ಹೆಚ್-1 ಬಿ ವೀಸಾ ನಿಷೇಧಕ್ಕೆ ಅಮೆರಿಕ ನ್ಯಾಯಾಧೀಶರ ತಡೆ: ಐಟಿ ಷೇರು ಏರಿಕೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ಹೆಚ್-1ಬಿ  ವೀಸಾ ಸೇರಿದಂತೆ ಅನೇಕ ವರ್ಕ್ ಪರ್ಮಿಟ್ ಗಳ ನಿರ್ಬಂಧಕ್ಕೆ ಅಮೆರಿಕ ಫೆಡರಲ್ ನ್ಯಾಯಾಧೀಶರು ತಡೆ ನೀಡಿದ್ದಾರೆ. ಈ ಬೆನ್ನಲ್ಲೇ ಐಟಿ ಷೇರುಗಳು ಗಗನಕ್ಕೇರಿವೆ.
ಹೆಚ್-1 ಬಿ ವೀಸಾ ನಿಷೇಧಕ್ಕೆ ಅಮೆರಿಕ ನ್ಯಾಯಾಧೀಶರ ತಡೆ: ಐಟಿ ಷೇರು ಏರಿಕೆ
ಹೆಚ್-1 ಬಿ ವೀಸಾ ನಿಷೇಧಕ್ಕೆ ಅಮೆರಿಕ ನ್ಯಾಯಾಧೀಶರ ತಡೆ: ಐಟಿ ಷೇರು ಏರಿಕೆ

ಮುಂಬೈ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ಹೆಚ್-1ಬಿ  ವೀಸಾ ಸೇರಿದಂತೆ ಅನೇಕ ವರ್ಕ್ ಪರ್ಮಿಟ್ ಗಳ ನಿರ್ಬಂಧಕ್ಕೆ ಅಮೆರಿಕ ಫೆಡರಲ್ ನ್ಯಾಯಾಧೀಶರು ತಡೆ ನೀಡಿದ್ದಾರೆ. ಈ ಬೆನ್ನಲ್ಲೇ ಐಟಿ ಷೇರುಗಳು ಗಗನಕ್ಕೇರಿವೆ.

ಹೊಸ ಹೆಚ್-1ಬಿ ವೀಸಾ, ಹೆಚ್-2ಬಿ, ಜೆ ಹಾಗೂ ಎಲ್ ವೀಸಾಗಳನ್ನು ವರ್ಷಾಂತ್ಯದವರೆಗೆ ತಾತ್ಕಾಲಿಕ ನಿರ್ಬಂಧಕ್ಕೆ ಜೂನ್ ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದರು. ಈ ನಿರ್ಬಂಧ ಆದೇಶ ಜಾರಿಗೆ ಬಂದಿದ್ದರೆ ಭಾರತದ ಐಟಿ ವೃತ್ತಿಪರರಿಗೆ ಹಾಗೂ ಕಂಪನಿಗಳಿಗೆ ಪ್ರತಿಕೂಲ ಪರಿಣಾಮ ಬೀರುತ್ತಿತ್ತು.

ಡೊನಾಲ್ಡ್ ಟ್ರಂಪ್ ತಮ್ಮ ಸಾಂವಿಧಾನಿಕ ಅಧಿಕಾರವನ್ನು ಮೀರಿದ್ದಾರೆ ಹಾಗೂ ಈ ರೀತಿಯ ಬದಲಾವಣೆಗಳು ಸಾರ್ವಜನಿಕ ಹಿತಾಸಕ್ತಿಯಲ್ಲಿರುವುದಿಲ್ಲ ಎಂದು ಕಳೆದ ವಾರ ಫೆಡರಲ್ ನ್ಯಾಯಾಧೀಶರು ಹೇಳಿದ್ದರು. ಪರಿಣಾಮ ಆ.05 ರಂದು ಭಾರತೀಯ ಷೇರು ವಿನಿಮಯದಲ್ಲಿ ಐಟಿ ಷೇರುಗಳು ಗಗನಕ್ಕೇರಿವೆ. ಎಸ್&ಪಿ, ಬಿಎಸ್ಇ ಐಟಿ ಇಂಡೆಕ್ಸ್ ಶೇ.3.30 ರಷ್ಟು ಏರಿಕೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com