ಯೆಸ್ ಬ್ಯಾಂಕ್ ಬಿಕ್ಕಟ್ಟು: ಮುಂಬೈನಲ್ಲಿ ಇಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ

ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ಮತ್ತು ಇತರರ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಗುರುವಾರ ಮುಂಬೈನ ಜಾರಿ ನಿರ್ದೇಶನಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. 
ಅನಿಲ್ ಅಂಬಾನಿ
ಅನಿಲ್ ಅಂಬಾನಿ

ಮುಂಬೈ: ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ಮತ್ತು ಇತರರ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಗುರುವಾರ ಮುಂಬೈನ ಜಾರಿ ನಿರ್ದೇಶನಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅಂಬಾನಿಯ ಹೇಳಿಕೆಯನ್ನು ಸಂಸ್ಥೆ ದಾಖಲಿಸಿಕೊಳ್ಳುತ್ತದೆ ಎನ್ನಲಾಗಿದೆ.  60 ವರ್ಷದ ಉದ್ಯಮಿ ಬೆಳಿಗ್ಗೆ 9: 30 ರ ಸುಮಾರಿಗೆ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ಕಚೇರಿಗೆ  ಆಗಮಿಸಿದ್ದಾರೆ.

ಅಂಬಾನಿ ಅವರ ಒಂಬತ್ತು ಕಂಪನಿಗಳ ಸಮೂಹ ಬಿಕ್ಕಟ್ಟು ಎದುರಿಸುತ್ತಿರುವ ಯೆಸ್ ಬ್ಯಾಂಕಿನಿಂದ ಸುಮಾರು 12,800 ಕೋಟಿ ರೂ.ಗಳ ಸಾಲವನ್ನು ತೆಗೆದುಕೊಂಡಿವೆ ಎಂದು ಹೇಳಲಾಗಿದೆ, 

ಮಾರ್ಚ್ 6 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಪತ್ರಿಕಾಗೋಷ್ಠಿಯಲ್ಲಿ, ಅನಿಲ್ ಅಂಬಾನಿ ಗ್ರೂಪ್, ಎಸ್ಸೆಲ್, ಐಎಲ್ಎಫ್ಎಸ್, ಡಿಹೆಚ್ಎಫ್ಎಲ್ ಮತ್ತು ವೊಡಾಫೋನ್ ಮೊದಲಾದವುಗಳು ಯೆಸ್ ಬ್ಯಾಂಕಿನಿಂದ ಸಾಲ ಪಡೆದಿದೆ ಎಂದು ಹೇಳಿದ್ದರು.

ಅಂಬಾನಿಯನ್ನು ಮೊದಲು ಸೋಮವಾರ ವಿಚಾರಣೆಗೆ ಕರೆಯಲಾಗಿತ್ತು. ಆದರೆ ರೆ ವೈಯಕ್ತಿಕ ಆಧಾರದ ಮೇಲೆ ಅವರು ವಿನಾಯಿತಿ ಕೋರಿದ್ದರು.

ಮಾರ್ಚ್ 19 ರಂದು ಹಾಜರಾಗಲು ಇಡಿ ಅವರಿಗೆ ಹೊಸ ಸಮನ್ಸ್ ಜಾರಿಗೊಳಿಸಿತು. ಈ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಯೆಸ್ ಬ್ಯಾಂಕ್‌ಗೆ ನಿಷೇಧವನ್ನು ವಿಧಿಸಿದ ಕೂಡಲೇ ಕಪೂರ್, ಅವರ ಕುಟುಂಬ ಮತ್ತು ಇತರರ ವಿರುದ್ಧ ಸಂಸ್ಥೆ ಕ್ರಮ ಕೈಗೊಳ್ಳಲು ಪ್ರಾರಂಭಿಸಿತು, ಪ್ರತಿ ಠೇವಣಿದಾರರಿಗೆ 50,000 ರೂ.ಗೆ ವಿತ್ ಡ್ರಾ ಮಿತಿ ಹೇರಲಾಗಿತ್ತು.

"ರಿಲಯನ್ಸ್ ಗ್ರೂಪ್ ತನ್ನ ವಿವಿಧ ಆಸ್ತಿ ಹಣಗಳಿಕೆ ಕಾರ್ಯಕ್ರಮಗಳ ಮೂಲಕ ಯೆಸ್ ಬ್ಯಾಂಕ್ ಲಿಮಿಟೆಡ್‌ನಿಂದ ಪಡೆದ ಎಲ್ಲಾ ಸಾಲಗಳ ಮರುಪಾವತಿಯನ್ನು ಮಾಡಲು ಬದ್ದವಾಗಿದೆ. ಅಲ್ಲದೆ ಇದಕ್ಕಾಗಿ ಎಲ್ಲಾ ರೀತಿಯ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ"ರಿಲಯನ್ಸ್ ಗ್ರೂಪ್  ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com