ರಿಲಾಯನ್ಸ್ ಡಿಜಿಟಲ್‌ನಲ್ಲಿ ದೀಪಾವಳಿಯ ಫೆಸ್ಟಿವಲ್ ಆಫ್‌ ಎಲೆಕ್ಟ್ರಾನಿಕ್ಸ್ ಮೇಳ

ಈ ವರ್ಷದ ರಿಲಾಯನ್ಸ್ ಡಿಜಿಟಲ್ ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್ ಇನ್ನಷ್ಟು ದೊಡ್ಡದಾಗಿದೆ ಮತ್ತು ಉತ್ತಮ ಆಫರ್ ಗಳೂ ಇವೆ. 

Published: 11th November 2020 07:56 PM  |   Last Updated: 11th November 2020 07:56 PM   |  A+A-


Reliance_digital1

ರಿಲಯನ್ಸ್ ಡಿಜಿಟಲ್

Posted By : Srinivas Rao BV
Source : UNI

ಮುಂಬೈ: ಈ ವರ್ಷದ ರಿಲಾಯನ್ಸ್ ಡಿಜಿಟಲ್ ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್ ಇನ್ನಷ್ಟು ದೊಡ್ಡದಾಗಿದೆ ಮತ್ತು ಉತ್ತಮ ಆಫರ್ ಗಳೂ ಇವೆ. 

ವಿವಿಧ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಬಗ್ಗೆ ಅದ್ಭುತ  ಡೀಲ್ ಗಳನ್ನು ಗ್ರಾಹಕರು ಪಡೆಯಬಹುದು. ಮತ್ತು ರಿಲಾಯನ್ಸ್ ಡಿಜಿಟಲ್ ಮೈ ಜಿಯೋ ಸ್ಟೋರ್ ಗಳು ಮತ್ತು www.reliancedigital.in ನಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್  ಡೆಬಿಟ್ ಕಾರ್ಡ್ ಗಳು, ಕ್ರೆಡಿಟ್ ಕಾರ್ಡ್ ಗಳು ಮತ್ತು ಈಸಿ ಇಎಂಐ ಮೂಲಕ ಶೇ.10ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದು. ಸಿಟಿಬ್ಯಾಂಕ್ ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಡೆಬಿಟ್ ಕಾರ್ಡ್ ಗಳು, ಕ್ರೆಡಿಟ್ ಕಾರ್ಡ್ ಗಳು ಮತ್ತು ಇಎಂಐನಲ್ಲಿ ರೂ. 4500 ವರೆಗೆ ರಿಯಾಯಿತಿಯನ್ನೂ ಪಡೆಯಬಹುದು. ಅಮೆರಿಕನ್ ಎಕ್ಸ್ ಪ್ರೆಸ್ ಗ್ರಾಹಕರು ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ ಗಳ ಮೇಲೆ ರೂ. 2000 ಫ್ಲಾಟ್ ಡಿಸ್ಕೌಂಟ್ ಪಡೆಯಬಹುದು. ರಿಲಾಯನ್ಸ್ ಡಿಜಿಟಲ್ ನಿಂದ ಹಬ್ಬದ ಕೊಡುಗೆಯಾಗಿ, ರೂ. 1000 ಮೌಲ್ಯದ ವೋಚರ್ ಗಳನ್ನು ಗ್ರಾಹಕರು ಪಡೆಯುತ್ತಾರೆ. ಸೇಲ್ ಪ್ರಸ್ತುತ ಚಾಲ್ತಿಯಲ್ಲಿದೆ ಮತ್ತು 2020 ನವೆಂಬರ್ 16 ರ ವರೆಗೆ ಚಾಲ್ತಿಯಲ್ಲಿರಲಿದೆ.

ವಿವಿಧ ವಿಭಾಗಗಳಲ್ಲಿ ಆಕರ್ಷಕ ಕೊಡುಗೆಗಳು ಲಭ್ಯವಿರುತ್ತದೆ. ಮೊಬೈಲ್ ಫೋನ್ ಗಳ ಮೇಲೆ ಕೊಡುಗೆಗಳ ಪೈಕಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 20 ರೂ. 40,999 ರಿಯಾಯತಿ ದರದಲ್ಲಿ ಲಭ್ಯವಿದ್ದು, ಇದು ಎಚ್ ಡಿಎಫ್ ಸಿ ಬ್ಯಾಂಕ್ ಕ್ಯಾಶ್ ಬ್ಯಾಕ್ ಅನ್ನೂ ಒಳಗೊಂಡಿದೆ. ಅಲ್ಲದೆ, ಹೊಸದಾಗಿ ಬಿಡುಗಡೆಯಾದ ಐಫೋನ್ 12 ಮತ್ತು ಐಫೋನ್ 12 ಪ್ರೋ ಮೇಲೂ ಕೊಡುಗೆಗಳಿವೆ. ಗ್ರಾಹಕರು ಮಾಸಿಕ 2796 ಮಾಸಿಕ ದರದಲ್ಲಿ 40ರಷ್ಟು ವರೆಗೆ ಖಚಿತ ಬೈಬ್ಯಾಕ್ ಅಡಿಯಲ್ಲಿ ಐಫೋನ್ 11 ಅನ್ನೂ ಪಡೆಯಬಹುದು. ವೇರೆಬಲ್ ವಿಭಾಗದಲ್ಲಿ, ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಎಲ್ ಟಿಇ (42 ಎಂಎಂ) ರಿಯಾಯಿತಿ ದರ ರೂ. 13,950 ರಲ್ಲಿ ಎಚ್ ಡಿಎಫ್ ಸಿ ಕ್ಯಾಶ್ ಬ್ಯಾಕ್ ಒಳಗೊಂಡು ಲಭ್ಯವಿದೆ.

ಈ ಹಬ್ಬದ ಸಮಯದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಎದುರು ನೋಡುತ್ತಿರುವವರು ಎಸಸ್ (Asus) ಥಿನ್ ಆಂಡ್ ಲೈಟ್ ಲ್ಯಾಪ್ ಟಾಪ್ ಗಳ ಮೇಲಿನ ಆಕರ್ಷಕ ಡೀಲ್ ಗಳನ್ನು ಪಡೆಯಬಹುದು. ರೂ. 18,999 ಬೆಲೆಯಲ್ಲಿ 2 ವರ್ಷ ವಾರಂಟಿ ಹಾಗೂ ರೂ.6,800 ಮೌಲ್ಯದ ಲಾಭಗಳನ್ನು ಒಳಗೊಂಡಿದೆ. ಡೆಲ್ ಇಂಟೆಲ್  ಕೋರ್ ಐ3 ಲ್ಯಾಪ್ ಟಾಪ್ ಗಳು ರೂ. 37,499 ರಿಂದ ಆರಂಭವಾಗುತ್ತವೆ ಮತ್ತು ಎಚ್ ಪಿ ಎಎಂಡಿ ರೈಝೆನ್ 5 ಲ್ಯಾಪ್ ಟಾಪ್ ರೂ. 41,290 ರಿಂದ ಆರಂಭವಾಗುತ್ತವೆ. ಇಂಟೆಲ್ 11ನೇ ಜೆನ್ ಲ್ಯಾಪ್ ಟಾಪ್ ಗಳು ಎಂಎಸ್ ಆಫೀಸ್ ಪ್ರಿ ಇನ್ ಸ್ಟಾಲ್ ಆಗಿ ಲಭ್ಯವಿದ್ದು, 47,999 ರಿಂದ ಆರಂಭವಾಗುತ್ತವೆ. ಎಲ್ಲ ಗೇಮಿಂಗ್ ಲ್ಯಾಪ್ ಟಾಪ್ ಗಳ ಮೇಲೆ ಶೆ.10ರಷ್ಟು ರಿಯಾಯಿತಿ ಘೋಷಿಸಲಾಗಿದ್ದು ಗೇಮರ್ ಗಳಿಗೆ ಖುಷಿಯಾಗಲಿದೆ. ಮನೆಯಿಂದ ಮಕ್ಕಳು ಅಭ್ಯಾಸ ಮಾಡುವುದಕ್ಕಾಗಿ, ಸ್ಯಾಮ್ ಸಂಗ್ ಟ್ಯಾಬ್ ವಿತ್ ಎಲ್ ಟಿಇ, ರೂ.11,999 ರಿಂದ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Stay up to date on all the latest ವಾಣಿಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp