ಲಾಕ್ ಡೌನ್ ಎಫೆಕ್ಟ್: ಚಿಲ್ಲರೆ ಕ್ಷೇತ್ರಕ್ಕೆ ಭಾರಿ ಹೊಡೆತ, ಬರೋಬ್ಬರಿ 5.5 ಲಕ್ಷ ಕೋಟಿ ರೂ. ನಷ್ಟ!

ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 25 ರಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ನಂತರ ದೇಶದ ಚಿಲ್ಲರೆ ಕ್ಷೇತ್ರದ ಮೇಲೆ ಭಾರಿ ಹೊಡೆತ ಬಿದಿದ್ದೆ. ಬರೋಬ್ಬರಿ 5.5 ಲಕ್ಷ ಕೋಟಿಯಷ್ಟು ನಷ್ಟವಾಗಿದೆ ಎಂದು ಅಖಿಲ ಭಾರತ ಚಿಲ್ಲರೆ ವ್ಯಾಪಾರಿಗಳ ಒಕ್ಕೂಟ ಮಂಗಳವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 25ರಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ನಂತರ ದೇಶದ ಚಿಲ್ಲರೆ ಕ್ಷೇತ್ರದ ಮೇಲೆ ಭಾರಿ ಹೊಡೆತ ಬಿದಿದ್ದೆ. ಬರೋಬ್ಬರಿ 5.5 ಲಕ್ಷ ಕೋಟಿಯಷ್ಟು ನಷ್ಟವಾಗಿದೆ ಎಂದು ಅಖಿಲ ಭಾರತ ಚಿಲ್ಲರೆ ವ್ಯಾಪಾರಿಗಳ ಒಕ್ಕೂಟ ಮಂಗಳವಾರ ಹೇಳಿದೆ.

ದೇಶದ ಶೇ. 20 ರಷ್ಟು ಚಿಲ್ಲರೆ ಕ್ಷೇತ್ರದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಅವರು ಎಂದಿನಂತೆ ವ್ಯಾಪಾರದಲ್ಲಿ ತೊಡಗಲು ಇನ್ನೂ ಕೆಲವು ತಿಂಗಳುಗಳೇ ಬೇಕಾಗಲಿವೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಕ್ತ ಆರ್ಥಿಕ ನೆರವನ್ನು ಒದಗಿಸುವ ಮೂಲಕ ಈ ಕ್ಷೇತ್ರದ ವ್ಯಾಪಾರಿಗಳನ್ನು ಬೆಂಬಲಿಸಬೇಕಾಗಿದೆ ಎಂದು ಒಕ್ಕೂಟ ಹೇಳಿದೆ 

ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ದೇಶದ ಚಿಲ್ಲರೆ ಕ್ಷೇತ್ರದ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ. ಚಿಲ್ಲರೆ ವ್ಯಾಪಾರಿಗಳು ಪ್ರತಿದಿನ 15  ಸಾವಿರ ಕೋಟಿ ವ್ಯಾಪಾರ ಮಾಡುತ್ತಿದ್ದರು. 40 ದಿನಗಳಿಂದ ಲಾಕ್ ಡೌನ್ ಜಾರಿಯಾಗಿರುವುದರಿಂದ  ಏಳು ಕೋಟಿ ವ್ಯಾಪಾರಿಗಳ ಪೈಕಿ 1.5 ಕೋಟಿ ವ್ಯಾಪಾರಿಗಳು ಶಾಶ್ವತವಾಗಿ ಇನ್ನೂ ಕೆಲವು ತಿಂಗಳುಗಳ ಕಾಲ ವ್ಯಾಪಾರ ಬಂದ್ ಮಾಡುವಂತಾಗಿದೆ. 75 ಲಕ್ಷಕ್ಕೂ ಹೆಚ್ಚಿನ ವ್ಯಾಪಾರಿಗಳು ಮಧ್ಯಮ ಹಂತದಲ್ಲಿದ್ದಾರೆ ಎಂದು ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿಸಿ ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೆಲ್ ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಒಂದು ಕಡೆ ಚಿಲ್ಲರೆ ವ್ಯಾಪಾರಿಗಳಿಗೆ ತಿಂಗಳ ಸಂಬಳ, ಬಾಡಿಗೆ ಮತ್ತಿತರ ತಿಂಗಳ ವೆಚ್ಚ ತಗುಲಲಿದೆ. ಮತ್ತೊಂದೆಡೆ ಕಠಿಣ ಸಾಮಾಜಿಕ ಅಂತರ ನಿಯಮದಿಂದಾಗಿ ಗ್ರಾಹಕರಿಲ್ಲದೆ ಆದಾಯ ಕಡಿಮೆಯಾಗಿದೆ. ಎಂದಿನಂತೆ ವ್ಯಾಪಾರ ಮಾಡಲು ಪರಿಸ್ಥಿತಿ ಬರಲು ಕನಿಷ್ಠ ಆರರಿಂದ 9 ತಿಂಗಳುಗಳು ಬೇಕಾಗಲಿವೆ. ಮಾರಕ ಕಾಯಿಲೆಯಿಂದಾಗಿ ಚೇತರಿಕೆಯ ಭರವಸೆಗಳು ಬತ್ತಿ ಹೋಗಿವೆ. ಆರ್ಥಿಕ ಹೊಡೆತ ಸಾಂಕ್ರಾಮಿಕ ರೋಗಕ್ಕಿಂತಲೂ ಹೆಚ್ಚಾಗಿದೆ ಎಂದು ಭಾರ್ತಿಯಾ ಮತ್ತು ಖಂಡೆಲ್ ವಾಲ್ ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com