ಭಾರತದ ಓಲಾ ತೆಕ್ಕೆಗೆ ನೆದರ್ಲ್ಯಾಂಡ್ ನ ಆ್ಯಪ್ ಸ್ಕೂಟರ್ ಸಂಸ್ಥೆ ಎಟರ್ಗೊ: 2021 ಕ್ಕೆ ಓಲಾ ದ್ವಿಚಕ್ರ ವಾಹನ

ಭಾರತೀಯ ರೈಡ್ ಶೇರಿಂಗ್ ಆಪ್ ಸಂಸ್ಥೆ ಓಲಾ ನೆದರ್ಲ್ಯಾಂಡ್ ನ ಎಟರ್ಗೊ ಆ್ಯಪ್ ಸ್ಕೂಟರ್ ತಯಾರಿಕಾ ಸಂಸ್ಥೆಯನ್ನು ಖರೀದಿಸಿದೆ. 
ಓಲಾ ವಿಚ್ಯುತ್ ಚಾಲಿತ ವಾಹನಗಳು (ಸಂಗ್ರಹ ಚಿತ್ರ)
ಓಲಾ ವಿಚ್ಯುತ್ ಚಾಲಿತ ವಾಹನಗಳು (ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯ ರೈಡ್ ಶೇರಿಂಗ್ ಆ್ಯಪ್ ಸಂಸ್ಥೆ ಓಲಾ, ನೆದರ್ಲ್ಯಾಂಡ್ ನ ಎಟರ್ಗೊ ಆ್ಯಪ್ ಸ್ಕೂಟರ್ ತಯಾರಿಕಾ ಸಂಸ್ಥೆಯನ್ನು ಖರೀದಿಸಿದೆ. 

ಪ್ರಶಸ್ತಿ ಪುರಸ್ಕೃತ ಆ್ಯಪ್ ಸ್ಕೂಟರ್ ಗಳಿಗಾಗಿ ಎಟರ್ಗೋ ಖ್ಯಾತಿ ಪಡೆದಿದ್ದು, 2021 ರ ವೇಳೆಗೆ ವಿದ್ಯುತ್ ಚಾಲಿತ ದ್ವಿಚಕ್ರವಾಹನಗಳನ್ನು ಭಾರತದ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. 

ಭಾರತದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರವಾಹನಗಳನ್ನು 2021 ರಲ್ಲಿ ಪರಿಚಯಿಸುವ ಉದ್ದೇಶ ಹೊಂದಿರುವ ಓಲಾ ಎಲೆಕ್ಟ್ರಿಕ್ ಸಂಸ್ಥೆ ವಿದ್ಯುತ್ ಚಾಲಿತ ವಾಹನಗಳನ್ನು ಹಾಗೂ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಪ್ರಾಯೋಗಿಕ ಕೆಲಸವನ್ನು ಈಗಾಗಲೇ ಹಲವು ನಗರಗಳಲ್ಲಿ ಪ್ರಾರಂಭಿಸಿದೆ. 
 
ವಿದ್ಯುತ್ ಹಾಗೂ ಡಿಜಿಟಲ್ ಸಂಪರ್ಕದ ಸಾಮರ್ಹ್ಯದಿಂದ ಮುಂದಿನ ದಿನಗಳಲ್ಲಿ ನಗರ ಪ್ರದೇಶಗಳಾದ್ಯಂತ ದ್ವಿಚಕ್ರ ವಾಹನಗಳು ಮಹತ್ವದ ಪಾತ್ರ ವಹಿಸಲಿದೆ. ಭಾರತದಲ್ಲಿ ಅತ್ಯುತ್ತಮ ವಿದ್ಯುತ್ ಚಾಲಿತ ವಾಹನಗಳು ತಯಾರಾಗಬೇಕಾಗಿರುವುದರಿಂದ ಇಂಜಿನಿಯರಿಂಗ್, ವಿನ್ಯಾಸ ಹಾಗೂ ಉತ್ಪಾದನೆಗೆ ಸಂಬಂಧಿಸಿದಂತೆ ಅತ್ಯುತ್ತಮವಾದ ಜಾಗತಿಕ ಸಾಮರ್ಥ್ಯಗಳನ್ನು ಕಟ್ಟಲು ಎದುರು ನೋಡುತ್ತಿದ್ದೇವೆ ಎಂದು ಓಲಾ ಎಲೆಕ್ಟ್ರಿಕ್ ನ ಸ್ಥಾಪಕ ಹಾಗೂ ಅಧ್ಯಕ್ಷ ಭವಿಶ್ ಅಗರ್ವಾಲ್ ತಿಳಿಸಿದ್ದಾರೆ.

ಇನ್ನು 2014 ರಲ್ಲಿ ಸ್ಥಾಪನೆಯಾಗಿರುವ ನೆದರ್ಲ್ಯಾಂಡ್ ನ ಎಟರ್ಗೊ ಆ್ಯಪ್ ಸ್ಕೂಟರ್ ತಯಾರಿಕಾ ಸಂಸ್ಥೆ ನವೀನ ಮಾದರಿಗಳ ವಿನ್ಯಾಸ ಹಾಗೂ ತಂತ್ರಜ್ಞಾನಗಳಿಗಾಗಿ ಜಾಗತಿಕ ಮಟ್ಟದಲ್ಲಿ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದೆ. ಎಟರ್ಗೊ ಆ್ಯಪ್ ಸ್ಕೂಟರ್ ತಯಾರಿಕಾ ಸಂಸ್ಥೆ 240 ಕಿ.ಮೀ ಸಂಚಾರದ ಸಾಮರ್ಥ್ಯವುಳ್ಳ ಬ್ಯಾಟರಿಗಳನ್ನು 2018 ರಲ್ಲಿ ತಯಾರಿಸಿತ್ತು. 

ಜಗತ್ತು ಬದಲಾಗುತ್ತಿರುವಂತೆ ವಿದ್ಯುತ್ ಚಾಲಿತ ವಾಹನಗಳನ್ನೂ ಬದಲಾವಣೆ ಮಾಡುವುದಕ್ಕೆ ನಾವು ಓಲಾ ಎಲೆಟ್ರಿಕ್ ಜೊತೆ ಕೈ ಜೋಡಿಸಲು ಉತ್ಸುಕರಾಗಿದ್ದೆವೆ ಎಂದು ಎಟರ್ಗೊದ ಸಿಇಒ ಹಾಗೂ ಸಹ ಸಂಸ್ಥಾಪಕ ಬಾರ್ಟ್ ಜಾಕೋಬ್ಸ್ ರೋಸಿಯರ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com