ಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರ ಹಣ ಸುರಕ್ಷಿತ: ಆರ್‌ಬಿಐ ನೇಮಿತ ಆಡಳಿತಾಧಿಕಾರಿ

ಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರ ಹಣ ಸುರಕ್ಷಿತವಾಗಿದೆ. ಆರ್‌ಬಿಐ ನಿಗದಿಪಡಿಸಿದ ಗಡುವಿನೊಳಗೆ ಡಿಬಿಎಸ್ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಆರ್‌ಬಿಐ ನೇಮಕ ಮಾಡಿರುವ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಆಡಳಿತಾಧಿಕಾರಿ ಟಿ ಎನ್ ಮನೋಹರನ್ ಹೇಳಿದ್ದಾರೆ.

Published: 18th November 2020 06:35 PM  |   Last Updated: 18th November 2020 06:35 PM   |  A+A-


Lakshmi Vilas Bank

ಲಕ್ಷ್ಮಿ ವಿಲಾಸ್ ಬ್ಯಾಂಕ್

Posted By : Vishwanath S
Source : Online Desk

ಮುಂಬೈ: ಲಕ್ಷ್ಮಿ ವಿಲಾಸ್ ಬ್ಯಾಂಕ್ ಠೇವಣಿದಾರರ ಹಣ ಸುರಕ್ಷಿತವಾಗಿದೆ. ಆರ್‌ಬಿಐ ನಿಗದಿಪಡಿಸಿದ ಗಡುವಿನೊಳಗೆ ಡಿಬಿಎಸ್ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಆರ್‌ಬಿಐ ನೇಮಕ ಮಾಡಿರುವ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಆಡಳಿತಾಧಿಕಾರಿ ಟಿ ಎನ್ ಮನೋಹರನ್ ಹೇಳಿದ್ದಾರೆ. 

ಕೆನರಾ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ ಎನ್ ಮನೋಹರನ್ ಅವರನ್ನು ಲಕ್ಷ್ಮಿ ವಿಲಾಸ್ ಬ್ಯಾಂಕಿನ ನಿರ್ವಾಹಕರನ್ನಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ)  ನೇಮಕ ಮಾಡಿತು.

ಬ್ಯಾಂಕ್‌ಗೆ ನಿಷೇಧವನ್ನು ವಿಧಿಸಲಾಗಿದೆ. ಜೊತೆಗೆ ನಗದು ಪಡೆಯಲು ಖಾತೆದಾರರಿಗೆ ಪ್ರತಿ ಖಾತೆಗೆ 25 ಸಾವಿರ ರೂ. ಪಡೆಯುವ ಅವಕಾಶ ನೀಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮನೋಹರನ್, ಡಿಸೆಂಬರ್ 16ರ ಗಡುವಿನ ಮೊದಲು ಬ್ಯಾಂಕ್ ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾದೊಂದಿಗೆ ಸಮಯೋಚಿತವಾಗಿ ವಿಲೀನಗೊಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ಠೇವಣಿದಾರರ ಹಣ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದ್ದು ಠೇವಣಿದಾರರಿಗೆ ಮರುಪಾವತಿ ಮಾಡಲು ಬ್ಯಾಂಕ್ ಸಾಕಷ್ಟು ಹಣವನ್ನು ಹೊಂದಿದೆ ಎಂದು ಅವರು ಹೇಳಿದರು.

ಲಕ್ಷ್ಮಿ ವಿಲಾಸ್ ಬ್ಯಾಂಕ್ 20,000 ಕೋಟಿ ರೂ. ಠೇವಣಿ ಮತ್ತು 17,000 ಕೋಟಿ ರೂ. ಆರ್‌ಬಿಐ ಅಂತಿಮ ವಿಲೀನ ಕರಡನ್ನು ನವೆಂಬರ್ 20 ರಂದು ನೀಡಲಿದೆ. 

Stay up to date on all the latest ವಾಣಿಜ್ಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp