ದ್ವಿತೀಯ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.8.6 ಕುಸಿತ, ಮೊದಲ ಬಾರಿಗೆ ಭಾರತದಲ್ಲಿ ಸತತ ಆರ್ಥಿಕ ಹಿಂಜರಿತ!

ಕಳೆದ ಜುಲೈಯಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇಕಡಾ 8.6ರಷ್ಟು ಕುಸಿದಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಹಣಕಾಸು ವರ್ಷದ ಮೊದಲ ಮೊದಲಾರ್ಧದಲ್ಲಿ ಸತತ ಎರಡು ಬಾರಿ ತ್ರೈಮಾಸಿಕದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸತತ ಇಳಿಕೆ ಕಂಡುಬಂದಿದೆ ಎಂದು ಆರ್ ಬಿಐ ಅಧಿಕಾರಿಗಳು ಹೇಳುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಕಳೆದ ಜುಲೈಯಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇಕಡಾ 8.6ರಷ್ಟು ಕುಸಿದಿದೆ. ಅಂದರೆ ಭಾರತದ ಆರ್ಥಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಣಕಾಸು ವರ್ಷದ ಮೊದಲ ಮೊದಲಾರ್ಧದಲ್ಲಿ ಸತತ ಎರಡು ಬಾರಿ ತ್ರೈಮಾಸಿಕದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸತತ ಇಳಿಕೆ ಕಂಡುಬಂದಿದೆ ಎಂದು ಆರ್ ಬಿಐ ಅಧಿಕಾರಿಗಳು ಹೇಳುತ್ತಿದ್ದಾರೆ.

ನಿನ್ನೆ ಆರ್ ಬಿಐಯ ತಿಂಗಳ ಆರ್ಥಿಕ ಬುಲೆಟಿನ್ ಬಿಡುಗಡೆಗೊಂಡಿದೆ. ಅದರಲ್ಲಿ ಪ್ರಕಟಗೊಂಡಿರುವ ಲೇಖನದಲ್ಲಿ ಈ ಅಂಶ ಪತ್ತೆಯಾಗಿದ್ದು, ಕೇಂದ್ರ ಸರ್ಕಾರದ ಅಧಿಕೃತ ಅಂಕಿಅಂಶ ಇನ್ನೂ ಹೊರಬಂದಿಲ್ಲ.

ಮಾರ್ಚ್ ತಿಂಗಳಲ್ಲಿ ದೇಶಕ್ಕೆ ಒಕ್ಕರಿಸಿದ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಲಾಕ್ ಡೌನ್ ಹೇರಿಕೆಯಾಗಿ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಕಳೆದ ವರ್ಷದ ಇದೇ ಸಮಯದ ಜಿಡಿಪಿಗೆ ಹೋಲಿಸಿದರೆ ದೇಶದ ಜಿಡಿಪಿ ಶೇಕಡಾ 23.9ರಷ್ಟು ಕುಸಿದಿತ್ತು. ಈ ವರ್ಷ ಇಡೀ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇಕಡಾ 9.5ರಷ್ಟು ಕುಸಿಯಬಹುದೆಂದು ಆರ್ ಬಿಐ ಅಂದಾಜಿಸಿದೆ.

ಆದರೆ ಕಳೆದೊಂದು ತಿಂಗಳಿನಿಂದ ಆರ್ಥಿಕ ಚಟುವಟಿಕೆಗಳು ಪುನಶ್ಚೇತನಗೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ಜಿಡಿಪಿ ಕೂಡ ನೆಗೆಯಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ಜಿಡಿಪಿ ಅಂಕಿಅಂಶ ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿದೆ. 

ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ, ಪ್ರಾಥಮಿಕ ಅಂದಾಜುಗಳು ಜೂನ್ ತ್ರೈಮಾಸಿಕದಲ್ಲಿ ಗೃಹ ಆರ್ಥಿಕ ಉಳಿತಾಯವನ್ನು ಜಿಡಿಪಿಯ ಶೇಕಡಾ 21.4 ಕ್ಕೆ ಏರಿಸಿದೆ ಎಂದು ತೋರಿಸಿದೆ, ಜೂನ್ 2019 ರ ತ್ರೈಮಾಸಿಕದಲ್ಲಿ 7.9 ಶೇಕಡಾ ಮತ್ತು ಮಾರ್ಚ್ 2020 ರ ತ್ರೈಮಾಸಿಕದಲ್ಲಿ ಶೇಕಡಾ 10ರಷ್ಟಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com