ಸ್ಯಾಮ್‌ಸಂಗ್ ನಿಂದ ನೋಯ್ಡಾ ಉತ್ಪಾದನಾ ಕೇಂದ್ರದಲ್ಲಿ 5000 ಕೋಟಿ ರೂ. ಹೂಡಿಕೆ

ದಕ್ಷಿಣ ಕೊರಿಯಾದ ಗ್ರಾಹಕ ವಿದ್ಯುನ್ಮಾನ ದೈತ್ಯ ಕಂಪೆನಿ ಸ್ಯಾಮ್ ಸಂಗ್, ಉತ್ತರ ಪ್ರದೇಶದ ನೋಯ್ಡಾದಲ್ಲಿನ ಸ್ಮಾರ್ಟ್ ಫೋನ್ ಡಿಸ್ ಪ್ಲೇ ಉತ್ಪಾದನಾ ಕೇಂದ್ರದಲ್ಲಿ ಸುಮಾರು 5,000 ಕೋಟಿ ರೂ ಹೂಡಿಕೆ ಮಾಡಲಿದೆ.   
ಸ್ಯಾಮ್ ಸಂಗ್
ಸ್ಯಾಮ್ ಸಂಗ್

ಲಕ್ನೋ: ದಕ್ಷಿಣ ಕೊರಿಯಾದ ಗ್ರಾಹಕ ವಿದ್ಯುನ್ಮಾನ ದೈತ್ಯ ಕಂಪೆನಿ ಸ್ಯಾಮ್ ಸಂಗ್, ಉತ್ತರ ಪ್ರದೇಶದ ನೋಯ್ಡಾದಲ್ಲಿನ ಸ್ಮಾರ್ಟ್ ಫೋನ್ ಡಿಸ್ ಪ್ಲೇ ಉತ್ಪಾದನಾ ಕೇಂದ್ರದಲ್ಲಿ ಸುಮಾರು 5,000 ಕೋಟಿ ರೂ ಹೂಡಿಕೆ ಮಾಡಲಿದೆ.   

ರಫ್ತು ಆಧಾರಿತ ಈ ಘಟಕ ಜನವರಿ-ಫೆಬ್ರವರಿ 2021 ರ ವೇಳೆಗೆ ಸಿದ್ಧವಾಗಲಿದ್ದು, ಏಪ್ರಿಲ್ 2021 ರ ವೇಳೆಗೆ ವಾಣಿಜ್ಯ ಉತ್ಪಾದನೆ ಆರಂಭಿಸಲಿದೆ.

ಉತ್ತರ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಸಚಿವ ಸತೀಶ್ ಮಹಾನ ಸೋಮವಾರ ಇಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿ, ಇಲ್ಲಿಯವರೆಗೆ ಸ್ಯಾಮ್ ಸಂಗ್ ಕಂಪನಿ ಗ್ರೀನ್ ಫೀಲ್ಡ್ ಸ್ಥಾವರದಲ್ಲಿ ಸುಮಾರು 1,500 ಕೋಟಿ ರೂ ಹೂಡಿಕೆ ಮಾಡಿದೆ. ಒಮ್ಮೆ ಘಟಕವು ಕಾರ್ಯರೂಪಕ್ಕೆ ಬಂದರೆ, ಭಾರತ, ಸ್ಯಾಮ್ ಸಂಗ್ ನ ಸ್ಮಾರ್ಟ್ ಫೋನ್ ಡಿಸ್ ಪ್ಲೇ ಉತ್ಪಾದನಾ ಸೌಲಭ್ಯ ಹೊಂದಿರುವ ವಿಶ್ವದ ಮೂರನೇ ರಾಷ್ಟ್ರವಾಗಲಿದೆ.

ಚೀನಾದಲ್ಲಿ ಕೋವಿಡ್-19 ಸಾಂಕ್ರಾಮಿಕ ಉಲ್ಬಣಗೊಂಡ ನಂತರ ಭಾರತಕ್ಕೆ ಸ್ಥಳಾಂತರಗೊಂಡ ದೊಡ್ಡ ಯೋಜನೆಗಳಲ್ಲಿ ಈ ಸ್ಥಾವರವು ಸೇರಿದೆ. ಈ ಯೋಜನೆಯು ಸುಮಾರು 1,500 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಎಲ್ಲಾ ರೀತಿಯ ಮತ್ತು ಗಾತ್ರದ ಎಲೆಕ್ಟ್ರಾನಿಕ್ ಸಾಧನಗಳಿಗೆ ಡಿಸ್ಪ್ಲೇ (ಬಿಡಿಭಾಗಗಳು ಮತ್ತು ಪರಿಕರಗಳು ಸೇರಿದಂತೆ)ಗಳ ಉತ್ಪಾದನೆ, ಜೋಡಣೆ, ಸಂಸ್ಕರಣೆ ಮತ್ತು ಮಾರಾಟಕ್ಕಾಗಿ ಸ್ಯಾಮ್ ಸಂಗ್ ಡಿಸ್ಪ್ಲೇ ನೋಯ್ಡಾ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com