ಪ್ರಧಾನಿ ಮೋದಿ ಆರ್ಥಿಕ ಪರಿಹಾರ ಘೋಷಣೆ: ಸೆನ್ಸೆಕ್ಸ್, ನಿಫ್ಟಿ ಶೇ.4ರಷ್ಟು ಇಂದು ಏರಿಕೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ನಂತರ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಬುಧವಾರ ಬೆಳಗಿನ ವಹಿವಾಟು ಆರಂಭಕ್ಕೆ ಏರಿಕೆ ಕಂಡುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ನಂತರ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಬುಧವಾರ ಬೆಳಗಿನ ವಹಿವಾಟು ಆರಂಭಕ್ಕೆ ಏರಿಕೆ ಕಂಡುಬಂದಿದೆ.

ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಶೇಕಡಾ 4.70ರಷ್ಟು ಅಂದರೆ 1,474.36 ಅಂಕ ಏರಿಕೆಯಾಗಿ ವಹಿವಾಟು ಆರಂಭದ ಕೆಲವೇ ನಿಮಿಷಗಳಲ್ಲಿ 32 ಸಾವಿರದ 845ಕ್ಕೆ ತಲುಪಿತ್ತು.

ನಿಫ್ಟಿ ಶೇಕಡಾ 4.22ರಷ್ಟು ಅಂದರೆ 9 ಸಾವಿರದ 584ರಷ್ಟು ಏರಿಕೆ ಕಂಡು 9 ಸಾವಿರದ 196ರಲ್ಲಿ ವಹಿವಾಟು ನಡೆಸಿತು.

ಐಟಿ ಕ್ಷೇತ್ರ ಹೊರತುಪಡಿಸಿ ಹಣಕಾಸು ಮತ್ತು ಆಟೊಮೊಬೈಲ್ ಕ್ಷೇತ್ರಗಳ ಷೇರು ಬೆಲೆ ಸೂಚ್ಯಂಕ ಏರಿಕೆ ಕಂಡುಬಂದಿದೆ. ನಿಫ್ಟಿಯ 50 ಷೇರುಗಳಲ್ಲಿ 46 ಕಂಪೆನಿಗಳ ಷೇರುಗಳು ಏರಿಕೆಯಾಗಿವೆ. ಐಸಿಐಸಿಐ ಬ್ಯಾಂಕು, ಲಾರ್ಸೆನ್ ಅಂಡ್ ಟೌಬ್ರೊ, ಶ್ರೀ ಸಿಮೆಂಟ್, ಅಲ್ಟ್ರಾ ಟೆಕ್ ಸಿಮೆಂಟ್, ಆಕ್ಸಿಸ್ ಬ್ಯಾಂಕು, ಬಜಾಜ್ ಫೈನಾನ್ಸ್ ಗಳು ಶೇಕಡಾ 4.36ರಿಂದ ಶೇಕಡಾ 6.37ರ ಮಧ್ಯೆ ವಹಿವಾಟು ನಡೆಸುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com