ಇನ್ಫೊಸಿಸ್ ಅಕ್ರಮ ವ್ಯವಹಾರ ಕೇಸಿನ ತನಿಖೆ ಮುಗಿಸಿದ ಎಸ್ಇಸಿ, ಹೆಚ್ಚಿನ ಕ್ರಮ ನಿರೀಕ್ಷಿಸುತ್ತಿಲ್ಲ ಎಂದ ಕಂಪೆನಿ 

ಅಕ್ರಮ ವ್ಯವಹಾರ ಆರೋಪ ಹಿನ್ನೆಲೆಯಲ್ಲಿ ತನಿಖೆ ಎದುರಿಸುತ್ತಿದ್ದ ಇನ್ಫೊಸಿಸ್ ಸಂಸ್ಥೆ ಮಂಗಳವಾರ ಯುಎಸ್ ಸೆಕ್ಯುರಿಟಿಸ್ ಅಂಡ್ ಎಕ್ಸ್ಚೇಂಜ್ ಕಮಿಷನ್(ಎಸ್ ಇಸಿ) ಮುಂದೆ ಹೇಳಿಕೆ ನೀಡಿದ್ದು ನಿಯಂತ್ರಕದಿಂದ ಯಾವುದೇ ಮುಂದಿನ ಕ್ರಮಗಳನ್ನು ನಿರೀಕ್ಷಿಸುತ್ತಿಲ್ಲ ಎಂದಿದೆ.
ಇನ್ಫೊಸಿಸ್ ಅಕ್ರಮ ವ್ಯವಹಾರ ಕೇಸಿನ ತನಿಖೆ ಮುಗಿಸಿದ ಎಸ್ಇಸಿ, ಹೆಚ್ಚಿನ ಕ್ರಮ ನಿರೀಕ್ಷಿಸುತ್ತಿಲ್ಲ ಎಂದ ಕಂಪೆನಿ 

ನವದೆಹಲಿ: ಅಕ್ರಮ ವ್ಯವಹಾರ ಆರೋಪ ಹಿನ್ನೆಲೆಯಲ್ಲಿ ತನಿಖೆ ಎದುರಿಸುತ್ತಿದ್ದ ಇನ್ಫೊಸಿಸ್ ಸಂಸ್ಥೆ ಮಂಗಳವಾರ ಯುಎಸ್ ಸೆಕ್ಯುರಿಟಿಸ್ ಅಂಡ್ ಎಕ್ಸ್ಚೇಂಜ್ ಕಮಿಷನ್(ಎಸ್ ಇಸಿ) ಮುಂದೆ ಹೇಳಿಕೆ ನೀಡಿದ್ದು ನಿಯಂತ್ರಕದಿಂದ ಯಾವುದೇ ಮುಂದಿನ ಕ್ರಮಗಳನ್ನು ನಿರೀಕ್ಷಿಸುತ್ತಿಲ್ಲ ಎಂದಿದೆ.


ಇನ್ಪೊಸಿಸ್ ಕಂಪೆನಿಯ ಉನ್ನತ ವ್ಯವಸ್ಥಾಪಕ ಮಂಡಳಿಯಿಂದ ಕೆಲವು ಅಕ್ರಮಗಳು ನಡೆದಿದೆ ಎಂದು ಅಮೆರಿಕ ಷೇರುಪೇಟೆ ನಿಯಂತ್ರಕಕ್ಕೆ ಅನಾಮಧೇಯ ದೂರುಗಳು ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಂದಿದ್ದವು.ನಂತರ ತನಿಖೆ ಆರಂಭಿಸಿದ ಇನ್ಫೊಸಿಸ್ ಅದಕ್ಕಾಗಿ ಬಾಹ್ಯ ತನಿಖಾಕಾರರನ್ನು ಕರೆತಂದಿತ್ತು. ಅಮೆರಿಕದ ಷೇರು ವಿನಿಮಯ ಮಾರುಕಟ್ಟೆ ನಿಯಂತ್ರಕ ಎಸ್ ಇಸಿ ಕೂಡ ತನಿಖೆ ಆರಂಭಿಸಿತ್ತು.


ಇನ್ಫೊಸಿಸ್ ಇಂದು ಸಲ್ಲಿಸಿದ ನಿಯಂತ್ರಕ ದಾಖಲಾತಿಯಲ್ಲಿ, ತನಿಖೆ ಮುಗಿದಿದೆ ಎಂದು ಎಸ್ಇಸಿಯಿಂದ ಅಧಿಸೂಚನೆ ಬಂದಿದೆ ಎಂದು ಹೇಳಿದೆ. ಈ ವಿಷಯದಲ್ಲಿ ಮುಂದಿನ ಕ್ರಮದ ಬಗ್ಗೆ ನಿರೀಕ್ಷಿಸುತ್ತಿಲ್ಲ. ಭಾರತೀಯ ನಿಯಂತ್ರಕ ಅಧಿಕಾರಿಗಳ ಎಲ್ಲಾ ತನಿಖೆಗಳಿಗೆ ಉತ್ತರಿಸಿದ್ದು, ಇನ್ನು ಹೆಚ್ಚಿನ ಮಾಹಿತಿಗಳು ಬೇಕಾದಲ್ಲಿ ಅಧಿಕಾರಿಗಳಿಗೆ ಸಹಕಾರ ನೀಡುವುದಾಗಿ ಹೇಳಿದೆ. 


ಕಂಪೆನಿಯ ಬ್ಯಾಲೆನ್ಸ್ ಶೀಟ್ ನಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಅನಾಮಧೇಯ ಆರೋಪ ಬಂದ ನಂತರ ತನಿಖೆ ನಡೆಸಿದ ಕಂಪೆನಿಯ ಲೆಕ್ಕಪತ್ರ ಸಮಿತಿ ಹಣಕಾಸು ಅಕ್ರಮ ಅಥವಾ ಕಾರ್ಯನಿರ್ವಹಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಕಂಪೆನಿಯ ಸಿಇಒ ಸಾಲಿಲ್ ಪರೆಕ್ ಮತ್ತು ಸಿಎಫ್ಒ ನಿಲಂಜನ್ ರಾಯ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com