ಲಾಕ್‌ಡೌನ್ ಸಮಯದಲ್ಲಿ ಗ್ರಾಹಕರ ಪ್ರಿಪೇಯ್ಡ್ ವ್ಯಾಲಿಡಿಟಿ ವಿಸ್ತರಿಸಿ: ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಮನವಿ

21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಚಂದಾದಾರರು ನಿರಂತರ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಿಪೇಯ್ಡ್ ಬಳಕೆದಾರರ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸುವಂತೆ ದೂರಸಂಪರ್ಕ ನಿರ್ದೇಶನಾಲಯ ಟ್ರಾಯ್  ಟೆಲಿಕಾಂ ಆಪರೇಟರ್‌ಗಳನ್ನು ಕೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಚಂದಾದಾರರು ನಿರಂತರ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಿಪೇಯ್ಡ್ ಬಳಕೆದಾರರ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸುವಂತೆ ದೂರಸಂಪರ್ಕ ನಿರ್ದೇಶನಾಲಯ ಟ್ರಾಯ್  ಟೆಲಿಕಾಂ ಆಪರೇಟರ್‌ಗಳನ್ನು ಕೇಳಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI)  ಗ್ರಾಹಕರಿಗೆ "ಆದ್ಯತೆಯ ಆಧಾರದ ಮೇಲೆ" ನಿರಂತರ ಟೆಲಿಕಾಂ ಸೇವೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳ ವಿವರಗಳನ್ನು ಕೋರಿದೆ

"ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ಪ್ರಿಪೇಯ್ಡ್ ಚಂದಾದಾರರು ನಿರಂತರ ಸೇವೆಗಳನ್ನು ಪಡೆಯಲಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಲಲು  ನೀವು ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ" ಎಂದು ಟ್ರಾಯ್ ಭಾನುವಾರ ಎಲ್ಲಾ ಆಪರೇಟರ್‌ಗಳ ಜತೆ ನಡೆಸಿದ ಸಂವಾದದಲ್ಲಿ ಹೇಳಿದೆ.

"ರೀಚಾರ್ಜ್ ವೋಚರ್‌ಗಳ ಲಭ್ಯತೆ ಮತ್ತು ಪ್ರಿಪೇಯ್ಡ್ ಸೇವೆಗಳಿಗೆ ಪಾವತಿ ಆಯ್ಕೆಗಳನ್ನು ಖಚಿತಪಡಿಸಿಕೊಳ್ಳುವ ಕ್ರಮಗಳು" ಕುರಿತ ಸಂವಾದ ಕೊರೋನಾವೈರಸ್  ಹರಡುವಿಕೆಯನ್ನು ಎದುರಿಸಲು ದೇಶದಲ್ಲಿ ವಿಧಿಸಲಾದ 21 ದಿನಗಳ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಡೆದಿತ್ತು. "ದೂರಸಂಪರ್ಕ ಸೇವೆಗಳನ್ನು ಅಗತ್ಯ ಸೇವೆಗಳೆಂದು ಪರಿಗಣಿಸಲಾಗಿದ್ದರೂ ಎಲ್ಲಾ ಮೊಬೈಲ್ ಹಾಗೂ ದೂರವಾಣಿ ಶಾಪ್ ಮುಚ್ಚಿದ್ದರೂ ಲಾಕ್ ಡೌನ್ ನಿಂದ ಗ್ರಾಹಕ ಕ ಸೇವಾ ಕೇಂದ್ರಗಳು / ಮಾರಾಟದ ಸ್ಥಳಗಳ ಕೆಲಸದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು" ಎಂದು ಟ್ರಾಯ್ ಹೇಳಿದೆ.

"ಇಂತಹಾ ಸಂದರ್ಭಗಳಲ್ಲಿ, ತಮ್ಮ ಪ್ರಿಪೇಯ್ಡ್ ಬಾಕಿಗಳನ್ನು ಹೆಚ್ಚಿಸಲು ಅಥವಾ ಆಫ್‌ಲೈನ್ ಚಾನೆಲ್‌ಗಳನ್ನು ಬಳಸಿಕೊಂಡು ಪ್ರಿಪೇಯ್ಡ್ ಸುಂಕಕ್ಕೆ ಚಂದಾದಾರಿಕೆಯನ್ನು ವಿಸ್ತರಿಸಲು ಬಯಸುವ ಚಂದಾದಾರರು ತೊಂದರೆ ಎದುರಿಸಬೇಕಾಗುವುದು.

ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಅಭೂತಪೂರ್ವ ಕ್ರಮದಲ್ಲಿ ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು 21 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡುವುದಾಗಿ ಘೋಷಿಸಿದರು ಈ ಅವಧಿಯಲ್ಲಿ ರಸ್ತೆ, ರೈಲು ಮತ್ತು ವಾಯು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದುವರೆಗೆ ಕೊರೋನಾದಿಂದ ದೇಶದಲ್ಲಿ ೩೧ ಮಂದಿ ಬಲಿ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com