411 ಕೋಟಿ ರೂ. ಸಾಲ ಮರುಪಾವತಿಸದೆ ವಂಚಕರು ದೇಶದಿಂದ ಪರಾರಿ, 4 ವರ್ಷದ ಬಳಿಕ ದೂರು ದಾಖಲಿಸಿದ ಎಸ್ ಬಿಐ

ಆರು ಬ್ಯಾಂಕುಗಳ ಒಕ್ಕೂಟಕ್ಕೆ 411 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಇತ್ತೀಚಿಗೆ ರಾಮ್ ದೇವ್ ಇಂಟರ್ ನ್ಯಾಷನಲ್ ನ ಮೂವರ ಪ್ರವರ್ತಕರ ಮೇಲೆ ಸಿಬಿಐ ದೂರು ದಾಖಲಿಸಿಕೊಂಡಿದೆ
ಎಸ್ ಬಿಐ
ಎಸ್ ಬಿಐ

ನವದೆಹಲಿ: ಆರು ಬ್ಯಾಂಕುಗಳ ಒಕ್ಕೂಟಕ್ಕೆ 411 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಇತ್ತೀಚಿಗೆ ರಾಮ್ ದೇವ್ ಇಂಟರ್ ನ್ಯಾಷನಲ್ ನ ಮೂವರ ಪ್ರವರ್ತಕರ ಮೇಲೆ ಸಿಬಿಐ ದೂರು ದಾಖಲಿಸಿಕೊಂಡಿದೆ. ಆದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬಿಐನಲ್ಲಿ ದೂರು ದಾಖಲಿಸುವ ಮುಂಚಿತವಾಗಿಯೇ ಅವರು ದೇಶದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

173 ಕೋಟಿ ಹೆಚ್ಚು ನಷ್ಟದಿಂದ ತೊಂದರೆ ಅನುಭವಿಸುತ್ತಿರುವುದಾಗಿ ಎಸ್ ಬಿಐ ದೂರು ದಾಖಲಿಸಿದ ನಂತರ 
ಬಸ್ಮಾತಿ ಅಕ್ಕಿಯನ್ನು ಪೂರ್ವ ಏಷ್ಯಾ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ರಪ್ತು ಮಾಡುತ್ತಿದ್ದ  ರಾಮ್ ದೇವ್ ಇಂಟರ್ ನ್ಯಾಷನಲ್ ಕಂಪನಿ ಮತ್ತು ಅದರ ನಿರ್ದೇಶಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್ ಮತ್ತು ಸಂಗೀತಾ ವಿರುದ್ಧ ಸಿಬಿಐ ಇತ್ತೀಚಿಗೆ ಪ್ರಕರಣ ದಾಖಲಿಸಿತ್ತು ಎಂದು ಅವರು ಹೇಳಿದ್ದಾರೆ. 

ಕಂಪನಿಯು ಮೂರು ಅಕ್ಕಿ ಮಿಲ್ಲಿಂಗ್ ಸ್ಥಾವರಗಳನ್ನು ಹೊಂದಿತ್ತು, ಜೊತೆಗೆ ಕರ್ನಾಲ್ ಜಿಲ್ಲೆಯಲ್ಲಿ ಎಂಟು ವಿಂಗಡಣೆ ಮತ್ತು ಶ್ರೇಣೀಕರಣ ಘಟಕಗಳು ವ್ಯಾಪಾರ ಉದ್ದೇಶಗಳಿಗಾಗಿ ಸೌದಿ ಅರೇಬಿಯಾ ಮತ್ತು ದುಬೈನಲ್ಲಿ ಕಚೇರಿಗಳನ್ನು ಹೊಂದಿವೆ ಎಂದು ಎಸ್ ಬಿಐ ದೂರಿನಲ್ಲಿ ಉಲ್ಲೇಖಿಸಿತ್ತು.

ಮೂರು ರೈಸ್ ಮಿಲ್ಲಿಂಗ್ ಸ್ಥಾವರಗಳನ್ನು ಹೊಂದಿರುವ ಕಂಪನಿ, ಕರ್ನಾಲ್ ಜಿಲ್ಲೆಯಲ್ಲಿ ಎಂಟು ವಿಂಗಡಣೆ ಮತ್ತು ಗ್ರೇಡಿಂಗ್ ಯೂನಿಟ್ ಗಳನ್ನು ಹೊಂದಿತ್ತು. ವ್ಯಾಪಾರದ ಉದ್ದೇಶದಿಂದ ಸೌಧಿ ಅರಬೀಯಾ ಮತ್ತು ದುಬೈನಲ್ಲಿ ಕಚೇರಿಯನ್ನು ಹೊಂದಿದೆ ಎಂದು ಎಸ್ ಬಿಐ ಹೇಳಿದೆ.

ಎಸ್ ಬಿಐ ಜೊತೆಗೆ ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕಾರ್ಪೋರೇಷನ್ ಬ್ಯಾಂಕ್ ಗಳು ಸಹ ಒಕ್ಕೂಟದ ಸದಸ್ಯರಾಗಿದ್ದಾರೆ.ಕೊರೋನಾವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಬಿಐ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಶೋಧ ಕಾರ್ಯ ಕೈಗೊಂಡಿಲ್ಲ, ಸಿಬಿಐ ಆರೋಪಿಗಳಿಗೆ ಸಮನ್ಸ್ ನೀಡುವ ಪ್ರಕ್ರಿಯೆ ಆರಂಭಿಸಲಿದೆ. ಅವರು ವಿಚಾರಣೆಗೆ ಸಹಕರಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. 

ವಿಚಾರಣೆ ನಡೆಸಿದಾಗ ಸಾಲಗಾರರು ಪರಾರಿಯಾಗಿದ್ದಾರೆ ಮತ್ತು ದೇಶವನ್ನು ತೊರೆದಿದ್ದಾರೆ ಎಂದು ಗಮನಕ್ಕೆ ಬಂದಿದೆ ಎಂದು ಫೆಬ್ರವರಿ 25, 2020ರಲ್ಲಿ ಬ್ಯಾಂಕ್ ದೂರು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com