ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇಕಡ 1.48ಕ್ಕೆ ಏರಿಕೆ

ಸಗಟು ಬೆಲೆ ಆಧಾರಿತ ಹಣದುಬ್ಬರ (ಡಬ್ಲ್ಯುಪಿಐ) ಕಳೆದ ಅಕ್ಟೋಬರ್ ನಲ್ಲಿ ಶೇ 1.48 ಕ್ಕೆ ಏರಿದೆ ಎಂದು ಆರ್ಥಿಕ ಸಲಹೆಗಾರರ ​​ಕಚೇರಿ ಸೋಮವಾರ ತನ್ನ ಮಾಸಿಕ ನವೀಕೃತ ಮಾಹಿತಿಯಲ್ಲಿ ತಿಳಿಸಿದೆ.
ಹಣದುಬ್ಬರ
ಹಣದುಬ್ಬರ

ನವದೆಹಲಿ: ಸಗಟು ಬೆಲೆ ಆಧಾರಿತ ಹಣದುಬ್ಬರ (ಡಬ್ಲ್ಯುಪಿಐ) ಕಳೆದ ಅಕ್ಟೋಬರ್ ನಲ್ಲಿ ಶೇ 1.48 ಕ್ಕೆ ಏರಿದೆ ಎಂದು ಆರ್ಥಿಕ ಸಲಹೆಗಾರರ ​​ಕಚೇರಿ ಸೋಮವಾರ ತನ್ನ ಮಾಸಿಕ ನವೀಕೃತ ಮಾಹಿತಿಯಲ್ಲಿ ತಿಳಿಸಿದೆ.

ಗಮನಾರ್ಹ ಸಂಗತಿಯೆಂದರೆ, ಸೆಪ್ಟೆಂಬರ್‌ನಲ್ಲಿ ಡಬ್ಲ್ಯುಪಿಐ ಶೇ 1.32 ರಷ್ಟಿದ್ದರೆ, 2019 ರ ಅಕ್ಟೋಬರ್‌ನಲ್ಲಿ ಶೇ ಸೊನ್ನೆಯಷ್ಟಿತ್ತು. ಹಣದುಬ್ಬರ ಏರಿಕೆಗೆ, ಮುಖ್ಯವಾಗಿ ದುಬಾರಿ ತಯಾರಿಸಿದ ಉತ್ಪನ್ನಗಳು ಪ್ರಮುಖ ಕಾರಣವಾಗಿವೆ.

ಸರ್ಕಾರದ ಅಂಕಿ-ಅಂಶಗಳಂತೆ, ಅಕ್ಟೋಬರ್‌ನಲ್ಲಿ ತಯಾರಿಕೆ ಉತ್ಪನ್ನಗಳ ಮೇಲೆ ಹಣದುಬ್ಬರ ಪ್ರಮಾಣ ಶೇ 2.12 ರಷ್ಟಿತ್ತು.  ಸೆಪ್ಟೆಂಬರ್‌ನಲ್ಲಿ ಇದು ಶೇ1.61 ರಷ್ಟಿತ್ತು.

ಕಳೆದ 8 ತಿಂಗಳುಗಳಲ್ಲಿ ಇದು ಅತಿ ಗರಿಷ್ಠ ಹಣದುಬ್ಬರವಾಗಿದ್ದು ಫೆಬ್ರವರಿ ತಿಂಗಳಲ್ಲಿ ಶೇ.2.26 ರಷ್ಟು ಹಣದುಬ್ಬರ ದಾಖಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com