ಭಾರತದಲ್ಲಿ ಅಮೆಜಾನ್ ವೆಬ್ ಸರ್ವಿಸ್ ವಿಸ್ತರಣೆ: ಹೈದರಾಬಾದ್ ನಲ್ಲಿ 20,761 ಕೋ. ರೂ ವೆಚ್ಚದ ಹೊಸ ವಲಯ ಸ್ಥಾಪನೆ

ತೆಲಂಗಾಣದಲ್ಲಿ ಅತಿದೊಡ್ಡ ವಿದೇಶಿ ನೇರ ಹೂಡಿಕೆಯಲ್ಲಿ(ಎಫ್ ಡಿಐ) ಅಮೆಜಾನ್ ವೆಬ್ ಸರ್ವಿಸಸ್, ಹೈದರಾಬಾದ್ ನಲ್ಲಿ 20 ಸಾವಿರದ 761 ಕೋಟಿ ರೂಪಾಯಿ ಮೊತ್ತದಲ್ಲಿ ಹೊಸ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ.
ಅಮೆಜಾನ್
ಅಮೆಜಾನ್

ಹೈದರಾಬಾದ್: ತೆಲಂಗಾಣದಲ್ಲಿ ಅತಿದೊಡ್ಡ ವಿದೇಶಿ ನೇರ ಹೂಡಿಕೆಯಲ್ಲಿ(ಎಫ್ ಡಿಐ) ಅಮೆಜಾನ್ ವೆಬ್ ಸರ್ವಿಸಸ್, ಹೈದರಾಬಾದ್ ನಲ್ಲಿ 20 ಸಾವಿರದ 761 ಕೋಟಿ ರೂಪಾಯಿ ಮೊತ್ತದಲ್ಲಿ ಹೊಸ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ.

ಕಂಪೆನಿಯು 2022ರಲ್ಲಿ ಕಾರ್ಯನಿರ್ವಹಣೆಯನ್ನು ಆರಂಭಿಸಲಿದ್ದು ನೂತನ ಎಡಬ್ಲ್ಯುಎಸ್ ಏಷಿಯಾ ಫೆಸಿಫಿಕ್ ಹೈದರಾಬಾದ್ ಮೂರು ಲಭ್ಯತಾ ವಲಯಗಳನ್ನು ಆರಂಭದ ವೇಳೆ ಹೊಂದಿರಲಿದೆ. ನಂತರ ಮುಂದಿನ ದಿನಗಳಲ್ಲಿ 9 ಎಡಬ್ಲ್ಯುಎಸ್ ಪ್ರದೇಶಗಳನ್ನು ಮತ್ತು 26 ಸಾಧ್ಯತಾ ವಲಯಗಳನ್ನು ಭಾರತ, ಆಸ್ಟ್ರೇಲಿಯಾ, ಗ್ರೇಟರ್ ಚೀನಾ, ಜಪಾನ್, ಕೊರಿಯಾ ಮತ್ತು ಸಿಂಗಾಪುರಗಳಲ್ಲಿ ಹೊಂದಿರಲಿದೆ. 

ತಂತ್ರಜ್ಞಾನ ಮೂಲಸೌಕರ್ಯ ವಿವಿಧ ಸ್ಥಳಗಳಲ್ಲಿ ಸಿಗುವ ಸಾಧ್ಯತಾ ವಲಯಗಳನ್ನು ಅಮೆಜಾನ್ ವೆಬ್ ಸರ್ವಿಸಸ್ ಹೊಂದಿರಲಿದ್ದು, ಸಾಕಷ್ಟು ಅಂತರದಲ್ಲಿ ಹೊಂದುವುದರಿಂದ ಪ್ರಾಕೃತಿಕ ವಿಕೋಪಗಳು ಮತ್ತು ಇತರ ಘಟನೆಗಳನ್ನು ಕಡಿಮೆ ಮಾಡಲಿದೆ. ಪ್ರತಿ ಲಭ್ಯತಾ ವಲಯಗಳಲ್ಲಿ ಸ್ವತಂತ್ರ ವಿದ್ಯುತ್, ಕೂಲಿಂಗ್, ಶಾರೀರಿಕ ಭದ್ರತೆ, ಅಲ್ಟ್ರಾ ಲೋ ಲೇಟೆನ್ಸಿ ನೆಟ್ ವರ್ಕ್ ಗಳು ಇರುತ್ತವೆ.

ಎಡಬ್ಲ್ಯೂಎಸ್ ಏಷ್ಯಾ ಪೆಸಿಫಿಕ್ (ಹೈದರಾಬಾದ್) ಪ್ರದೇಶವನ್ನು ಪ್ರಾರಂಭಿಸುವುದರಿಂದ ದಕ್ಷಿಣ ಭಾರತದಾದ್ಯಂತ ಗ್ರಾಹಕರಿಗೆ ಇನ್ನೂ ಕಡಿಮೆ ಸುಪ್ತತೆ ಸಿಗಲಿದೆ ಎಂದು ಅಮೆಜಾನ್ ವೆಬ್ ಸರ್ವೀಸಸ್ ಹೇಳಿದೆ. ಈ ಹೊಸ ಕೇಂದ್ರವು ಹೆಚ್ಚಿನ ಡೆವಲಪರ್‌ಗಳು, ಸ್ಟಾರ್ಟ್ಅಪ್‌ಗಳು ಮತ್ತು ಉದ್ಯಮಗಳು ಮತ್ತು ಸರ್ಕಾರ, ಶಿಕ್ಷಣ ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆಗಳಿಗೆ ತಮ್ಮ ಅಪ್ಲಿಕೇಶನ್‌ಗಳನ್ನು ಚಲಾಯಿಸಲು ಮತ್ತು ಭಾರತದಲ್ಲಿರುವ ಡೇಟಾ ಕೇಂದ್ರಗಳಿಂದ ಅಂತಿಮ ಬಳಕೆದಾರರಿಗೆ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ.

ತೆಲಂಗಾಣ ಸರ್ಕಾರದ ಐಟಿ ಮತ್ತು ಕೈಗಾರಿಕಾ ಸಚಿವ ಕೆ ಟಿ ರಾಮ ರಾವ್ ಇದನ್ನು ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com