ಇನ್ಫೋಸಿಸ್ ಸಹ-ಸಂಸ್ಥಾಪಕ ಶಿಬುಲಾಲ್ ಗೆ ಕಂಪನಿಯ ನಾಲ್ಕು ಲಕ್ಷಕ್ಕೂ ಹೆಚ್ಚು ಷೇರುಗಳ 'ಗಿಫ್ಟ್!

ಇನ್ಫೋಸಿಸ್ ಸಹ-ಸಂಸ್ಥಾಪಕ ಎಸ್.ಡಿ.ಶಿಬುಲಾಲ್ ಅವರು ಕಂಪನಿಯ ನಾಲ್ಕು ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ, ಅವರ ಒಡೆತನದ ಒಟ್ಟಾರೇ ಷೇರುಗಳ ಸಂಖ್ಯೆ 21.6 ಲಕ್ಷಕ್ಕೂ ಹೆಚ್ಚಾಗಿದೆ ಎಂದು ನಿಯಂತ್ರಕ ದಾಖಲಾತಿ ತಿಳಿಸಿದೆ. 
ಎಸ್ ಡಿ ಶಿಬುಲಾಲ್
ಎಸ್ ಡಿ ಶಿಬುಲಾಲ್

ನವದೆಹಲಿ: ಇನ್ಫೋಸಿಸ್ ಸಹ-ಸಂಸ್ಥಾಪಕ ಎಸ್.ಡಿ.ಶಿಬುಲಾಲ್ ಅವರು ಕಂಪನಿಯ ನಾಲ್ಕು ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ, ಅವರ ಒಡೆತನದ ಒಟ್ಟಾರೇ ಷೇರುಗಳ ಸಂಖ್ಯೆ 21.6 ಲಕ್ಷಕ್ಕೂ ಹೆಚ್ಚಾಗಿದೆ ಎಂದು ನಿಯಂತ್ರಕ ದಾಖಲಾತಿ ತಿಳಿಸಿದೆ. 

ನವೆಂಬರ್ 12 ರಂದು ಕಂಪನಿಯ  4, 01, 000 ಇಕ್ವಿಟಿ ಷೇರುಗಳನ್ನು ಶಿಬುಲಾಲ್ ಅವರಿಗೆ ನೀಡಲಾಗಿದೆ ಎಂದು ಇನ್ಫೋಸಿಸ್ ಶುಕ್ರವಾರ ಮಾಹಿತಿ ನೀಡಿದೆ.ಈ ಷೇರುಗಳನ್ನು ಯಾರು ಉಡುಗೊರೆಯಾಗಿ ನೀಡಿದ್ದಾರೆಂದು ಉಲ್ಲೇಖಿಸಿಲ್ಲ.

ಶಿಬುಲಾಲ್ ಅವರ ಪತ್ನಿ ಕುಮಾರಿ ಅದೇ  ದಿನ 4.01 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಪ್ರತ್ಯೇಕ ನಿಯಂತ್ರಕ ಫೈಲಿಂಗ್ ಹೇಳಿದೆ ಆದರೆ ಸ್ವೀಕರಿಸುವವರ ಹೆಸರನ್ನು ಬಹಿರಂಗಪಡಿಸಿಲ್ಲ. ಕುಮಾರಿ ಅವರ ಷೇರು ಇದೀಗ ಶೇ. 0. 21ಕ್ಕೆ ಕುಸಿದಿದ್ದರೆ ಶಿಬುಲಾಲ್ ಅವರ ಷೇರು ಪ್ರಮಾಣ ಶೇ. 0.05 ರಷ್ಟು ಹೆಚ್ಚಳಗೊಂಡಿದೆ. 

ವಹಿವಾಟಿನ ನಂತರ, ಕುಮಾರಿ ಮತ್ತು ಶಿಬುಲಾಲ್ ಅವರ ಒಡೆತನದ ಇನ್ಫೋಸಿಸ್ ಷೇರುಗಳ ಸಂಖ್ಯೆ ಕ್ರಮವಾಗಿ 88,96,930 ಮತ್ತು 21,66,768 ರಷ್ಟಿದೆ. ಶುಕ್ರವಾರ ದೇಶಿಯ ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಷೇರುಗಳು 1. 123.90 ರೂಗೆ ತಲುಪಿತು. 

ಜುಲೈನಲ್ಲಿ, ಶಿಬುಲಾಲ್ ಅವರ ಕುಟುಂಬ ಸದಸ್ಯರು 770 ಕೋಟಿ ರೂ.ಗಳ ಮೌಲ್ಯದ ಕಂಪನಿಯ 85 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದರು. ಎಸ್.ಡಿ.ಶಿಬುಲಾಲ್ ಮತ್ತು ಎನ್.ಆರ್. ನಾರಾಯಣ ಮೂರ್ತಿ ಮತ್ತು ಇತರ ಐದು ಮಂದಿ 1981 ರಲ್ಲಿ ಇನ್ಫೋಸಿಸ್ ಅನ್ನು ಸ್ಥಾಪಿಸಿದರು.

ಶಿಬುಲಾಲ್ ಅವರು 2011-2014ರವರೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇನ್ಫೋಸಿಸ್ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಸಿಇಒ ಮತ್ತು ಎಂಡಿ ಆಗುವ ಮೊದಲು ಅವರು 2007-2011ರವರೆಗೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಪ್ರಸ್ತುತ, ಶಿಬುಲಾಲ್ ಅವರು ಆಕ್ಸಿಲರ್ ವೆಂಚರ್ಸ್ ಮೂಲಕ ತಂತ್ರಜ್ಞಾನ ಸ್ಟಾರ್ಟ್ ಅಫ್ ನಲ್ಲಿ ಹೂಡಿಕೆ ಮಾಡಿದ್ದು, ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರೊಂದಿಗೆ ಸಹ ಸಂಸ್ಥಾಪಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com