ಆರ್‌ಬಿಐಹೆಚ್ ಮೊಟ್ಟ ಮೊದಲ ಅಧ್ಯಕ್ಷರಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ನೇಮಕ

 ಇನ್ಫೋಸಿಸ್ ಲಿಮಿಟೆಡ್‌ನ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ನ ಇನ್ನೋವೇಶನ್ ಹಬ್ ನ ಮೊಟ್ಟ ಮೊದಲ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ (ಆರ್‌ಬಿಐಹೆಚ್)ತಂತ್ರಜ್ಞಾನವನ್ನು ಬಳಸಿಕೊಂಡು ಹಣಕಾಸು ಕ್ಷೇತ್ರದಲ್ಲಿ ಪ್ರಗತಿಯನ್ನು ಉತ್ತೇಜಿಸುವ ಗುರಿ ಹೊಂದಿದೆ.
ಕ್ರಿಸ್ ಗೋಪಾಲಕೃಷ್ಣನ್
ಕ್ರಿಸ್ ಗೋಪಾಲಕೃಷ್ಣನ್

ನವದೆಹಲಿ: ಇನ್ಫೋಸಿಸ್ ಲಿಮಿಟೆಡ್‌ನ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ನ ಇನ್ನೋವೇಶನ್ ಹಬ್ ನ ಮೊಟ್ಟ ಮೊದಲ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ (ಆರ್‌ಬಿಐಹೆಚ್)ತಂತ್ರಜ್ಞಾನವನ್ನು ಬಳಸಿಕೊಂಡು ಹಣಕಾಸು ಕ್ಷೇತ್ರದಲ್ಲಿ ಪ್ರಗತಿಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಆರ್‌ಬಿಐಹೆಚ್ ಅನ್ನು ಅಧ್ಯಕ್ಷರ ನೇತೃತ್ವದ ಆಡಳಿತ ಮಂಡಳಿ (ಜಿಸಿ) ಮಾರ್ಗದರ್ಶನ ಮತ್ತು ನಿರ್ವಹಣೆ ಮಾಡಲಿದೆ ಎಂದು ಕೇಂದ್ರ ಬ್ಯಾಂಕ್ ಮಂಗಳವಾರ ತಿಳಿಸಿದೆ. ಗೋಪಾಲಕೃಷ್ಣನ್ ಪ್ರಸ್ತುತ ಸ್ಟಾರ್ಟ್-ಅಪ್ ವಿಲೇಜ್‌ನ ಮುಖ್ಯ ಮಾರ್ಗದರ್ಶಕರಾಗಿದ್ದಾರೆ, ಇದು ಸ್ಟಾರ್ಟ್ಅಪ್‌ಗಳಿಗೆ ವೇಗ ನೀಡುವ ಕೇಂದ್ರವಾಗಿದೆ.

ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಪ್ರಾಧ್ಯಾಪಕ ಅಶೋಕ್ ಜುಂಜುನ್‌ವಾಲಾ, ಭಾರತೀಯ ಸಂಶೋಧನಾ ಸಂಸ್ಥೆ, ಬೆಂಗಳೂರಿನ ಪ್ರಧಾನ ಸಂಶೋಧನಾ ವಿಜ್ಞಾನಿ ಹೆಚ್. ಮಾಜಿ ಮುಖ್ಯ ಕಾರ್ಯನಿರ್ವಾಹಕ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಮೃತ್ಯುಂಜಯ್ ಮಹಾಪಾತ್ರ, ಆರ್ಬಿಐ (ಎಕ್ಸ್-ಆಫೀಸಿಯೊ) ಕಾರ್ಯನಿರ್ವಾಹಕ ನಿರ್ದೇಶಕ ಟಿ. ರಬಿ ಶಂಕರ್, ಮಾಹಿತಿ ತಂತ್ರಜ್ಞಾನದ ಮುಖ್ಯ ಪ್ರಧಾನ ವ್ಯವಸ್ಥಾಪಕ ದೀಪಕ್ ಕುಮಾರ್ (ಎಕ್ಸ್ ಆಫೀಸಿಯೊ ), ಮತ್ತು , ಇನ್ಸ್ಟಿಟ್ಯೂಟ್ ಫಾರ್ ಡೆವಲಪ್ಮೆಂಟ್ ಅಂಡ್ ರಿಸರ್ಚ್ ಇನ್ ಬ್ಯಾಂಕಿಂಗ್ ಟೆಕ್ನಾಲಜಿ, ಹೈದರಾಬಾದ್ ನ ನಿರ್ದೇಶಕಿ ಕೆ. ನಿಖಿಲಾ, (ಎಕ್ಸ್ ಆಫೀಸಿಯೊ). ಹಬ್ ನ ಇತರೆ ಸದಸ್ಯರಾಗಿದ್ದಾರೆ.

ಇನ್ನು ಆಡಳಿತ ಮಂಡಳಿಯು ಮುಖ್ಯ ಕಾರ್ಯನಿರ್ವಾಹಕನನ್ನು ಹೊಂದಿದ್ದು, ಅವರನ್ನು ಇನ್ನೂ ನೇಮಕ ಮಾಡಲಾಗಿಲ್ಲ.

ಆಗಸ್ಟ್ 6 ರಂದು ಆರ್‌ಬಿಐ ಹಬ್ ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿತ್ತು.

ಹಣಕಾಸು ಸೇವೆಗಳು ಮತ್ತು ಅವುಗಳ ಉತ್ಪನ್ನಗಳು ಜನರಿಗೆ ಲಭ್ಯವಾಗುವಂಥ ಹೊಸ ಪದ್ಧತಿಗಳನ್ನು ಉತ್ತೇಜಿಸುವುದು ಮಾತ್ರವಲ್ಲದೆ ಹಣಕಾಸು ಸಂಸ್ಥೆಗಳೊಂದಿಗೆ ಹೊಸ ವಿಚಾರಗಳ ವಿನಿಮಯ, ತಂತ್ರಜ್ಞಾನ ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳೊಡನೆ ಸಹಕಾರ, ಆರ್ಥಿಕ ಅವಿಷ್ಕಾರಗಳಿಗೆ ಸಂಬಂಧಿಸಿಹೊಸ ಮಾದರಿಗಳ ಅಭಿವೃದ್ದಿ ಇದೇ ಮೊದಲಾದವು ಆರ್‌ಬಿಐಹೆಚ್ ನ ಮಹತ್ವದ ಸೌಲಭ್ಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com