ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ ನಿಂದ 9,555 ಕೋಟಿ ರೂ.ಹೂಡಿಕೆ
ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ (ಪಿಐಎಫ್ )ನಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (ಆರ್ ಆರ್ ವಿಎಲ್) 9,555 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ.
Published: 05th November 2020 10:50 PM | Last Updated: 05th November 2020 10:50 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ (ಪಿಐಎಫ್ )ನಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (ಆರ್ ಆರ್ ವಿಎಲ್) 9,555 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ.
ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಲ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಗುರುವಾರ ಘೋಷಣೆ ಮಾಡಿದೆ. ಆರ್ ಆರ್ ವಿಎಲ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ.
ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈ ಕ್ವಿಟಿ ಮೌಲ್ಯವನ್ನು 4.587 ಲಕ್ಷ ಕೋಟಿ ರುಪಾಯಿ ಮಾಡಿದೆ. ಇಷ್ಟು ಮೊತ್ತಕ್ಕೆ ರಿಲಯನ್ಸ್ ರೀಟೇಲ್ ವೆಂಚರ್ಸ್ ನ ಶೇ 2.04ರಷ್ಟು ಈಕ್ವಿಟಿ ಪಾಲು ಖರೀದಿಯನ್ನು ಪಿಐಎಫ್ ಮಾಡಿದಂತಾಗುತ್ತದೆ.
ಇದಕ್ಕೂ ಮುನ್ನ ಪಿಐಎಫ್ ನಿಂದ ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಲ್ಲಿ ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ ಶೇ.2.32ರಷ್ಟು ಷೇರಿನ ಪಾಲು ಖರೀದಿ ಮಾಡಿತ್ತು. ಭಾರತದ ರೀಟೇಲ್ ವಲಯವು ಜಗತ್ತಿನ ಅತಿ ದೊಡ್ಡದರಲ್ಲಿ ಒಂದು.
ದೇಶದ ಒಟ್ಟಾರೆ ಜಿಡಿಪಿಯಲ್ಲಿ ಹತ್ತು ಪರ್ಸೆಂಟ್ ಗೂ ಹೆಚ್ಚು ಅದರಿಂದಲೇ ಬರುತ್ತದೆ. ಬೆಳವಣಿಗೆಗೆ ಅಪಾರ ಅವಕಾಶ ಇದೆ.