10 ರಲ್ಲಿ ಓರ್ವ ಉದ್ಯೋಗಿಯ ಕೆಲಸಕ್ಕೆ ಕತ್ತರಿ, ಕೆಲಸ ಕಳೆದುಕೊಳ್ಳುವುದು ಖಾತ್ರಿ ಎನ್ನುತ್ತಿದ್ದಾರೆ ಬಹುತೇಕ ಮಂದಿ!

ಕೊರೋನಾ ಲಾಕ್ ಡೌನ್ ನಿಂದಾಗಿ ಬಹುತೇಕ ಮಂದಿ ಕೆಲಸ ಕಳೆದುಕೊಂಡಿದ್ದರೆ ಇನ್ನೂ ಕೆಲವರು ವೇತನ ಕಡಿತ ಎದುರಿಸುತ್ತಿದ್ದಾರೆ. 
ಉದ್ಯೋಗ
ಉದ್ಯೋಗ

ನವದೆಹಲಿ: ಕೊರೋನಾ ಲಾಕ್ ಡೌನ್ ನಿಂದಾಗಿ ಬಹುತೇಕ ಮಂದಿ ಕೆಲಸ ಕಳೆದುಕೊಂಡಿದ್ದರೆ ಇನ್ನೂ ಕೆಲವರು ವೇತನ ಕಡಿತ ಎದುರಿಸುತ್ತಿದ್ದಾರೆ. 

ಈ ಸನ್ನಿವೇಶದ ಬಗ್ಗೆ ನೌಕರಿ.ಕಾಮ್ (naukri.com) ಸಮೀಕ್ಷೆ ನಡೆಸಿದ್ದು, ಉದ್ಯೋಗಿಗಳ ಪರಿಸ್ಥಿತಿಯ ಬಗ್ಗೆ ವರದಿ ಪ್ರಕಟಿಸಿದೆ. ಸಮೀಕ್ಷೆಯ ಪ್ರಕಾರ 10 ಉದ್ಯೋಗಿಗಳ ಪೈಕಿ 1 ಉದ್ಯೋಗಿ ಕೆಲಸ ಕಳೆದುಕೊಂಡಿರುವುದನ್ನು ಖಚಿತಪಡಿಸಿದ್ದರೆ 10 ಉದ್ಯೋಗಿಗಳ ಪೈಕಿ ಮೂವರು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. 

ಈಗಾಗಲೇ ಕೆಲಸ ಕಳೆದುಕೊಂಡಿರುವ ಶೇ.10 ರಷ್ಟು ಉದ್ಯೋಗಳ ನಡುವೆ ಶೇ.15 ರಷ್ಟು ಉದ್ಯೋಗಿಗಳು ವಿಮಾನಯಾನ ಕ್ಷೇತ್ರಕ್ಕೆ ಹಾಗೂ ಇ-ಕಾಮರ್ಸ್ ಕ್ಷೇತ್ರದವರಾಗಿದ್ದಾರೆ. ಶೇ.14 ರಷ್ಟು ಉದ್ಯೋಗಿಗಳು ಸೇವಾ ವಲಯದಲ್ಲಿರುವವರಾಗಿದ್ದಾರೆ. 

ಅತಿ ಹೆಚ್ಚು ಸೇವಾ ಅನುಭವ ಹೊಂದಿರುವ ಹಿರಿಯ ಉದ್ಯೋಗಿಗಳೂ ಸಹ ಕೆಲಸ ಕಳೆದುಕೊಂಡಿದ್ದು, ಶೇ.13 ರಷ್ಟು ಮಂದಿ 11 ವರ್ಷಗಳಷ್ಟು ಕೆಲಸದ ಅನುಭವ ಹೊಂದಿದ್ದು ಮಾರಾಟ (ಶೇ.12 ರಷ್ಟು ಮಂದಿ ಉದ್ಯೋಗಕ್ಕೆ ಕತ್ತರಿ) ಮಾನವ ಸಂಪನ್ಮೂಲ ಹಾಗೂ ಅಡ್ಮಿನ್ (ಶೇ.12 ರಷ್ಟು) ಮಾರ್ಕೆಟಿಂಗ್ (ಶೇ.11 ರಷ್ಟು) ಆಪರೇಷನ್ಸ್/ಸಪ್ಲೈ ಚೈನ್ (ಶೇ.11 ರಷ್ಟು) ವಿಭಾಗದಲ್ಲಿ ಉದ್ಯೋಗ ನಷ್ಟ ಎದುರಿಸಿದ್ದಾರೆ. 

ಇನ್ನು ಈ ಲಾಕ್ ಡೌನ್ ಪರಿಣಾಮವಾಗಿ ಉತ್ತಮವಾದ ಉದ್ಯೋಗಾವಕಾಶಗಳನ್ನು ಶೇ.70 ರಷ್ಟು ಮಂದಿ ಅರಸುತ್ತಿದ್ದಾರೆ. ಶೇ.16 ರಷ್ಟು ಮಂದಿ ವೇತನ ಕಡಿತದ ಪರಿಣಾಮವಾಗಿ ಬೇರೆ ಉದ್ಯೋಗಗಳನ್ನು ಹುಡುಕುತ್ತಿದ್ದಾರೆ ಎಂಬ ಮಾಹಿತಿ 50,000 ಉದ್ಯೋಗಾಕಾಂಕ್ಷಿಗಳ ಸಮೀಕ್ಷೆ ಮೂಲಕ ಬಹಿರಂಗವಾಗಿದೆ.
 
ಐಟಿ, ಫಾರ್ಮಾ, ವೈದ್ಯಕೀಯ/ಆರೋಗ್ಯ ಹಾಗೂ ಬಿಎಫ್ಎಸ್ಐ ಕೈಗಾರಿಕೆಗಳು ಉದ್ಯೋಗ ಕಡಿತದಿಂದ ಹೊರತಾದ ಕ್ಷೇತ್ರಗಳಾಗಿವೆ ಎಂದು ನೌಕರಿ.ಕಾಂ ನ ಮುಖ್ಯ ಉದ್ಯಮ ಅಧಿಕಾರಿ ಪವನ್ ಗೋಯಲ್ ಮಾಹಿತಿ ನೀಡಿದ್ದಾರೆ. 

ಇನ್ನು ಸಕಾರಾತ್ಮಕವಾದ ಅಂಶವೊಂದು ಲಾಕ್ ಡೌನ್ ನಲ್ಲಿದ್ದು, ಶೇ.50 ರಷ್ಟು ಉದ್ಯೋಗಾಕಾಂಕ್ಷಿಗಳು ಲಾಕ್ ಡೌನ್ ಸಮಯವನ್ನು ತಮ್ಮ ಕೌಶಲ್ಯಗಳನ್ನು ವೃದ್ಧಿ ಮಾಡಿಕೊಳ್ಳುವುದರತ್ತ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರ ಪವನ್ ಗೋಯಲ್
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com