ರಾಜ್ಯದ ವಸ್ತುಗಳಿಗೆ ಜಾಗತಿಕ ಮನ್ನಣೆ ದೊರಕಿಸಿ: ಅಮೆಜಾನ್ ಗೆ ಸಿಎಂ ಯಡಿಯೂರಪ್ಪ ಮನವಿ

ರಾಜ್ಯದ ವೈವಿದ್ಯಮಯ ಕರಕುಶಲ ಮತ್ತು ವಿಶೇಷ ವಸ್ತುಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಡಲು ಪ್ರಯತ್ನಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಅಮೆಜಾನ್ ಸಂಸ್ಥೆಗೆ ಮನವಿ ಮಾಡಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜ್ಯದ ವೈವಿದ್ಯಮಯ ಕರಕುಶಲ ಮತ್ತು ವಿಶೇಷ ವಸ್ತುಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಡಲು ಪ್ರಯತ್ನಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಅಮೆಜಾನ್ ಸಂಸ್ಥೆಗೆ ಮನವಿ ಮಾಡಿದ್ದಾರೆ.

ನಗರದಲ್ಲಿಂದು ಅಮೆಜಾನ್ ಫುಲ್ ಫಿಲಮೆಂಟ್ ಕೇಂದ್ರಕ್ಕೆ ಆನ್ ಲೈನ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಚನ್ನಪಟ್ಟಣದಗೊಂಬೆ, ಕಿನ್ನಾಳದ ಕರಕುಶಲ ವಸ್ತುಗಳು, ಮೈಸೂರು ರೇಷ್ಮೆ ಜಗದ್ವಿಖ್ಯಾತವಾಗಿವೆ. ಈ ಎಲ್ಲ ಉತ್ಪನ್ನಗಳನ್ನು ದೇಶದ ಎಲ್ಲಾ ಭಾಗಗಳಿಗೆ ಮತ್ತು ವಿದೇಶಗಳಿಗೆ ತಲುಪಿಸಲು ಸಂಸ್ಥೆ ಶ್ರಮಿಸಬೇಕು. ರಾಜ್ಯದ ವಸ್ತುಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಡಬೇಕು ಎಂದು ಕೋರಿದರು.

2020-2025ರ ಕೈಗಾರಿಕಾ ನೀತಿ ಹೂಡಿಕೆ ಸ್ನೇಹಿಯಾಗಿದ್ದು, ಕೈಗಾರಿಕೆ ಸ್ಥಾಪಿಸುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ .ಅಮೆಜಾನ್ ಸಂಸ್ಥೆಯಿಂದ ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿದ್ದು, ಬಂಡವಾಳ ಹೂಡಿಕೆಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ, ಭೌಗೋಳಿಕ ವೈವಿಧ್ಯತೆಯಲ್ಲಿ ಅತ್ಯಂತ ಶ್ರೀಮಂತವಾಗಿದ್ದು, ಹೂಡಿಕೆಗೆ ವಿಪುಲ ಅವಕಾಶಗಳಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com