ಎಂಟು ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ಏಪ್ರಿಲ್‌ನಲ್ಲಿ ಶೇ. 38.1 ರಷ್ಟು ಕುಸಿತ

ಏಪ್ರಿಲ್‌ನಲ್ಲಿ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಸೂಚ್ಯಂಕದ ಬೆಳವಣಿಗೆ ದರ ಮಾರ್ಚ್‌ ನ ಶೇ. 9 ರಷ್ಟು ಕುಸಿತಕ್ಕೆ ಹೋಲಿಸಿದರೆ ಏಪ್ರಿಲ್ ನಲ್ಲಿ ಶೇ. 38.1 ರಷ್ಟು ಕುಸಿದಿದೆ ಎಂದು ಶುಕ್ರವಾರ ಬಿಡುಗಡೆ ಮಾಡಲಾದ ಸರ್ಕಾರದ ಅಂಕಿ- ಅಂಶಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಏಪ್ರಿಲ್‌ನಲ್ಲಿ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಸೂಚ್ಯಂಕದ ಬೆಳವಣಿಗೆ ದರ ಮಾರ್ಚ್‌ ನ ಶೇ. 9 ರಷ್ಟು ಕುಸಿತಕ್ಕೆ ಹೋಲಿಸಿದರೆ ಏಪ್ರಿಲ್ ನಲ್ಲಿ ಶೇ. 38.1 ರಷ್ಟು ಕುಸಿದಿದೆ ಎಂದು ಶುಕ್ರವಾರ ಬಿಡುಗಡೆ ಮಾಡಲಾದ ಸರ್ಕಾರದ ಅಂಕಿ- ಅಂಶಗಳು ತಿಳಿಸಿವೆ.

ಕೊವಿಡ್‍-19 ಸಾಂಕ್ರಾಮಿಕ ರೋಗದಿಂದಾಗಿ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರವ್ಯಾಪಿ ಲಾಕ್‍ಡೌನ್‍ ಘೋಷಿಸಿದ ಹಿನ್ನೆಲೆಯಲ್ಲಿ ಕಲ್ಲಿದ್ದಲು, ಸಿಮೆಂಟ್, ಉಕ್ಕು, ನೈಸರ್ಗಿಕ ಅನಿಲ, ಸಂಸ್ಕರಣಾಗಾರ, ಕಚ್ಚಾ ತೈಲ ಸೇರಿದಂತೆ ವಿವಿಧ ಕೈಗಾರಿಕಾ ವಲಯಗಳು ಉತ್ಪಾದನೆಯಲ್ಲಿ ಸಾಕಷ್ಟು ಕುಸಿತವನ್ನು ಅನುಭವಿಸಿವೆ ಎಂದು ಕೈಗಾರಿಕಾ ಮತ್ತು ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆಯ ಆರ್ಥಿಕ ಸಲಹೆಗಾರರ ​​ಕಚೇರಿ ತಿಳಿಸಿದೆ. .

ಜನವರಿ 2020ರಲ್ಲಿ ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕದ ಅಂತಿಮ ಬೆಳವಣಿಗೆ ದರವು ಶೇ. 2.2ರಲ್ಲಿ ಬದಲಾಗದೆ ಉಳಿದಿದೆ. ಒಟ್ಟು ವಸ್ತುಗಳ ಪ್ರಮಾಣದಲ್ಲಿ ಈ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಪಾಲು ಶೇ 40.27 ರಷ್ಟಿದೆ.

ಕಲ್ಲಿದ್ದಲು ಉತ್ಪಾದನೆಯು 2020 ರ ಏಪ್ರಿಲ್‌ನಲ್ಲಿ 15.5 ರಷ್ಟು ಇಳಿಕೆಯಾಗಿದೆ. ಅದರ ಸಂಚಿತ ಸೂಚ್ಯಂಕವು 2019-20ರ ಏಪ್ರಿಲ್ ನಿಂದ ಮಾರ್ಚ್ ವರೆಗೆ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 0.4 ರಷ್ಟು ಕುಸಿದಿದೆ.

ಕಚ್ಚಾ ತೈಲ ಉತ್ಪಾದನೆಯು ಏಪ್ರಿಲ್‌ನಲ್ಲಿ ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಶೇ. 6.4 ರಷ್ಟು ಕುಸಿದಿದೆ.
ನೈಸರ್ಗಿಕ ಅನಿಲ ಉತ್ಪಾದನೆಯು ಏಪ್ರಿಲ್‌ನಲ್ಲಿ ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಶೇ. 19.9ರಷ್ಟು ಹಾಗೂ ಪೆಟ್ರೋಲಿಯಂ ಶುದ್ದೀಕರಣ ಉತ್ಪಾದನೆ ಶೇ. 24.2 ರಷ್ಟು ಕುಸಿದಿದೆ.

ರಸಗೊಬ್ಬರಗಳ ಉತ್ಪಾದನೆ ಶೇ 4.5 ರಷ್ಟು ಮತ್ತು ಉಕ್ಕು ಉತ್ಪಾದನೆ ಏಪ್ರಿಲ್‌ನಲ್ಲಿ ಶೇ. 83.9 ರಷ್ಟು ಇಳಿಕೆಯಾಗಿದೆ.
ಸಿಮೆಂಟ್ ಉತ್ಪಾದನೆ ಏಪ್ರಿಲ್‌ನಲ್ಲಿ ಶೇ 86.0 ರಷ್ಟು ಕುಸಿದಿದೆ ಮತ್ತು ಅದರ ಸಂಚಿತ ಸೂಚ್ಯಂಕ ಏಪ್ರಿಲ್ ನಿಂದ 2019-20ರ ಅವಧಿಯಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 0.9 ರಷ್ಟು ಕುಸಿದಿದೆ.

2019 ರ ಏಪ್ರಿಲ್‌ನಲ್ಲಿ ವಿದ್ಯುತ್ ಉತ್ಪಾದನೆ ಶೇ 22.8 ರಷ್ಟು ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com