ಉದ್ಯೋಗಿಗಳಿಗೆ ವರ್ಷಾಂತ್ಯದವರೆಗೂ ವರ್ಕ್ ಫ್ರಮ್ ಹೋಮ್ ಸೌಲಭ್ಯ ನೀಡಲಿರುವ ಫೇಸ್ ಬುಕ್ 

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ವರ್ಷಾಂತ್ಯದ ವರೆಗೂ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಸೌಲಭ್ಯ ನೀಡಲಿದೆ. 
ಫೇಸ್ ಬುಕ್
ಫೇಸ್ ಬುಕ್

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ವರ್ಷಾಂತ್ಯದ ವರೆಗೂ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಸೌಲಭ್ಯ ನೀಡಲಿದೆ. 

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಫೇಸ್ ಬುಕ್ ಜಗತ್ತಿನಾದ್ಯಂತ ತನ್ನ ಕಚೇರಿಗಳನ್ನು ಜುಲೈ ತಿಂಗಳಿಗೂ ಮುನ್ನ ತೆರೆಯದೇ ಇರುವುದಕ್ಕೆ ನಿರ್ಧರಿಸಿದೆ. ಜು.06 ರಿಂದ ತನ್ನ ಕಚೇರಿಗಳನ್ನು ತೆರೆಯಲಿರುವ ಫೇಸ್ ಬುಕ್ ಮಾರ್ಚ್ ನಿಂದ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದ್ದು ಶೀಘ್ರವೇ ಸಿಇಒ ಮಾರ್ಕ್ ಝುಕರ್ಬರ್ಗ್ ಸಂಸ್ಥೆಯ ಪುನಾರಂಭದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.  

ಪ್ರಸ್ತುತ 48, 268 ಜನರಿಗೆ ಫೇಸ್ ಬುಕ್ ಉದ್ಯೋಗ ನೀಡಿದೆ. ಫೇಸ್ ಬುಕ್ ಈಗಾಗಲೇ ವ್ಯಕ್ತಿಗಳು ಉಪಸ್ಥಿತರಾಗಿದ್ದುಕೊಂಡು ನಡೆಸುವ ಸಭೆಗಳನ್ನು ರದ್ದುಗೊಳಿಸಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕವಷ್ಟೇ ಸಭೆಗಳನ್ನು ನಡೆಸುತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com