ಮುಂದುವರಿದ 'ಕೊರೋನಾ' ಭೀತಿ: ಸೆನ್ಸೆಕ್ಸ್ 1,600 ಅಂಕ, ನಿಫ್ಟಿ 9,514 ಅಂಕ ಕುಸಿತ 

ಸತತ ಕುಸಿತ ಕಂಡು ಕಳೆದ ವಾರಾಂತ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದ್ದ ಸೆನ್ಸೆಕ್ಸ್ ಸೋಮವಾರ ಬೆಳಗಿನ ವಹಿವಾಟು ಆರಂಭಕ್ಕೆ ಮತ್ತೆ ಕುಸಿತ ಕಂಡುಬಂದಿದೆ.
ಮುಂದುವರಿದ 'ಕೊರೋನಾ' ಭೀತಿ: ಸೆನ್ಸೆಕ್ಸ್ 1,600 ಅಂಕ, ನಿಫ್ಟಿ 9,514 ಅಂಕ ಕುಸಿತ 

ನವದೆಹಲಿ: ಸತತ ಕುಸಿತ ಕಂಡು ಕಳೆದ ವಾರಾಂತ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದ್ದ ಸೆನ್ಸೆಕ್ಸ್ ಸೋಮವಾರ ಬೆಳಗಿನ ವಹಿವಾಟು ಆರಂಭಕ್ಕೆ ಮತ್ತೆ ಕುಸಿತ ಕಂಡುಬಂದಿದೆ.


ಇಂದು ಬೆಳಗ್ಗೆ ವಹಿವಾಟು ಆರಂಭ ನಂತರ ಸೆನ್ಸೆಕ್ಸ್ 1,585.86 ಅಂಕಗಳ ಕುಸಿತ ಕಂಡು 32 ಸಾವಿರದ 518ರಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ 441 ಅಂಕ ಕುಸಿತ ಕಂಡು 9 ಸಾವಿರದ 515ರಲ್ಲಿ ವಹಿವಾಟು ನಡೆಸಿತು. 190 ಷೇರುಗಳ ವಹಿವಾಟು ಏರಿಕೆ ಕಂಡುಬಂದರೆ, 730 ಷೇರುಗಳು ಕುಸಿತ ಕಂಡವು. 62 ಷೇರುಗಳ ವಹಿವಾಟುಗಳಲ್ಲಿ ಕಳೆದ ವಾರಾಂತ್ಯದಿಂದ ಯಾವುದೇ ಬದಲಾವಣೆಯಾಗಿಲ್ಲ.


ಯೆಸ್ ಬ್ಯಾಂಕಿನ ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಯೋಜನೆ ಪ್ರಕಟಿಸಿದ ನಂತರ ಇಂದು ಷೇರಿನ ಮಾರಾಟದಲ್ಲಿ ಶೇಕಡಾ 39ರಷ್ಟು ಪ್ರಗತಿ ಕಂಡುಬಂತು. ಹೆಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕು, ಎಸ್ ಬಿಐ, ಸನ್ ಫಾರ್ಮಾ, ಜೆಎಸ್ ಪಿಎಲ್, ಮ್ಯಾಕ್ಸ್ ಫೈನಾನ್ಷಿಯಲ್, ಡಿಎಲ್ಎಫ್ ಕುಸಿತ ಕಂಡಿವೆ. ಇಂಡಸ್ ಬ್ಯಾಂಕ್ ಲಿಮಿಟೆಡ್ ಷೇರು ಶೇಕಡಾ 9ರಷ್ಟು ಕುಸಿತ ಕಂಡರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಷೇರು ಶೇಕಡಾ 8ರಷ್ಟು ಕುಸಿಯಿತು. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರು ಶೇಕಡಾ 5.4ರಷ್ಟು ಕುಸಿಯಿತು. 


ಈ ಮಧ್ಯೆ ಡಾಲರ್ ಎದುರು ರೂಪಾಯಿ ಮೌಲ್ಯ 15 ಪೈಸೆ ಇಳಿಕೆಯಾಗಿ ಪ್ರತಿ ಡಾಲರ್ ಎದುರು ರೂವಾಯಿ ಬೆಲೆ 74 ರೂಪಾಯಿ 6 ಪೈಸೆಯಷ್ಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com