ಬ್ಯಾಂಕ್ ಗಳಿಂದ ಸಾಲ, ವೇತನ ಪ್ರೋತ್ಸಾಹ ಧನಕ್ಕೆ ಎಂಎಸ್ ಎಂಇ ಉದ್ಯಮಗಳ ಒತ್ತಾಯ

ಲಾಕ್ ಡೌನ್  ತೀವ್ರತೆಯನ್ನು ಭರಿಸಲು ಅತಿಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿದ್ದರೂ ಈ ವಲಯದಲ್ಲಿ ಅಸಮಾಧಾನ ಕೇಳಿಬರುತ್ತಿದೆ.
ಕಾಸಿಯಾ
ಕಾಸಿಯಾ

ಬೆಂಗಳೂರು: ಲಾಕ್ ಡೌನ್  ತೀವ್ರತೆಯನ್ನು ಭರಿಸಲು ಅತಿಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿದ್ದರೂ ಈ ವಲಯದಲ್ಲಿ ಅಸಮಾಧಾನ ಕೇಳಿಬರುತ್ತಿದೆ.

ಹಣಕಾಸು ಸಚಿವರು ಘೋಷಿಸಿರುವ ಆತ್ಮನಿರ್ಭರ್ ಪ್ಯಾಕೇಜಿನ ಆಶಯವನ್ನು ಸ್ವಾಗತಿಸುತ್ತೇವೆ. ಆದರೆ, ಅದು ಸಾಕಷ್ಟು ಅಸಮರ್ಪಕವಾಗಿದೆ. ಲಾಕ್ ಡೌನ್ ನಿಂದ ಇಡೀ ವ್ಯಾಪಾರಿ ಸಮುದಾಯಕ್ಕೆ ಹೊಡೆತ ಬಿದ್ದಿದೆ ಎಂದು ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ದೇವೇಶ್ ಅಗರ್ ವಾಲ್ ಹೇಳಿದ್ದಾರೆ.

 ಮಾರುಕಟ್ಟೆ ಮತ್ತು ಸರ್ಕಾರದ ಸುರಕ್ಷತಾ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಬದಲು, ಎಂಎಸ್ ಎಂಇಗಳಿಗೆ ಸಾಲ ನೀಡುವಂತೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕಡ್ಡಾಯವಾಗಿ ನಿರ್ದೇಶನ ನೀಡಬೇಕು ಎಂಬುದು ಬೆಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಘದ ಪ್ರಮುಖ ಉದ್ದೇಶವಾಗಿದೆ. 

ಈ ಘಟಕಗಳ ಪಿಎಫ್, ಇಎಸ್ ಐ ಪಾವತಿಯಾಗದ ಪಂಡ್ ಬಳಸಿಕೊಂಡು ಶೇ, 70 ರಷ್ಟು ಸಂಬಳ ಪಾವತಿ ಮಾಡುವ ಮೂಲಕ ಎಂಎಸ್ ಎಂಇಗಳಿಗೆ ಪ್ರೋತ್ಸಾಹಿಸಬೇಕಾಗಿದೆ. ಮೂರು ತಿಂಗಳವರೆಗೆ ಬಡ್ಡಿ ಪಾವತಿ ಮನ್ನಾ ಮಾಡಬೇಕು, ಮುಂದಿನ ಮೂರು ತಿಂಗಳವರೆಗೂ ಶೇ, 4ರ ಬಡ್ಡಿದರದಲ್ಲಿ ಬ್ಯಾಂಕ್ ಗಳು ಹಣಕಾಸು ಸೌಲಭ್ಯ ನೀಡಬೇಕು. ಕಡಿಮೆ ದರದೊಂದಿಗೆ ಎಂಎಸ್ ಎಂಇಗಳ ಕೆಲಸದ ಸಾಮರ್ಥ್ಯವನ್ನು ಶೇ. 40 ರಷ್ಟು ಹೆಚ್ಚಿಸಬೇಕು, ಒಂದು ವರ್ಷದವರೆಗೂ ಜಿಎಸ್ ಟಿ ಪಾವತಿಯನ್ನು ಸಡಿಲಗೊಳಿಸಬೇಕು ಎಂದು ಕಾಸಿಯಾ ಅಧ್ಯಕ್ಷ ಆರ್ ರಾಜ್ ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com