ವಿಶ್ವದಾದ್ಯಂತ 15 ಸಾವಿರ ಉದ್ಯೋಗ ಕಡಿತಗೊಳಿಸಿದ ಫ್ರೆಂಚ್ ಕಾರು ತಯಾರಕ ರೆನಾಲ್ಟ್

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಫ್ರೆಂಚ್ ಕಾರು ತಯಾರಕ ರೆನಾಲ್ಟ್ ಕಂಪನಿಯೂ ಮುಂದಿನ ಮೂರು ವರ್ಷಗಳಲ್ಲಿ ಎರಡು ಬಿಲಿಯನ್ ಯೂರೋ ವೆಚ್ಚ ಕಡಿತಗೊಳಿಸುವ ಯೋಜನೆಯ ಭಾಗವಾಗಿ ವಿಶ್ವದಾದ್ಯಂತ 15,000 ಉದ್ಯೋಗ ಕಡಿತಗೊಳಿಸುವುದಾಗಿ ಘೋಷಿಸಿದೆ.
ರೆನಾಲ್ಟ್ ಕ್ಯಾಪ್ಟರ್
ರೆನಾಲ್ಟ್ ಕ್ಯಾಪ್ಟರ್

ಪ್ಯಾರಿಸ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಫ್ರೆಂಚ್ ಕಾರು ತಯಾರಕ ರೆನಾಲ್ಟ್ ಕಂಪನಿಯೂ ಮುಂದಿನ ಮೂರು ವರ್ಷಗಳಲ್ಲಿ ಎರಡು ಬಿಲಿಯನ್ ಯೂರೋ ವೆಚ್ಚ ಕಡಿತಗೊಳಿಸುವ ಯೋಜನೆಯ ಭಾಗವಾಗಿ ವಿಶ್ವದಾದ್ಯಂತ 15,000 ಉದ್ಯೋಗ ಕಡಿತಗೊಳಿಸುವುದಾಗಿ ಘೋಷಿಸಿದೆ.

ಫ್ರಾನ್ಸ್ ನಲ್ಲಿಯೇ ಸುಮಾರು 4,600 ಉದ್ಯೋಗಗಳನ್ನು ಕಡಿತಗೊಳಿಸಲಾಗುವುದು ವಿಶ್ವದಾದ್ಯಂತ ಇತರೆ 10 ಸಾವಿರ ಉದ್ಯೋಗ ಕಡಿತಗೊಳಿಸುವುದಾಗಿ ಎಂದು ರೆನಾಲ್ಟ್ ಶುಕ್ರವಾರ ತಿಳಿಸಿದೆ.

ರೆನಾಲ್ಟ್ ಸಮೂಹದ ಜಾಗತಿಕ ಉತ್ಪಾದನಾ ಸಾಮರ್ಥ್ಯವನ್ನು 2019ರಲ್ಲಿದ್ದ 4 ಮಿಲಿಯನ್ ವಾಹನಗಳಿಂದ 2024 ರ ವೇಳೆಗೆ 3.3 ಮಿಲಿಯನ್‌ಗೆ ಪರಿಷ್ಕರಿಸಲಾಗುವುದು ಎಂದು ಕಂಪನಿ ಹೇಳಿದೆ.

"ರೆನಾಲ್ಟ್ ಗ್ರೂಪ್ ಎದುರಿಸುತ್ತಿರುವ ತೊಂದರೆಗಳು, ವಾಹನ ಉದ್ಯಮವು ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟು ಮತ್ತು ಪರಿಸರ ಪರಿವರ್ತನೆಯು ಈ ನಿರ್ಧಾರಕ್ಕೆ ಕಾರವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

"ಕಂಪನಿಯ ಸುಸ್ಥಿರತೆ ಮತ್ತು ದೀರ್ಘಾವಧಿಯಲ್ಲಿ ಅದರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಯೋಜಿತ ಬದಲಾವಣೆಗಳನ್ನು ಮಾಡಲಾಗಿದೆ" ಎಂದು ರೆನಾಲ್ಟ್ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಜೀನ್-ಡೊಮಿನಿಕ್ ಸೆನಾರ್ಡ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com