ಜಿಐಸಿ, ಟಿಪಿಜಿ ಕ್ಯಾಪಿಟಲ್ ನಿಂದ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ 7,350 ಕೋಟಿ ರೂ. ಹೂಡಿಕೆ
ಸಿಂಗಾಪುರ ಸ್ವಾಯತ್ತ ಸಂಪತ್ತು ನಿಧಿ ಜಿಐಸಿ ಮತ್ತು ಜಾಗತಿಕ ಖಾಸಗಿ ಷೇರು ಸಂಸ್ಥೆ ಟಿಪಿಜಿ ಕ್ಯಾಪಿಟಲ್ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಹೂಡಿಕೆ ಮಾಡಿದ್ದು ಕಳೆದ ಒಂದು ತಿಂಗಳಲ್ಲಿ ಒಟ್ಟು ಹೂಡಿಕೆ ಮೊತ್ತ 32 ಸಾವಿರದ 197.50 ಕೋಟಿ ರೂಪಾಯಿಗಳಾಗಿವೆ ಎಂದು ಶನಿವಾರ ತಿಳಿಸಿದೆ.
Published: 03rd October 2020 12:31 PM | Last Updated: 03rd October 2020 12:40 PM | A+A A-

ಮುಕೇಶ್ ಅಂಬಾನಿ
ನವದೆಹಲಿ: ಸಿಂಗಾಪುರ ಸ್ವಾಯತ್ತ ಸಂಪತ್ತು ನಿಧಿ ಜಿಐಸಿ ಮತ್ತು ಜಾಗತಿಕ ಖಾಸಗಿ ಷೇರು ಸಂಸ್ಥೆ ಟಿಪಿಜಿ ಕ್ಯಾಪಿಟಲ್ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಹೂಡಿಕೆ ಮಾಡಿದ್ದು ಕಳೆದ ಒಂದು ತಿಂಗಳಲ್ಲಿ ಒಟ್ಟು ಹೂಡಿಕೆ ಮೊತ್ತ 32 ಸಾವಿರದ 197.50 ಕೋಟಿ ರೂಪಾಯಿಗಳಾಗಿವೆ ಎಂದು ಶನಿವಾರ ತಿಳಿಸಿದೆ.
ರಿಲಯನ್ಸ್ ರಿಟೈಲ್ ವೆಂಚುರ್ಸ್ ಲಿಮಿಟೆಡ್(ಆರ್ ಆರ್ ವಿಎಲ್)ನಲ್ಲಿ ಜಿಐಸಿ 5 ಸಾವಿರದ 512.5 ಕೋಟಿ ರೂಪಾಯಿಗಳನ್ನು ಶೇಕಡಾ 1.22ರ ಷೇರುಗಳ ಮೊತ್ತದಲ್ಲಿ ಹೂಡಿಕೆ ಮಾಡಿದರೆ, ಟಿಪಿಜಿ 1,837.5 ಕೋಟಿ ರೂಪಾಯಿಗಳೊಂದಿಗೆ ಶೇಕಡಾ 0.41ರಷ್ಟು ಬಡ್ಡಿಯನ್ನು ಪಡೆದಿದೆ ಎಂದು ಕಂಪೆನಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ರಿಲಯನ್ಸ್ ನಲ್ಲಿ ಎರಡೂ ಕಂಪೆನಿಗಳು ಹೂಡಿಕೆ ಮಾಡಿರುವ ಪೂರ್ವ ಹಣ ಷೇರು ಮೊತ್ತ 4.285 ಲಕ್ಷ ಕೋಟಿಯಾಗಿದೆ. ಜಿಯೊ ಪ್ಲಾಟ್ ಫಾರ್ಮ್ ನಲ್ಲಿ 4 ಸಾವಿರದ 546.8 ಕೋಟಿ ರೂಪಾಯಿ ಹೂಡಿಕೆ ಮಾಡಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಟಿಪಿಜಿಯ ಎರಡನೇ ಹೂಡಿಕೆ ಇದಾಗಿದೆ. ಕಳೆದ ಸೆಪ್ಟೆಂಬರ್ 9ರ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಶೇಕಡಾ 7.28ರಷ್ಟು ಷೇರನ್ನು ಒಟ್ಟು 32 ಸಾವಿರದ 297.50 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ.
ಅಮೆರಿಕದ ಖಾಸಗಿ ಷೇರು ಸಂಸ್ಥೆ ಸಿಲ್ವರ್ ಲೇಕ್ ರಿಲಯನ್ಸ್ ಚಿಲ್ಲರೆ ವ್ಯಾಪಾರದಲ್ಲಿ ಶೇ 2.13 ರಷ್ಟು ಷೇರುಗಳಿಗೆ ಒಟ್ಟು 9,375 ಕೋಟಿ ರೂ, ಜನರಲ್ ಅಟ್ಲಾಂಟಿಕ್ 0.84 ಶೇಕಡಾ ಪಾಲನ್ನು 3,675 ಕೋಟಿ ರೂ.ಗೆ ಪಡೆದುಕೊಂಡಿದೆ, ಮತ್ತು ಕೆಕೆಆರ್ 5,550 ಕೋಟಿ ರೂ, ಅಬುಧಾಬಿ ಮೂಲದ ಮುಬಡಾಲಾ ಇನ್ವೆಸ್ಟ್‌ಮೆಂಟ್ ಕಂ ಶೇ 1.4 ರಷ್ಟು ಪಾಲಿಗೆ 6,247.5 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ.
ಆರ್‌ಆರ್‌ವಿಎಲ್‌ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ಲಿಮಿಟೆಡ್ ಭಾರತದ ಅತಿದೊಡ್ಡ, ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಲಾಭದಾಯಕವಾದ ಚಿಲ್ಲರೆ ವ್ಯಾಪಾರ ಸಂಸ್ಥೆಯಾಗಿದೆ. ಇದು ಸುಮಾರು 7,000 ನಗರ, ಪಟ್ಟಣ ಪ್ರದೇಶಗಳಲ್ಲಿ ಸುಮಾರು 12,000 ಮಳಿಗೆಗಳನ್ನು ಹೊಂದಿದ್ದು, ದಿನಸಿ, ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಡುಪುಗಳ ಪ್ರಮುಖ ವಿಭಾಗಗಳಲ್ಲಿ ಮಳಿಗೆಗಳನ್ನು ಹೊಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಲಯನ್ಸ್ ರಿಟೇಲ್ ನ ಆದಾಯ 1.63 ಲಕ್ಷ ಕೋಟಿಯಾಗಿದೆ.