ಕೊರೋನಾ ಎಫೆಕ್ಟ್: ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋನಿಂದ 270 ಉದ್ಯೋಗಿಗಳ ವಜಾ

ಕೊರೋನಾ ಲಾಕ್ ಡೌನ್ ನಿಂದಾಗಿ ಸಿನಿಮಾ ಮಂದಿರಗಳು, ಮಲ್ಟಿಫ್ಲೆಕ್ಸ್ ಗಳು ಮುಚ್ಚಿರುವ ಕಾರಣತೀವ್ರ ಹಿನ್ನೆಡೆ ಅನುಭವಿಸುತ್ತಿರುವ ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋ 270 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ಲಾಕ್ ಡೌನ್ ನಿಂದಾಗಿ ಸಿನಿಮಾ ಮಂದಿರಗಳು, ಮಲ್ಟಿಫ್ಲೆಕ್ಸ್ ಗಳು ಮುಚ್ಚಿರುವ ಕಾರಣತೀವ್ರ ಹಿನ್ನೆಡೆ ಅನುಭವಿಸುತ್ತಿರುವ ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋ 270 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಲಾಕ್ ಡೌನ್ ನಿಂದ ಮತ್ತಷ್ಟು ಆದಾಯ ಕಡಿಮೆಯಾಗುವ ನಿರೀಕ್ಷೆಯೊಡನೆ ಸಂಸ್ಥೆ ಈ ತೀರ್ಮಾನ ತೆಗೆದುಕೊಂಡಿದೆ.

ಓಲಾ, ಉಬರ್,ಜೊಮಾಟೋ,  ಸ್ವಿಗ್ಗಿ ಸೇರಿದಂತೆ ಹಲವಾರು ಟೆಕ್-ಆಧಾರಿತ ಸಂಸ್ಥೆಗಳು  ಕಳೆದ ಕೆಲವು ವಾರಗಳಲ್ಲಿ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ, ಏಕೆಂದರೆ ಅವರು ಕಡಿಮೆ ಗಳಿಕೆ ಮತ್ತು ವ್ಯವಹಾರದ ಅನಿಶ್ಚಿತತೆ ಎದುರಿಸುತ್ತಿದ್ದಾರೆ.

"ಮುಂದಿನ ತಿಂಗಳುಗಳಲ್ಲಿ ಆದಾಯ ಇನ್ನಷ್ಟು ತಗ್ಗಲಿದೆಎಂದು ನಾವು ನಂಬುವ ಕಾರಣ  ಹೊಂದಾಣಿಕೆ ಮಾಡಲು ನಮ್ಮ ವೆಚ್ಚವನ್ನು ಕಡಿಮೆ ಮಾಡುವ ಕಾರ್ಯವನ್ನು ನಾವು ಮಾಡಲೇಬೇಕಿದೆ. ಭಾರತದ ಮತ್ತು ಜಾಗತಿಕವಾಗಿ ಬುಕ್‌ಮೈಶೋನಲ್ಲಿ 1,450 ಉದ್ಯೋಗಿಗಳ ಪೈಕಿ ವಿವಿಧ ಹಂತದಲ್ಲಿ ಕೆಲಸ ಮಾಡುವ ಸುಮಾರು 270 ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ. "ಬುಕ್‌ಮೈಶೋ ಮುಖ್ಯ ಕಾರ್ಯನಿರ್ವಾಹಕ ಆಶಿಶ್ ಹೆಮ್ರಾಜನಿ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಈ ಮೇಲ್ ಮೂಲಕ ಹೇಳಿದ್ದಾರೆ.

ಉದ್ಯೋಗ ನಷ್ಟವಾದವರಿಗೆ ಸಂಸ್ಥೆ  ಹಣಕಾಸಿನ ನೆರವು, ಮುಂದುವರಿದ ಆರೋಗ್ಯ ವಿಮೆ ಮತ್ತು ಹೊರಗುತ್ತಿಗೆ ಬೆಂಬಲವನ್ನು ನೀಡಲು ಉತ್ತಮ ಪ್ರಯತ್ನ ನಡೆಸುತ್ತದೆ. ನಾಯಕತ್ವ ಮಟ್ಟದಲ್ಲಿ ಶೇ 10 ರಿಂದ 50 ರವರೆಗೆ ವೇತನ ಕಡಿತವನ್ನು ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡ ತಂಡಗಳು ತಮ್ಮ ಬೋನಸ್‌ಗಳನ್ನು ತ್ಯಜಿಸಿದ್ದಾರೆ. ಕಂಪನಿಯು ಇತರ ಎಲ್ಲ ಖರ್ಚುಗಳನ್ನು ಕಡಿತಗೊಳಿಸಿದೆ ಮತ್ತು ಮಾರಾಟಗಾರರು, ಪಾಲುದಾರರು ಮತ್ತು ಭೂಮಾಲೀಕರೊಂದಿಗೆ ಮರು ಮಾತುಕತೆ ನಡೆಸಿದೆ ಮತ್ತು ಇತರ ಎಲ್ಲ ವೆಚ್ಚ-ಉಳಿತಾಯ ಕ್ರಮಗಳನ್ನು ತೆಗೆದುಕೊಂಡ ನಂತರ "ಕೊನೆಯ ಉಪಾಯ" ವಾಗಿ ಉದ್ಯೋಗಿಗಳ ವಾಜಾಗೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com