200 ಕೋಟಿ ಜಿಎಸ್ ಟಿ ತೆರಿಗೆ ವಂಚಿಸುತ್ತಿದ್ದ ಜಾಲ ಪತ್ತೆ: ವಂಚಕರ ಬಂಧನ 

ಜಿಎಸ್ ಟಿಯ ಬೆಂಗಳೂರು ಝೋನಲ್ ಯುನಿಟ್ (ಬಿಝೆಡ್ ಯು) ಹಾಗೂ ಗುಪ್ತಚರ ವಿಭಾಗ (ಡಿಜಿಜಿಐ) ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 200 ಕೋಟಿ ರೂಪಾಯಿಗಳ ಜಿಎಸ್ ಟಿ ವಂಚನೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿ ವಂಚಕರನ್ನು ವಶಕ್ಕೆ ಪಡೆಯಲಾಗಿದೆ.
200 ಕೋಟಿ ಜಿಎಸ್ ಟಿ ತೆರಿಗೆ ವಂಚಿಸುತ್ತಿದ್ದ ಜಾಲ ಪತ್ತೆ: ವಂಚಕರ ಬಂಧನ
200 ಕೋಟಿ ಜಿಎಸ್ ಟಿ ತೆರಿಗೆ ವಂಚಿಸುತ್ತಿದ್ದ ಜಾಲ ಪತ್ತೆ: ವಂಚಕರ ಬಂಧನ

ಬೆಂಗಳೂರು: ಜಿಎಸ್ ಟಿಯ ಬೆಂಗಳೂರು ಝೋನಲ್ ಯುನಿಟ್ (ಬಿಝೆಡ್ ಯು) ಹಾಗೂ ಗುಪ್ತಚರ ವಿಭಾಗ (ಡಿಜಿಜಿಐ) ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 200 ಕೋಟಿ ರೂಪಾಯಿಗಳ ಜಿಎಸ್ ಟಿ ವಂಚನೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿ ವಂಚಕರನ್ನು ವಶಕ್ಕೆ ಪಡೆಯಲಾಗಿದೆ.

ಉತ್ತಮ ಸಮನ್ವಯತೆ ಸಾಧಿಸಿ ದೇಶಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ ಜಿಎಸ್ ಟಿ ವಂಚನೆ ಬೆಳಕಿಗೆ ಬಂದಿದ್ದು, ಈ ಪೈಕಿ ಉತ್ತಮವಾಗಿ ಸ್ಥಾಪನೆಗೊಂಡಿದ್ದ ಹಲವು ಸಂಸ್ಥೆಗಳೂ ಸಹ ಈ ವಂಚನೆಯಲ್ಲಿ ಶಾಮೀಲಾಗಿವೆ. 1,000 ಕೋಟಿ ನಕಲಿ ಇನ್ವಾಯ್ಸ್ (ಸರಕು ಪಟ್ಟಿ) ತಯಾರಿಸಿ 200 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಲಾಗಿದೆ

ಬೆಂಗಳೂರು ಮೂಲದ ಟೆಕ್ ಸಂಸ್ಥೆಯೊಂದರ ವಿರುದ್ಧ ಪ್ರಕರಣ ದಾಖಲಾಗಿ ದೇಶಾದ್ಯಂತ ಇರುವ ಚೀನಾದ ಸಂಸ್ಥೆಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಡುವ ಕೆಲಸ ಮಾಡುತ್ತಿದ್ದುದ್ದಾಗಿ ದೂರಿನಲ್ಲಿ ಆರೋಪ ಮಾಡಲಾಗಿತ್ತು ಎಂದು ಡಿಜಿಜಿಐ, ಬಿಝೆಡ್ ಯು ಪತ್ರಿಕಾ ಹೇಳಿಕೆಯ ಮೂಲಕ ತಿಳಿದುಬಂದಿದೆ.

53 ಕೋಟಿ ರೂಪಾಯಿ ಮೊತ್ತದ ಹಣ ಚೀನಾದ ಸಂಸ್ಥೆಗಳಿಂದ ಬೆಂಗಳೂರಿನ ಸಂಸ್ಥೆಗೆ ವರ್ಗಾವಣೆ ಮಾಡಲಾಗಿದೆ. ಈ ಚಟುವಟಿಕೆಗಳು ಚೀನಾದ ಪ್ರಜೆಯೊಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿದೆ ಎಂದು ತಿಳಿದುಬಂದಿದೆ.

ಒಂದಷ್ಟು ನಕಲಿ ಸಂಸ್ಥೆಗಳು 500 ಕೋಟಿ ರೂಪಾಯಿಗಳಿಗೆ ಇನ್ವಾಯ್ಸ್ (ಸರಕು ಪಟ್ಟಿ) ಯನ್ನು ತಯಾರಿಸಿದ್ದು, 80 ಕೋಟಿ ಜಿಎಸ್ ಟಿ ವಂಚನೆ ಮಾಡಿವೆ ಎಂಬುದು ಬಹಿರಂಗಗೊಂಡಿದೆ. ಈ ಸಂಬಂಧ ಈ ವರೆಗೂ ನಡೆಸಿದ ರೈಡ್ ನಲ್ಲಿ ಬೆಂಗಳೂರು, ಹೈದರಾಬಾದ್, ಮುಂಬೈ ಗಳಲ್ಲಿ 12 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com