ಸೀತಾರಾಮನ್ ಗೆ ಸಿಎಐಟಿ ಪತ್ರ: ಅಮೇಜಾನ್-ಫ್ಲಿಪ್ ಕಾರ್ಟ್ ಫೆಸ್ಟೀವ್ ಸೇಲ್ ನಿಷೇಧಕ್ಕೆ ಆಗ್ರಹ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ (ಸಿಎಐಟಿ) ಪತ್ರ ಬರೆದಿದ್ದು, ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ ಗಳಲ್ಲಿ ಸೀಸನಲ್ ಫೆಸ್ಟೀವ್ ಸೇಲ್ಸ್ ನ್ನು ನಿಷೇಧಿಸುವಂತೆ ಮನವಿ ಮಾಡಿದೆ. 
ಸೀತಾರಾಮನ್ ಗೆ ಸಿಎಐಟಿ ಪತ್ರ: ಅಮೇಜಾನ್-ಫ್ಲಿಪ್ ಕಾರ್ಟ್ ಫೆಸ್ಟೀವ್ ಸೇಲ್ ನಿಷೇಧಕ್ಕೆ ಆಗ್ರಹ
ಸೀತಾರಾಮನ್ ಗೆ ಸಿಎಐಟಿ ಪತ್ರ: ಅಮೇಜಾನ್-ಫ್ಲಿಪ್ ಕಾರ್ಟ್ ಫೆಸ್ಟೀವ್ ಸೇಲ್ ನಿಷೇಧಕ್ಕೆ ಆಗ್ರಹ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ (ಸಿಎಐಟಿ) ಪತ್ರ ಬರೆದಿದ್ದು, ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ ಗಳಲ್ಲಿ ಸೀಸನಲ್ ಫೆಸ್ಟೀವ್ ಸೇಲ್ಸ್ ನ್ನು ನಿಷೇಧಿಸುವಂತೆ ಮನವಿ ಮಾಡಿದೆ. 

ಒಂದೋ ಫೆಸ್ಟೀವ್ ಸೇಲ್ಸ್ ನ್ನು ನಿಷೇಧಿಸಿ ಇಲ್ಲವೇ ಈ ಅವಧಿಯಲ್ಲಿ ಜಿಎಸ್ ಟೀ ಹಾಗೂ ಆದಯ ತೆರಿಗೆ ತಪ್ಪಿಸುವುದರ ಮೇಲೆ ನಿಗಾ ವಹಿಸಲು ವಿಶೇಷ ಕಾರ್ಯಪಡೆಯನ್ನು ನಿಯೋಜಿಸಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಅ.16-21 ವರೆಗೆ ನವರಾತ್ರಿ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟ್ ಫೆಸ್ಟಿವಲ್ ಸೇಲ್ ನ್ನು ನಡೆಸಲು ಮುಂದಾಗಿದೆ. ಅಮೇಜಾನ್ ನಲ್ಲಿ ಅ.17 ರಿಂದ ಸೇಲ್ ನಡೆಯಲಿದ್ದು, ಈ 5-6 ದಿನಗಳ ಅವಧಿಯಲ್ಲಿ ಅಮೇಜಾನ್-ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸುವ ವಸ್ತುಗಳ ಮೇಲೆ ಶೇ.80 ರಷ್ಟು ರಿಯಾಯಿತಿ ದೊರೆಯಲಿದೆ.

ವಾಸ್ತವಿಕ ಬೆಲೆಗಳಿಗಿಂತಲೂ ಶೇ.10-80 ರಷ್ಟು ರಿಯಾಯಿತಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವುದರ ಹಿಂದೆ ಜಿಎಸ್ ಟಿ ಕದಿಯುವ ನಡೆಯಾಗಿದೆ. ಈ ರೀತಿ ಮಾಡುವುದರಿಂದ ಸರ್ಕಾರಕ್ಕೆ ಬರುವ ಜಿಎಸ್ ಟಿ ಆದಾಯಕ್ಕೆ ತೀರವಾಗಿ ಹೊಡೆತ ಬೀಳಲಿದೆ ಎಂದು ಸಿಎಐಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀನ್ ಖಂಡೇಲ್ವಾಲ್ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಅಮೇಜಾನ್-ಫ್ಲಿಪ್ ಕಾರ್ಟ್ ನಂತಹ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆಗಳು ಫೆಸ್ಟೀವ್ ಸೀಸನ್ ನಲ್ಲಿ 19,000 ಕೋಟಿ ರೂ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿ ಶೇ.30 ರಷ್ಟು ಬೆಳವಣಿಗೆ ದಾಖಲಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com