ಐಟಿ ರಿಟರ್ಸ್ಸ್ ಸಲ್ಲಿಕೆ ಅಂತಿಮ ಗಡುವು ಜೂನ್ 30ಕ್ಕೆ ವಿಸ್ತರಣೆ, ಆಧಾರ್-ಪ್ಯಾನ್ ಲಿಂಕ್ ಗೂ ವಿನಾಯಿತಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ನು ಕೆಲವೇ ಕ್ಷಣಗಳಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಕೊರೋನಾ ವೈರಸ್ ಬಗ್ಗೆ ಮತ್ತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಾತನಾಡಲಿದ್ದಾರೆ.
ಐಟಿ ರಿಟರ್ಸ್ಸ್ ಸಲ್ಲಿಕೆ ಅಂತಿಮ ಗಡುವು ಜೂನ್ 30ಕ್ಕೆ ವಿಸ್ತರಣೆ, ಆಧಾರ್-ಪ್ಯಾನ್ ಲಿಂಕ್ ಗೂ ವಿನಾಯಿತಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ನು ಕೆಲವೇ ಕ್ಷಣಗಳಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಕೊರೋನಾ ವೈರಸ್ ಬಗ್ಗೆ ಮತ್ತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ..


ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ಅವರು, ಕೊರೋನಾ ವೈರಸ್ ಸೋಂಕಿನಿಂದ ಇಂದು ದೇಶದಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿ ವಿರುದ್ಧ ಹೋರಾಡಲು ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಲು ಸರ್ಕಾರ ಸಿದ್ದವಿದೆ ಎಂದು ಹೇಳಿದ್ದಾರೆ. ಅವರು ಇನ್ನು ಕೆಲವೇ ಹೊತ್ತಿನಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಶಾಸನಬದ್ಧ ಮತ್ತು ನಿಯಂತ್ರಕ ಅನುಸರಣೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಭಾಷಣದ ಪ್ರಮುಖಾಂಶಗಳು

ಬ್ಯಾಂಕ್ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಾಗಿನ ಶುಲ್ಕ ವಿಧಿಸುವುದಿಲ್ಲ ಡಿಜಿಟಲ್ ವ್ಯಾಪಾರ ಮತ್ತು ವಹಿವಾಟುಗಳಿಗೆ ಬ್ಯಾಂಕ್ ಶುಲ್ಕವನ್ನು ಕಡಿತಗೊಳಿಸಲಾಗಿದೆ.

ನಾವು ಆರ್ಥಿಕ ಪ್ಯಾಕೇಜ್ ನೊಡನೆ ಅತಿ ಶೀಘ್ರದಲ್ಲೇ ಬರಲಿದ್ದೇವೆ. 2019-2020ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು 2020 ರ ಜೂನ್ 30 ಕ್ಕೆ ವಿಸ್ತರಿಸಲಾಗಿದೆ. ವಿಳಂಬವಾದ ಪಾವತಿಗಳಿಗಾಗಿ ಬಡ್ಡಿದರವನ್ನು 12% ರಿಂದ 9% ಕ್ಕೆ ಇಳಿಸಲಾಗಿದೆ.

ಆಧಾರ್-ಪ್ಯಾನ್ ಲಿಂಕ್ ಮಾಡುವ ದಿನಾಂಕ ಮತ್ತು ವಿವಾದ್  ಸೆ ವಿಶ್ವಾಸ್ ಯೋಜನೆಯನ್ನು 2020 ರ ಜೂನ್ 30ರವರೆಗೆ ಮುಂದುವರಿಸಲಾಗುವುದು.

 ಮಾರ್ಚ್, ಏಪ್ರಿಲ್, ಮೇ 2020 ರ  ಜಿಎಸ್ಟಿ ರಿಟರ್ನ್ಸ್ ಹಾಗೂ ಕಾಂಪೇಷನ್ ರಿಟರ್ನ್ಸ್ ಸಲ್ಲಿಕೆಯ ಅಂತಿಮ ದಿನಾಂಕವನ್ನಾಗಿ ಜೂನ್ 30, 2020ನ್ನು ನಿಗದಿ ಮಾಡಲಾಗಿದೆ.

5 ಕೋಟಿ ರೂ.ಗಿಂತ ಕಡಿಮೆ ವಹಿವಾಟು,ನಡೆಸುವ ಯಾವುದೇ ಕಂಪನಿಗೆ  ದಂಡ ಅಥವಾ ಬಡ್ಡಿ ಅಥವಾ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ.5 ಕೋಟಿ ರೂ.ಗಳ ವಹಿವಾಟು ಹೊಂದಿರುವ ದೊಡ್ಡ ಕಂಪನಿಗಳಿಗೆ, ಶೇಕಡಾ 9 ರಷ್ಟು ಕಡಿಮೆ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ.

ಆಮದು / ರಫ್ತುದಾರರಿಗೆ ಪರಿಹಾರ: ಕಸ್ಟಮ್ಸ್ ಇಲಾಖೆ ತನ್ನ ಕರ್ತವ್ಯ ಪಾಲನೆಯಲ್ಲಿದೆ.  ಜೂನ್ 30, 2020 ರವರೆಗೆ  ಈ ವಿಭಾಗವು 24x7 ಅತ್ಯಗತ್ಯ ಸೇವೆಯಾಗಿ ಮುಂದುವರಿಯಲಿದೆ.

ಸಂಪತ್ತು ತೆರಿಗೆ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ಬೆನಾಮಿ ವಹಿವಾಟು ಕಾಯ್ದೆ, ಕಪ್ಪು ಹಣ ಕಾಯ್ದೆ ಅಡಿಯಲ್ಲಿರುವ ಎಲ್ಲಾ  ಅನುಸರಣೆಗಳನ್ನು 2020 ರ ಜೂನ್ 30ರವರೆಗೆ ವಿಸ್ತರಿಸಲಾಗಿದೆ.

ಕಂಪನಿಯ ನಿರ್ದೇಶಕರು ಕನಿಷ್ಟ ರೆಸಿಡೆನ್ಸಿಯನ್ನು ಅನುಸರಿಸದಿದ್ದಲ್ಲಿ (182 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ದೇಶದಲ್ಲಿ ಉಳಿಯುವುದು), ಇದನ್ನು ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ: 

"ಹೊಸದಾಗಿ ಸಂಯೋಜಿತ ಕಂಪನಿಗಳಿಗೆ, 6 ತಿಂಗಳಲ್ಲಿ ವ್ಯವಹಾರ ಪ್ರಾರಂಭದ ಘೋಷಣೆಯನ್ನು ಸಲ್ಲಿಸುವ ಅವಶ್ಯಕತೆಯಿದೆ, ನಾವು ಈಗ ಹೆಚ್ಚುವರಿ 6 ತಿಂಗಳ ಸಮಯವನ್ನು ನೀಡುತ್ತೇವೆ" ಎಂದು ಸೀತಾರಾಮನ್ ಹೇಳಿದ್ದಾರೆ.

ಸಣ್ಣ ಉದ್ಯಮಗಳಿಗೆ ಪರಿಹಾರವಾಗಿ, ದಿವಾಳಿತನ ಪ್ರಕ್ರಿಯೆಗಳ  ಮಿತಿಯನ್ನು ಅಸ್ತಿತ್ವದಲ್ಲಿರುವ 1 ಲಕ್ಷ ರೂ.ಗಳಿಂದ 1 ಕೋಟಿ ರೂ.ಗೆ ವಿಸ್ತರಿಸಲಾಗಿದೆ: .

ಎಟಿಎಂಗಳಿಂದ ಡೆಬಿಟ್ ಕಾರ್ಡ್ ನಿಂದ ಹಣ ವಿತ್ ಡ್ರಾ ಮಾಡುವವರಿಗೆ ಮುಂದಿನ ಮೂರು ತಿಂಗಳವರೆಗೆ ಹೆಚ್ಚುವರಿ ಹಣ ವಿತ್ ಡ್ರಾಗಾಗಿನ ಶುಲ್ಕ ವಿಧಿಸಲಾಗುವುದಿಲ್ಲ. ಈ ಹಿಂಪಡೆಯುವಿಕೆಯನ್ನು ಯಾವುದೇ ಎಟಿಎಂಗಳಿಂದ ಮಾಡಬಹುದಾಗಿದೆ ಎಂದು ಹಣಕಾಸು ಸಚಿವರು ಹೇಳಿದರು,

ಪ್ರಸ್ತುತ ಪರಿಸ್ಥಿತಿಗಳು ಆರು ತಿಂಗಳುಗಳನ್ನು ಮೀರಿದರೆ ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ ಸೆಕ್ಷನ್ 7, 9 ಮತ್ತು 10 ಅನ್ನು ಅಮಾನತುಗೊಳಿಸುವ ಬಗೆಗೆ ನಾವು ಪರಿಗಣಿಸುತ್ತೇವೆ.

.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com