ಆರ್‌ಬಿಐ ಕ್ರಮಗಳಿಂದ ಬಹು ಅಪೇಕ್ಷಿತ ಪರಿಹಾರ: ನಿರ್ಮಲಾ ಸೀತಾರಾಮನ್‍

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಎದುರಿಸುವ ಕ್ರಮವಾಗಿ ರೆಪೊ ದರದಲ್ಲಿ 75 ಮೂಲಾಂಕ ಕಡಿತಗೊಳಿಸುವ ರಿಸರ್ವ್‍ ಬ್ಯಾಂಕ್‍ ಪ್ರಕಟಣೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಾಗತಿಸಿದ್ದಾರೆ. 

Published: 27th March 2020 06:39 PM  |   Last Updated: 27th March 2020 06:39 PM   |  A+A-


FM Nirmala Sitharaman

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

Posted By : Srinivas Rao BV
Source : UNI

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಎದುರಿಸುವ ಕ್ರಮವಾಗಿ ರೆಪೊ ದರದಲ್ಲಿ 75 ಮೂಲಾಂಕ ಕಡಿತಗೊಳಿಸುವ ರಿಸರ್ವ್‍ ಬ್ಯಾಂಕ್‍ ಪ್ರಕಟಣೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಾಗತಿಸಿದ್ದಾರೆ. 

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಿಂಗಳ ಮಾಸಿಕ ಕಂತುಗಳ ಪಾವತಿ ಮೂರು ತಿಂಗಳು ಮುಂದೂಡಿರುವುದು ಮತ್ತು ಕಾರ್ಯನಿರ್ವಹಣೆ ಬಂಡವಾಳ ಮೇಲಿನ ಬಡ್ಡಿ ಬಹು ಅಪೇಕ್ಷಿತ ಪರಿಹಾರ ಒದಗಿಸಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

‘ಹಣಕಾಸು ಸ್ಥಿರತೆಯ ಬಗ್ಗೆ ಆರ್‌ಬಿಐ ಗವರ್ನರ್‍ ಶಕ್ತಿಕಾಂತ ದಾಸ್ ಧೈರ್ಯ ತುಂಬುವ ಮಾತುಗಳನ್ನಾಡಿರುವುದು ಶ್ಲಾಘನೀಯ. ಸಾಲಗಳ ತಿಂಗಳ ಮಾಸಿಕ ಕಂತು (ಇಎಂಐ) ಪಾವತಿಯನ್ನು ಮೂರು ತಿಂಗಳು ಮುಂದೂಡಿರುವುದು ಮತ್ತು ಕಾರ್ಯನಿರತ ಬಂಡವಾಳದ ಮೇಲಿನ ಬಡ್ಡಿ ಹೆಚ್ಚು ಅಪೇಕ್ಷಿತ ಪರಿಹಾರವನ್ನು ಒದಗಿಸಿಕೊಡಲಿದೆ. ಕಡಿತಗೊಳಿಸಿದ ಬಡ್ಡಿದರ ತ್ವರಿತವಾಗಿ ವರ್ಗಾವಣೆಗೊಳ್ಳಬೇಕಾಗಿದೆ.’ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಭಾರತೀಯ ಆರ್ಥಿಕತೆಯ ಮೂಲಾಧಾರಗಳು ಸದೃಢವಾಗಿವೆ. 2008-09ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಪರಿಸ್ಥಿತಿಗಳಿಗಿಂತ ಇದೀಗ ಭಾರತೀಯ ಆರ್ಥಿಕತೆ ಸದೃಢವಾಗಿದೆ ಎಂಬ ಶಕ್ತಿಕಾಂತ್‍ ದಾಸ್‍ ಅವರ ಹೇಳಿಕೆಯನ್ನು ನಿರ್ಮಲಾ ಸೀತಾರಾಮನ್‍ ಸ್ವಾಗತಿಸಿದ್ದಾರೆ. ಸ್ವಚ್ಛವಾಗಿರಲು, ಸುರಕ್ಷಿತವಾಗಿರಲು ಡಿಜಿಟಲ್‍ ಪಾವತಿ ಮಾಡಿ ಎಂದು ದಾಸ್ ಅವರು ಸಮಯೋಚಿತ ಕಿವಿಮಾತು ಹೇಳಿರುವುದನ್ನು ಸಚಿವರು ಸ್ವಾಗತಿಸಿದ್ದಾರೆ. ಆರ್‌ಬಿಐ ಗವರ್ನರ್ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿರುವ ನೀತಿ ಆಯೋಗ ಸಿಇಒ ಅಮಿತಾಭ್ ಕಾಂತ್, ಇವು ದಿಟ್ಟ ಮತ್ತು ಮಹಾ ಕ್ರಮಗಳಾಗಿವೆ ಅವರು ಬಣ್ಣಿಸಿದ್ದಾರೆ.

ಕೊವಿದ್‍-19 ಹಿನ್ನೆಲೆಯಲ್ಲಿ ಆರ್ಥಿಕ ಕುಸಿತ ತಡೆಯಲು ರಿಸರ್ವ್‍ ಬ್ಯಾಂಕ್‍ ಶುಕ್ರವಾರ, ಪ್ರಮುಖ ದರಗಳಾದ ರೆಪೊ ದರ 75 ಮೂಲಾಂಕ ಮತ್ತು ರಿವರ್ಸ್‍ ರೆಪೋ ದರ 100 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಅಲ್ಲೆ, ಬಾಕಿ ಇರುವ ಎಲ್ಲಾ ಸಾಲಗಳಿಗೆ ಮೂರು ತಿಂಗಳ ಕಾಲ ಇಎಂಐ ಪಾವತಿಯನ್ನು ಮುಂದೂಡಲಾಗಿದೆ. ಈ ಇಳಿಕೆಯೊಂದಿಗೆ ರೆಪೊ ದರ ಶೇ 4.4 ಮತ್ತು ರಿವರ್ಸ್ ರೆಪೊ ದರ ಶೇ 4.15 ರಲ್ಲಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp