ಬಿಡದಿ ಘಟಕದಲ್ಲಿ ಮತ್ತೆ ಕೆಲಸ ಸ್ಥಗಿತಗೊಳಿಸಿದ ಟೊಯೊಟಾ
ಕಾರ್ಮಿಕ ಸಂಘಟನೆ ಮತ್ತು ವ್ಯವಸ್ಥಾಪಕರ ಮಧ್ಯೆ ಇರುವ ಭಿನ್ನಾಭಿಪ್ರಾಯ ಬಗೆಹರಿಯದಿರುವ ಹಿನ್ನೆಲೆಯಲ್ಲಿ ಜಪಾನ್ ಮೂಲದ ಟೊಯೊಟಾ ಕಂಪೆನಿ ಬಿಡದಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ಮತ್ತೆ ಕೆಲಸ ಸ್ಥಗಿತಗೊಳಿಸಿದೆ.
Published: 25th November 2020 02:23 PM | Last Updated: 25th November 2020 02:23 PM | A+A A-

ಟೊಯೊಟಾ
ನವದೆಹಲಿ: ಕಾರ್ಮಿಕ ಸಂಘಟನೆ ಮತ್ತು ವ್ಯವಸ್ಥಾಪಕರ ಮಧ್ಯೆ ಇರುವ ಭಿನ್ನಾಭಿಪ್ರಾಯ ಬಗೆಹರಿಯದಿರುವ ಹಿನ್ನೆಲೆಯಲ್ಲಿ ಜಪಾನ್ ಮೂಲದ ಟೊಯೊಟಾ ಕಂಪೆನಿ ಬಿಡದಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ಮತ್ತೆ ಕೆಲಸ ಸ್ಥಗಿತಗೊಳಿಸಿದೆ.
ಮೊನ್ನೆ 23ರಿಂದ ಜಾರಿಗೆ ಬರುವಂತೆ ಕರ್ನಾಟಕದ ಬಿಡದಿಯಲ್ಲಿರುವ ಉತ್ಪಾದನೆ ಘಟಕವನ್ನು ಸ್ಥಗಿತಗೊಳಿಸದೆ ವ್ಯವಸ್ಥಾಪಕ ಮಂಡಳಿಗೆ ಬೇರೆ ದಾರಿಯಿಲ್ಲ, ಸದ್ಯದಲ್ಲಿಯೇ ವಿವಾದ ಬಗೆಹರಿಯುವ ಲಕ್ಷಣವಿದೆ. ಕಾರ್ಮಿಕ ಸಂಘಟನೆ ಜೊತೆ ನಿರಂತರ ಮಾತುಕತೆಯಲ್ಲಿದ್ದೇವೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಇತ್ತೀಚೆಗೆ ಬಿಡದಿಯಲ್ಲಿ ಪರಿಸ್ಥಿತಿ ತೀವ್ರ ಬಿಗಡಾಯಿಸಿತ್ತು. ಕಾರ್ಮಿಕ ಸಂಘಟನೆಯ ಕೆಲ ಸದಸ್ಯರು ಅನಧಿಕೃತವಾಗಿ ಮುಷ್ಕರ ಮಾಡುವುದು, ಇತರ ಸದಸ್ಯರಿಗೆ ಅಗೌರವ ತೋರಿಸುವುದು ಇತ್ಯಾದಿ ಮಾಡುತ್ತಿದ್ದರು. ಕೆಲಸ ಮಾಡುವ ಸದಸ್ಯರಿಗೆ ಬೆದರಿಕೆ ಹಾಕುವುದು, ಪ್ರಚೋದನೆ ಮಾಡುವ ಘಟನೆಗಳು ಕೂಡ ನಡೆದಿವೆ. ಕಂಪೆನಿಯ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದರು.
ಇದರಿಂದಾಗಿ ಲಾಕ್ ಡೌನ್ ಮುಗಿದು ಪುನಃ ಘಟಕ ಆರಂಭಗೊಂಡ ಮೇಲೆ ಕೆಲಸ ಮುಂದುವರಿಸಲಾಗದೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಈ ತಂಡದ ಸದಸ್ಯರ ಇಂತಹ ಪ್ರತಿಕೂಲ ಚಟುವಟಿಕೆಗಳು ಕಾರ್ಖಾನೆಯ ಆವರಣದ ಸುತ್ತಲೂ ಬಾಷ್ಪಶೀಲ ಪರಿಸ್ಥಿತಿ ಮತ್ತು ಕಂಪನಿಯ ಇತರ ಉದ್ಯೋಗಿಗಳಿಗೆ ಅಸುರಕ್ಷಿತ ಪರಿಸ್ಥಿತಿಗಳನ್ನು ಸೃಷ್ಟಿಸಿವೆ, ಎಂದು ಕಂಪೆನಿ ಹೇಳಿಕೆ ತಿಳಿಸಿದೆ.