ಕೋವಿಡ್ ಸಂಕಷ್ಟ: ಹೆಚ್ಚಿನ ಸೋಂಕಿತರ ಹೊಂದಿರುವ ಎಂಟು ರಾಜ್ಯಗಳು, ಜಿಡಿಪಿಯ ಶೇಕಡಾ 60ರಷ್ಟು ಕುಸಿತ ಸಾಧ್ಯತೆ

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ದೇಶದ ಎಂಟು ರಾಜ್ಯಗಳು ತೀವ್ರ ಪರಿಣಾಮ ಎದುರಿಸುತ್ತಿದ್ದು ಇದು ದೇಶದ ಒಟ್ಟಾರೆ  ಜಿಡಿಪಿಯ ಶೇಕಡಾ 60 ರಷ್ಟರ ಮೇಲೆ ಪರಿಣಾಮವಾಗಲಿದೆ, ಇದರಿಂದ ದೇಶದ ಆರ್ಥಿಕತೆ ತೀವ್ರ ಸಂಕಷ್ಟ ಎದುರಿಸುತ್ತಿದೆ ಎಂದು ವರದಿಯೊಂದು ಹೇಳಿದೆ.

Published: 19th May 2020 07:08 PM  |   Last Updated: 19th May 2020 07:08 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : PTI

ಮುಂಬೈ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ದೇಶದ ಎಂಟು ರಾಜ್ಯಗಳು ತೀವ್ರ ಪರಿಣಾಮ ಎದುರಿಸುತ್ತಿದ್ದು ಇದು ದೇಶದ ಒಟ್ಟಾರೆ  ಜಿಡಿಪಿಯ ಶೇಕಡಾ 60 ರಷ್ಟರ ಮೇಲೆ ಪರಿಣಾಮವಾಗಲಿದೆ, ಇದರಿಂದ ದೇಶದ ಆರ್ಥಿಕತೆ ತೀವ್ರ ಸಂಕಷ್ಟ ಎದುರಿಸುತ್ತಿದೆ ಎಂದು ವರದಿಯೊಂದು ಹೇಳಿದೆ.

ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ ಎಂಟು ರಾಜ್ಯಗಳು ಶೇಕಡಾ 58 ರಷ್ಟು ಉದ್ಯೋಗಿಗಳನ್ನು ಹೊಂದಿದ್ದು ಕೊರೋನಾ ಕಾರಣದಿಂದಾಗಿ ಅಲ್ಲಿನ ಆರ್ಥಿಕತೆ ತೀವ್ರ ಕುಸಿತ ಕಾಣಬಹುದು ಎಂದು ದೇಶೀಯ ರೇಟಿಂಗ್ ಏಜೆನ್ಸಿ ಕ್ರಿಸಿಲ್ ಸಂಶೋಧನಾ ವಿಭಾಗವು ವರದಿ ನೀಡಿದೆ.

ದೇಶದಲ್ಲಿ ಕೋವಿಡ್ ದಿನೇ ದಿನೇ ಹೆಚ್ಚುತ್ತಿದ್ದು ಗ್ರೀನ್, ರೆಡ್, ಆರೆಂಜ್ ಝೋನ್ ಗಳ ಶ್ರೇಣಿಯನ್ನು ನಿರ್ಧರಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸ್ವಾತಂತ್ರ್ಯ ನೀಡಿದ್ದು ಮೂರನೇ ಬಾರಿಗೆ ಲಾಕ್ ಡೌನ್ ಅನ್ನು  ಮೇ 31 ರವರೆಗೆ ವಿಸ್ತರಿಸಿದೆ.

ಮಹಾರಾಷ್ಟ್ರದಂತಹ ಅನೇಕ ಕೊರೋನಾ ಪೀಡಿತ ರಾಜ್ಯಗಳು ರ್ಬಂಧಗಳನ್ನು ಮುಂದುವರಿಸಲು ನಿರ್ಧರಿಸಿದೆ. ಜತೆಗೆ ಉತ್ತೇಜಕ ಪ್ಯಾಕೇಜ್ ಗಳನ್ನು ಸಹ ಘೋಷಿಸುವ ಸರ್ಕಾರದ ಕ್ರಮ ಹೊರತಾಗಿಯೂ ಜಿಡಿಪಿಯಲ್ಲಿ ಶೇಕಡಾ 5ರಷ್ಟು ಕುಸಿತವನ್ನು ವಿಶ್ಲೇಷಕರು  ಅಂದಾಜಿಸಿದ್ದಾರೆ.ರಾಜ್ಯಗಳು ಪ್ರಕರಣಗಳ ಏರಿಕೆಯನ್ನು ಕಾಣುತ್ತಿರುವುದರಿಂದ ರ್ಬಂಧಗಳನ್ನು ವಿಸ್ತರಿಸಲಾಗಿದೆ. ಇದು ಒಟ್ಟಾರೆ ಆರ್ಥಿಕತೆಯನ್ನು ಕಠಿಣಗೊಳಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾನುವಾರ ನಡೆದ ಮೂರನೇ ಲಾಕ್‌ಡೌನ್ ಅಂತ್ಯದ ವೇಳೆಗೆ ಪೀಡಿತ ಜಿಲ್ಲಾವಾರು ವರದಿಯಂತೆ ಎಂಟು ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ"ಅಖಿಲ ಭಾರತ ಮಟ್ಟದಲ್ಲಿ, ವೈರಸ್ ಹರಡುವಿಕೆ ಮತ್ತು ಲಾಕ್‌ಡೌನ್ನಿರ್ಬಂಧಗಳು ಆರ್ಥಿಕ ಚಟುವಟಿಕೆಯನ್ನು ಕುಂಠಿತಗೊಳಿಸಿವೆ. ಮೊದಲ ಮತ್ತು ಎರಡನೆಯ ಲಾಕ್‌ಡೌನ್ ಹಂತಗಳಲ್ಲಿ ಎಲ್ಲಾ ರಾಜ್ಯಗಳು ಏಕರೂಪವಾಗಿ ನಿಯಮ ಪಾಲಿಸಿದ್ದರೂ ರನೆಯ ಮತ್ತು ನಾಲ್ಕನೆಯ ಅವಧಿಯಲ್ಲಿ ಆಯಾ ರಾಜ್ಯಗಳಲ್ಲಿ ವಿಭಿನ್ನ ನೀತಿ ಅನುಸರಿಸಲಾಗಿದೆ"

ಕೈಗಾರಿಕೆ ಮತ್ತು ಸೇವಾಕ್ಷೇತ್ರದಲ್ಲಿ ಉತ್ಪಾದನೆಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್, ನಿರ್ಬಂಧಗಳನ್ನು ವಿಸ್ತರಿಸಿರುವ ಕಾರಣ  ಉತ್ಪಾದನಾ ನಷ್ಟ ಹೆಚ್ಚಾಗಲಿದೆ. ತುಲನಾತ್ಮಕವಾಗಿ ಹೆಚ್ಚಿನ ಸಾಲದ ಹೊರೆಯಿಂದಾಗಿ ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶವು ಹಣಕಾಸಿನ  ಸ್ಥಿತಿಗತಿಯನ್ನು ಗಮನಿಸಿದರೆ ದುರ್ಬಲವಾಗಿದೆ. ಟ್ರೋಲಿಯಂ, ಮದ್ಯ ಮತ್ತು ಸ್ಟಾಂಪ್ ಡ್ಯೂಟಿಯಿಂದ ಬರುವ ಆದಾಯ ಮೂಲಗಳ ಮೇಲೆ ಈ ರಾಜ್ಯಗಳು ಹೆಚ್ಚು ಅವಲಂಬಿತವಾಗಿವೆ. ಎಂಟು ಸಾಂಕ್ರಾಮಿಕ ಪೀಡಿತ ರಾಜ್ಯಗಳಲ್ಲಿ ನಿರ್ಬಂಧ ಎದುರಿಸುತ್ತಿರುವಾಗ ಉತ್ಪಾದನೆ ವಲಯ ಹೆಚ್ಚಾಗಿ ಪರಿಣಾಮವನ್ನು ಎದುರಿಸುತ್ತದೆ., ಈ ರಾಜ್ಯಗಳಿಂದ ಒಟ್ಟು ರಾಜ್ಯ ಮೌಲ್ಯವರ್ಧಿತ (ಜಿಎಸ್ವಿಎ) ಪಾಲು ಕೃಷಿಯಲ್ಲಿ 64 ಪ್ರತಿಶತ ಇದ್ದರೆ ಕೈಗಾರಿಕೆಗಳಲ್ಲಿ  ಶೇಕಡಾ 63 ಸೇವಾಕ್ಷೇತ್ರದಲ್ಲಿ ಶೇ. 53 ಇದೆ.

ಆಂಧ್ರಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ,  ಪಶ್ಚಿಮ ಬಂಗಾಳದಂತಹ ಕೃಷಿಯ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವ ರಾಜ್ಯಗಳಲ್ಲಿ ಸಾಮಾನ್ಯ ಮಾನ್ಸೂನ್  ಬೆಂಬಲ ಸಿಗುವ ನಿರೀಕ್ಷೆಯಿರುವುದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ವರದಿಯಲ್ಲಿ ಹೇಳಿದೆ.ತುಲನಾತ್ಮಕವಾಗಿ ಕಡಿಮೆ ಪೀಡಿತ ರಾಜ್ಯಗಳಲ್ಲಿ, ನಿರ್ಬಂಧಗಳಿಂದಾಗಿ ಕರ್ನಾಟಕ, ಮತ್ತು ಕೇರಳವನ್ನು ಸಂಕಷ್ಟಕ್ಕೆ ನೂಕಬಹುದು.ಅಲ್ಲಿ ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳು ಹೆಚ್ಚಾಗಿ ಇದ್ದು ಮಧ್ಯಪ್ರದೇಶ, ಪಂಜಾಬ್, ಬಿಹಾರದಂತಹ ಇತರ  ರಾಜ್ಯಗಳಲ್ಲಿ ಕೃಷಿಯ ಹೆಚ್ಚಿನ ಪಾಲು ಈ ವರ್ಷ ಆರ್ಥಿಕತೆಯನ್ನು ಮೇಲೆತ್ತಲು ಸಹಕಾರಿಯಾಗಲಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp