ಎನ್‍ಬಿಎಫ್‍ಸಿಗಳು, ಎಚ್‍ಎಫ್‍ಸಿಗಳಿಗೆ ವಿಶೇಷ ನಗದೀಕರಣ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ!

ನೂತನ ವಿಶೇಷ ನಗದೀಕರಣ ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಗೃಹ ಹಣಕಾಸು ಕಂಪೆನಿಗಳ ನಗದೀಕರಣ ಸ್ಥಿತಿ ಸುಧಾರಿಸಲು ಈ ಕಂಪೆನಿಗಳಿಗೆ ನೂತನ ವಿಶೇಷ ನಗದೀಕರಣ ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ಯೋಜನೆಯಿಂದ ಸರ್ಕಾರಕ್ಕೆ 5 ಕೋಟಿ ರೂ. ನೇರ ಆರ್ಥಿಕ ಹೊರೆಯಾಗಲಿದ್ದು, ಇದು ವಿಶೇಷ ಉದ್ದೇಶಕ ವಾಹಕ(ಎಸ್‍ಪಿವಿ) ಗೆ ಈಕ್ವಿಟಿ ಕೊಡುಗೆ ನೀಡಲಿದೆ. ಅಲ್ಲದೆ, ಜಾಮೀನುದಾರ ಸಂಸ್ಥೆಗಳನ್ನು ರದ್ದುಪಡಿಸುವವರೆಗೆ ಸರ್ಕಾರದ ಮೇಲೆ ಇದರಿಂದ ಆರ್ಥಿಕ ಪರಿಣಾಮ ಉಂಟಾಗುವುದಿಲ್ಲ.

ವಿಶೇಷ ಉದ್ದೇಶಕ ವಾಹಕ(ಎಸ್‍ಪಿವಿ) ಮೂಲಕ ಬ್ಯಾಂಕೇತರ ಹಣಕಾಸು ಕಂಪೆನಿಗಳು, ವಸತಿ ಹಣಕಾಸು ಕಂಪೆನಿಗಳ ನಗದೀಕರಣ ಸಮಸ್ಯೆಗಳನ್ನು ಪರಿಹಾರಕ್ಕೆ ಕಾರ್ಯಚೌಕಟ್ಟು ರೂಪಿಸಲು ಸರ್ಕಾರ ಉದ್ದೇಶಿಸಿದೆ.

ಎಸ್‍ಪಿವಿ ನಿರ್ವಹಣೆಗೆ ದೊಡ್ಡ ಸಾರ್ವಜನಿಕ ಬ್ಯಾಂಕ್‍ ಅನ್ನು ನಿಯೋಜಿಸಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com