ಕೊರೋನಾ ಮಹಾಘಾತ: ಸೆನ್ಸೆಕ್ಸ್ 4000 ಅಂಕ ಕುಸಿತ, ಹೂಡಿಕೆದಾರರಿಗೆ 14 ಲಕ್ಷ ಕೋಟಿ ರೂ. ನಷ್ಟ!

ಇಡೀ ವಿಶ್ವವನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಗೆ ಭಾರತೀಯ ಷೇರುಮಾರುಕಟ್ಟೆ ಸತತವಾಗಿ ಕುಸಿಯುತ್ತಿದ್ದು ಒಂದೇ ದಿನ ಹೂಡಿಕೆದಾರರಿಗೆ ಬರೊಬ್ಬರಿ 14 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಇಡೀ ವಿಶ್ವವನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಗೆ ಭಾರತೀಯ ಷೇರುಮಾರುಕಟ್ಟೆ ಸತತವಾಗಿ ಕುಸಿಯುತ್ತಿದ್ದು ಒಂದೇ ದಿನ ಹೂಡಿಕೆದಾರರಿಗೆ ಬರೊಬ್ಬರಿ 14 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಇಂದು 3,934 ಅಂಕ ಕುಸಿದಿದ್ದು ಸೆನ್ಸೆಕ್ಸ್ 25,981 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 1,135 ಅಂಕ ಕುಸಿದ್ದು 7,610 ಅಂಕಕ್ಕೆ ಸ್ಥಿರವಾಯಿತು.

ಕೊರೋನಾಗೆ ಜಗತ್ತಿನಾದ್ಯಂತ 16,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಹಾಗೂ 3,73,000ಕ್ಕೂ ಅಧಿಕ ಜನರು ಸೋಂಕಿಗೆ ಒಳಗಾಗಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 499ಕ್ಕೆ ಏರಿಕೆಯಾಗಿದ್ದು ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com