸವಾಗಿಲ್ಲ, ಕಳೆದ ಗುರುವಾರದಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡಾ 22ರಷ್ಟು ನಷ್ಟ ಕಂಡಿದೆ. 


ಇಂದು ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಕುಸಿತ ಕಂಡು ಪ್ರತಿ ಡಾಲರ್ ಎದುರು ರೂಪಾಯಿ ಮೌಲ್ಯ 74 ರೂಪಾಯಿ 40 ಪೈಸೆಯಷ್ಟಾಗಿತ್ತು. ನಿನ್ನೆ ಭಾರತ ರೂಪಾಯಿ ಮೌಲ್ಯ 74 ರೂಪಾಯಿ 23 ಪೈಸೆಯಷ್ಟಾಗಿತ್ತು.


2008ರಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತ ಕಂಡುಬಂದಿದ್ದ ಸಂದರ್ಭದಲ್ಲಿ ಕೂಡ ಷೇರುಮಾರುಕಟ್ಟೆ ವಹಿವಾಟುಗಳು ಇಳಿಕೆಯಲ್ಲಿಯೇ ಸಾಗಿದ್ದವು. ಈ ಬಾರಿ ಕೂಡ ಶೇಕಡಾ 10ಕ್ಕಿಂತ ಕಡಿಮೆ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಇಳಿಕೆಯಾಗಿ ತೀವ್ರ ಆತಂಕ ಸೃಷ್ಟಿಸಿದೆ. ಇದರಿಂದಾಗಿಯೇ ಇಂದು ಸುಮಾರು 45 ನಿಮಿಷಗಳ ಕಾಲ ವಹಿವಾಟು ಸ್ಥಗಿತಗೊಂಡಿತು. 


ನಿನ್ನೆಯ ವಹಿವಾಟು ಅಂತ್ಯಕ್ಕೆ ಸುಮಾರು 12 ಲಕ್ಷ ಕೋಟಿ ಹೂಡಿಕೆದಾರರ ವಹಿವಾಟಿನಲ್ಲಿ ನಷ್ಟವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com