ಭಾರತದ ಮಾರುಕಟ್ಟೆಗೆ ಪಬ್ ಜಿ ಕಮ್ ಬ್ಯಾಕ್: ದೇಶದಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆಗೆ ಚಿಂತನೆ

ದೀಪಾವಳಿಯೊಂದಿಗೆ ಮೊಬೈಲ್ ಗೇಮ್ ಪ್ರಿಯರಲ್ಲಿ ಸಂತಸವನ್ನುಂಟು ಮಾಡಲು ಭಾರತದಲ್ಲಿ ಅಂಗಸಂಸ್ಥೆ ರಚನೆ ಹಾಗೂ ಹೊಸ ಗೇಮ್ ನೊಂದಿಗೆ ಭಾರತದ ಮಾರುಕಟ್ಟೆಗೆ ಕಮ್ ಬ್ಯಾಕ್ ಆಗುವುದಾಗಿ ಪಬ್  ಜಿ ಕಾರ್ಪೋರೇಷನ್ ಹೇಳಿದೆ.
ಪಬ್ ಜೀ
ಪಬ್ ಜೀ

ನವದಹೆಲಿ: ದೀಪಾವಳಿಯೊಂದಿಗೆ ಮೊಬೈಲ್ ಗೇಮ್ ಪ್ರಿಯರಲ್ಲಿ ಸಂತಸವನ್ನುಂಟು ಮಾಡಲು ಭಾರತದಲ್ಲಿ ಅಂಗಸಂಸ್ಥೆ ರಚನೆ ಹಾಗೂ ಹೊಸ ಗೇಮ್ ನೊಂದಿಗೆ ಭಾರತದ ಮಾರುಕಟ್ಟೆಗೆ ಕಮ್ ಬ್ಯಾಕ್ ಆಗುವುದಾಗಿ ಪಬ್  ಜಿ ಕಾರ್ಪೋರೇಷನ್ ಹೇಳಿದೆ.

ಇ- ಸ್ಪೂರ್ಟ್ಸ್, ಸ್ಥಳೀಯ ವಿಡಿಯೋ ಗೇಮ್, ಮನೋರಂಜನೆ ಮತ್ತು ಐಟಿ ಇಂಡಸ್ಟ್ರಿ ಉತ್ತೇಜನಕ್ಕಾಗಿ ಭಾರತದಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿರುವುದಾಗಿ ಕಂಪನಿ ತಿಳಿಸಿದೆ.

ರಾಷ್ಟ್ರೀಯ ಸುರಕ್ಷತೆ ದೃಷ್ಟಿಯಿಂದ ಪಜ್ ಜಿ ಮೊಬೈಲ್ ಆ್ಯಪ್ ಸೇರಿದಂತೆ 118 ಚೀನಾದ ಕಂಪನಿಗಳನ್ನು ಭಾರತ ಸರ್ಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಬ್ಯಾನ್ ಮಾಡಿತ್ತು.  ನಿಷೇಧವನ್ನು ತೆಗೆದುಹಾಕಲು, ಭಾರತದಲ್ಲಿನ ಚೀನಾ ಮೂಲದ ಟೆನ್ಸೆಂಟ್ ಗೇಮ್ಸ್ ಗೆ ಇನ್ನೂ ಮುಂದೆ ಫ್ರಾಂಚೈಸಿಯನ್ನು ಅಧಿಕೃತಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಪಬ್ ಜಿ ಹೇಳಿದೆ. 

ಭಾರತದ ಮಾರುಕಟ್ಟೆಗಾಗಿ ವಿಶೇಷವಾಗಿ ಹೊಸ ಗೇಮ್  ಸೃಷ್ಟಿಯೊಂದಿಗೆ ಪಬ್ ಜಿ ಮೊಬೈಲ್ ಭಾರತ ಪರಿಚಯಿಸಲು ಸಿದ್ಧತೆ ನಡೆಸಲಾಗಿದೆ.

ಭಾರತೀಯ ಅಂಗಸಂಸ್ಥೆಯು ವ್ಯಾಪಾರ, ಇ- ಸ್ಪೋರ್ಟ್ಸ್, ಮತ್ತು ಗೇಮ್ ಅಭಿವೃದ್ಧಿಗಾಗಿ 100 ನೌಕರರನ್ನು ನೇಮಿಸಿಕೊಳ್ಳಲಿದೆ ಎಂದು ಪಬ್ ಜಿ ಕಾರ್ಪೋರೇಷನ್ ತಿಳಿಸಿದೆ. ಆದಾಗ್ಯೂ, ಪಬ್ ಜಿ ಮೊಬೈಲ್ ಇಂಡಿಯಾ ಉದ್ಘಾಟನೆಯ ದಿನಾಂಕವನ್ನು ಕಂಪನಿ ಬಹಿರಂಗಪಡಿಸಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com